ನೀಲಿಚಿತ್ರ ನೀಡಿದ್ದು ಸಚಿವ ಪಾಲೆಮಾರ್: ಸವದಿ ಸ್ಪಷ್ಟನೆ ♦ ನನಗೂ ನೀಲಿಚಿತ್ರಕ್ಕೂ ಸಂಬಂಧವಿಲ್ಲ: ಪಾಲೆಮಾರ್ ♦
ವಿಧಾನಸಭೆಯಲ್ಲಿಂದು ರಾಜ್ಯದ ಸಮಸ್ಯೆಯ ಕುರಿತು ಬಿರುಸಿನ ಚರ್ಚೆ ನಡೆಯುತ್ತಿದ್ದ ವೇಳೆ ಸಹಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮೊಬೈಲ್ ಮೂಲಕ ಅಶ್ಲೀಲ ಚಿತ್ರ ನೋಡುತ್ತಿದ್ದ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿದೆ. ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ್ ಸದನದೊಳಗೆ ಚರ್ಚೆ ನಡೆಯುತ್ತಿದ್ದ ವೇಳೆ ತಮ್ಮ ಪಾಡಿಗೆ ತಾವು ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ ಕಾಮ ಕಲಾಪದಲ್ಲಿ ತೊಡಗಿದ್ದು ಕಂಡು ಬಂದಿದೆ.
ಗಮನ ಸೆಳೆಯುವ ಸೂಚನೆಯಡಿ ಸಿಂಧಗಿಯಲ್ಲಿ ಪಾಕ್ ಧ್ವಜ ಹಾರಾಟ ಮಾಡಿರುವುದು ಹಾಗೂ ಆರೆಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ಟ ಮಾಡಿರುವ ಪ್ರಚೋದನಕಾರಿ ಭಾಷಣದ ಕುರಿತು ವಿಧಾನಸಭೆಯಲ್ಲಿ ಜಿದ್ದಾಜಿದ್ದಿನ ಚರ್ಚೆ ನಡೆಯುತ್ತಿತ್ತು.ಒಂದೆಡೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸದಸ್ಯರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವೇಳೆ, ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕೂಡಾ ಸದನದಲ್ಲಿ ಎದ್ದುನಿಂತು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರು.
ಆದರೆ ಸಿಂಧಗಿ ಪ್ರಕರಣ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಚೋದನಕಾರಿ ಭಾಷಣದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದರೂ, ಸಹಕಾರಿ ಸಚಿವ ಲಕ್ಷ್ಮಣ ಸವದಿ ತಮ್ಮ ಮೊಬೈಲ್‌ನ್ನು ಎತ್ತಿಕೊಂಡು ಕಾಲಿನ ಮೇಲೆ ಇಟ್ಟು ಅದರಲ್ಲಿದ್ದ ಬ್ಲೂಫಿಲಂನ್ನು ಯಾವುದೇ ರೀತಿಯ ನಾಚಿಕೆ, ಭಯವಿಲ್ಲದೆ ನಿರ್ಭಯದಿಂದ ವೀಕ್ಷಿಸುತ್ತಾ ಮೋಜು ಮಾಡುತ್ತಿದ್ದರು.
ಸದನದೊಳಗೆ ವಿಪಕ್ಷದವರು ಭಟ್ಟರ ವಿರುದ್ಧ ಕಿಡಿಗಾರುತ್ತಿದ್ದರೂ, ಸವದಿ ಮಾತ್ರ ಏನೂ ಆಗದಂತೆಯೇ ತಮ್ಮಷ್ಟಕ್ಕೆ ತಾವು ಬ್ಲೂಫಿಲಂ ನೋಡುತ್ತ ಆನಂದಪಡುತ್ತಿದ್ದರು.
ಸದನದೊಳಗೆ ವಿಪಕ್ಷದವರು ಭಟ್ಟರ ವಿರುದ್ಧ ಕಿಡಿಗಾರುತ್ತಿದ್ದರೂ, ಸವದಿ ಮಾತ್ರ ಏನೂ ಆಗದಂತೆಯೇ ತಮ್ಮಷ್ಟಕ್ಕೆ ತಾವು ಬ್ಲೂಫಿಲಂ ನೋಡುತ್ತ ಆನಂದಪಡುತ್ತಿದ್ದರು.
ಈ ವೇಳೆ ಅವರ ಆಸನದ ಪಕ್ಕಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ್, ಬ್ಲೂಫಿಲಂ ನೋಡಿ, ತಮಗೂ ತೋರಿಸಿ ಎಂದು ಸನ್ನೆ ಮೂಲಕ ಆಜ್ಞೆ ಮಾಡಿ, ಇಬ್ಬರು ಒಟ್ಟಿಗೆ ಕೂತು ಸದನದೊಳಗಿನ ಗದ್ದಲದ ಮಧ್ಯೆ ಮೊಬೈಲ್ ಮೂಲಕ ಕಾಮ ಕಲಾಪ ನೋಡಿ ಆನಂದಿಸುತ್ತಿದ್ದದ್ದು ಕಂಡು ಬಂತು. ಸದನದೊಳಗಿನ ಚರ್ಚೆಯ ಮಧ್ಯೆ ಬ್ಲೂಫಿಲಂ ನೋಡುತ್ತಿದ್ದ ಸಚಿವರಿಬ್ಬರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಜೊತೆಗೆ ಅವರು ಕೂಡಲೇ ರಾಜೀನಾಮೆ ನೀಡಬೇಕು. ಜೊತೆಗೆ ಸಿಎಂ ಸದಾನಂದ ಕೂಡಾ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿಯೇ ಈ ರೀತಿ ಸಚಿವರು ಬಹಿರಂಗವಾಗಿ ಸದನದೊಳಗೆ ಮೊಬೈಲ್ ಮೂಲಕ ನೀಲಿ ಚಿತ್ರ ವೀಕ್ಷಿಸಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡಿದ್ದು, ಪಕ್ಷದೊಳಗೆಯೇ ಅವರ ರಾಜೀನಾಮೆಗೆ ಒತ್ತಡವೆಚ್ಚಿದೆ.
ಶಿಸ್ತಿನ ಪಕ್ಷವೆಂದು ಹೇಳುತ್ತಿರುವ ಬಿಜೆಪಿ ಸರಕಾರದ ಸಚಿವರೇ ಬಹಿರಂಗವಾಗಿ ಸದನದೊಳಗೆ ಬ್ಲೂಫಿಲಂ ನೋಡುತ್ತಿದ್ದದ್ದು, ಆ ಪಕ್ಷ ಯಾವ ಮಟ್ಟಿನಲ್ಲಿದೆ ಎಂಬುದಕ್ಕೆ ಸಾಕ್ಷಿ ಎಂದು ವಿಪಕ್ಷದ ಮುಖಂಡರು ಕಿಡಿಗಾರಿದ್ದು, ರಾಜ್ಯದಲ್ಲಿ ಸರಕಾರದ ಕಾರ್ಯವೈಖರಿಗೆ ಇದು ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.
ಶಿಸ್ತಿನ ಪಕ್ಷವೆಂದು ಹೇಳುತ್ತಿರುವ ಬಿಜೆಪಿ ಸರಕಾರದ ಸಚಿವರೇ ಬಹಿರಂಗವಾಗಿ ಸದನದೊಳಗೆ ಬ್ಲೂಫಿಲಂ ನೋಡುತ್ತಿದ್ದದ್ದು, ಆ ಪಕ್ಷ ಯಾವ ಮಟ್ಟಿನಲ್ಲಿದೆ ಎಂಬುದಕ್ಕೆ ಸಾಕ್ಷಿ ಎಂದು ವಿಪಕ್ಷದ ಮುಖಂಡರು ಕಿಡಿಗಾರಿದ್ದು, ರಾಜ್ಯದಲ್ಲಿ ಸರಕಾರದ ಕಾರ್ಯವೈಖರಿಗೆ ಇದು ಸಾಕ್ಷಿ ಎಂದು ಲೇವಡಿ ಮಾಡಿದ್ದಾರೆ.
0 comments:
Post a Comment