PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ. ೪. ಪರಮಪೂಜ್ಯ ಶ್ರೀ ಮ. ನಿ. ಪ್ರ. ಸ್ವ. ಅಭಿನವ ಶ್ರೀ ಗವಿಸಿಧ್ಧೇಶ್ವರ ಮಹಾಸ್ವಾಮಿಗಳು ವಾಲ್ಮೀಕಿ ನಾಯಕ ಹಾಗೂ ಕನಕ ಕ್ಯಾಲೆಂಡರ್ ಗಳನ್ನು ಬಡುಗಡೆ ಗೊಳಿಸಿದರು.ವಾಲ್ಮೀಕಿ ನಾಯಕ ಮತ್ತು ಕನಕ ಕ್ಯಾಲೆಂಡರಗಳು ಉತ್ತಮವಾಗಿ ಮೂಡಿ ಬಂದಿವೆ ಎಂದರು. ವಾಲ್ಮೀಕಿ ನಾಯಕ ಸಮಾಜದ                       ಕುರಿತು ಆ ಸಮಾಜದ ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮ ಆದಿಯಾಗಿ ಐತಿಹಾಸಿಕ ಪುರುಷರ ಮಾಹಿತಿ ಹಾಗೂ ಭಾವಚಿತ್ರಗಳನ್ನು ಹೊಂದಿರುವ ವಾಲ್ಮೀಕಿ ನಾಯಕ ಕ್ಯಾಲೆಂಡರನ್ನು ಗಂಗಾವತಿಯ ಶ್ರೀ ವಾಲ್ಮೀಕಿ ನಾಯಕ ಹಕ್ಕ ಬುಕ್ಕರ ವೇದಿಕೆ ತನ್ನ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹೊರತಂದಿದೆ ಎಂದು ಸಂಘದ ಅಧ್ಯಕ್ಷ ಪಾಳೇಗಾರ ರಾಜೇಶ ನಾಯಕ ತಿಳಿಸಿದರು.                   
           ಕನಕ ಮಾಸ ಪತ್ರಿಕೆಯ ವಾರ್ಷಿಕ ವಿಶೇಷ ಕ್ಯಾಲೆಂಡರ್ ಕನಕ ಕುರುಬ ಸಮಾಜದ ಬಹಳಷ್ಟು ಮಾಹಿತಿ ಹಾಗೂ ಆ ಸಮಾಜದ ಐತಿಹಾಸಿಕ ಪುರುಷರ ಭಾವಚಿತ್ರಗಳನ್ನು ಹೊಂದಿವೆ. ಈ ಸಂದರ್ಭದಲ್ಲಿ ವಿನೂತನ ಶಿಕ್ಷಣ ಸೇವಾ ಸಂಸ್ಥೆ, ಅಳವಂಡಿಯ ಅದ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಮತ್ತು ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಎರಡೂ ಕ್ಯಾಲೆಂಡರಗಳು ಎರಡು ಸಮಾಜದ ಕುರಿತು ಉತ್ತಮ ಮಾಹಿತಿಯನ್ನು ಹೊಂದಿವೆ ಎಂದರು. ವೀರಕನ್ನಡಿಗ ಯುವಕ ಸಂಘದ ಶಿವಾನಂದ ಹೊದ್ಲೂರ, ಗಂಡುಗಲಿ ಕುಮಾರರಾಮ ಯುವಕ ಸಂಘ ಗಂಗಾವತಿಯ ಉಪಾಧ್ಯಕ್ಷ ಬಸವರಾಜ ನಾಯಕ ಮರಿಯಮ್ಮನಹಳ್ಳಿ, ಕನಕ ಕ್ಯಾಲೆಂಡರನ ಸಂಪತ್ ಕುಮಾರ ತೋಂಟಾಪೂರ, ಶಶಿಕುಮಾರ ಅರ್ಕಲ್ ಮುಂತಾದವರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top