PLEASE LOGIN TO KANNADANET.COM FOR REGULAR NEWS-UPDATES


 ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಉಪನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ಕೆಲಸ ಕಾರ್ಯಗಳನ್ನು ಇತ್ಯರ್ಥಗೊಳಿಸಲು ತಾಲೂಕು ಮಟ್ಟದಲ್ಲಿ ಕಡತ ವಿಲೇವಾರಿ ಮತ್ತು ಶಿಕ್ಷಣ ಅದಾಲತ್ ಕಾರ್ಯಕ್ರಮವನ್ನು ನಿರ್ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ನಿಯೋಜಿತ ಅಧಿಕಾರಿ, ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.
  ತಾಲೂಕು ಮಟ್ಟದಲ್ಲಿ ಕಡತ ವಿಲೇವಾರಿ/ ಶಿಕ್ಷಣ ಅದಾಲತ್‌ಗಾಗಿ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಫೆ. ೧೫ ರಂದು ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಡತ ವಿಲೇವಾರಿ ನಡೆಯಲಿದ್ದು, ಇದಕ್ಕಾಗಿ ಮಂಜುನಾಥ, ಅಧೀಕ್ಷಕ ಹಾಗೂ ಯಚ್ಛರಪ್ಪ, ಪ್ರ.ದ.ಸ. ರನ್ನು ನಿಯೋಜಿಸಲಾಗಿದೆ.  ಫೆ. ೧೭ ರಂದು ಕೊಪ್ಪಳ ಬಿ.ಇ.ಓ. ಕಚೇರಿಯಲ್ಲಿ ನಡೆಯಲಿದ್ದು, ಮೌಲಾಸಾಬ್, ಅಧೀಕ್ಷಕ ಹಾಗೂ ಬಸವರಾಜಸ್ವಾಮಿ, ಪ್ರ.ದ.ಸ.; ಫೆ. ೨೨ ರಂದು ಯಲಬುರ್ಗಾ ಬಿ.ಇ.ಓ. ಕಚೇರಿಯಲ್ಲಿ ನಡೆಯಲಿದ್ದು, ಮಂಜುನಾಥ ಅಧೀಕ್ಷಕ, ಸೋಮಶೇಖರ, ಪ್ರ.ದ.ಸ.; ಫೆ. ೨೪ ರಂದು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಡತ ವಿಲೇವಾರಿ/ಶಿಕ್ಷಣ ಅದಾಲತ್ ನಡೆಸಲು ಮೌಲಾಸಾಬ್ ಅಧೀಕ್ಷಕ, ಬಸವರಾಜಸ್ವಾಮಿ, ಪ್ರ.ದ.ಸ. ರನ್ನು ನಿಯೋಜಿಸಲಾಗಿದೆ.  ನಿಯೋಜಿತ ಸಿಬ್ಬಂದಿಗಳು ನಿಗದಿತ ದಿನಾಂಕದಂದು ಆಯಾ ಬಿ.ಇ.ಓ. ಕಚೇರಿಗೆ ಹಾಜರಾಗಿ ವಿಲೇವಾರಿ ಮಾಡಿದ ಪ್ರಕರಣಗಳ ಅಂಕಿ-ಅಂಶಗಳನ್ನೊಳಗೊಂಡ ವರದಿಯನ್ನು ಉಪನಿರ್ದೇಶಕರಿಗೆ ಸಲ್ಲಿಸಬೇಕು.  ಜಿಲ್ಲಾ ಮಟ್ಟದ ಕಡತ ವಿಲೇವಾರಿ/ಶಿಕ್ಷಣ ಅದಾಲತ್ ಅನ್ನು ಮಾರ್ಚ್ ೦೨ ರಂದು ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

0 comments:

Post a Comment

 
Top