PLEASE LOGIN TO KANNADANET.COM FOR REGULAR NEWS-UPDATES


ಪಲ್ಲೇದ ಓಣಿಯ ಗೆಳೆಯರ ಬಳಗದಿಂದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ರೊಟ್ಟಿಗಳನ್ನು ಅರ್ಪಿಸಲಾಯಿತು. ಓಣಿಯ ಮನೆ ಮನೆಗಳವರು ಜಾತ್ರೆಗೆಂದೆ ತಯಾರಿಸಿದ ರೊಟ್ಟಿಗಳನ್ನು ಜವಾಹರ ರಸ್ತೆಯ ಬಸವಣ್ಣ ದೇವರ ಗುಡಿಯ ಕಲ್ಯಾಣ ಮಂಟಪದಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸುಮಾರು ೫೦೦೦ಕ್ಕೂ ಹೆಚ್ಚು ರೊಟ್ಟಿಗಳನ್ನು ಈ ಸಂದರ್ಭದಲ್ಲಿ ಮಠಕ್ಕೆ ಅರ್ಪಿಸಲಾಯಿತು.  
ಈ ಸಂದರ್ಭದಲ್ಲಿ ಓಣಿಯ ಹಿರಿಯರಾದ ಡಾ.ಬಸಯ್ಯ ಸಸಿಮಠ, ಸಿದ್ದಲಿಂಗಪ್ಪ ಪಲ್ಲೇದ, ಮಲ್ಲಿಕಾರ್ಜುನ ಸಜ್ಜನ, ಮಲ್ಲಪ್ಪ ಪಲ್ಲೇದ,  ಗವಿಸಿದ್ದಪ್ಪ ಹಳ್ಳಿಗುಡಿ, ಗವಿಸಿದ್ದಪ್ಪ ಪಲ್ಲೇದ, ರಾಜೇಶ ಸಸಿಮಠ, ಪ್ರಭು ಅಂಗಡಿ,ಚಂದ್ರು ಉತ್ತಂಗಿ, ಮಹಾಂತೇಶ ಪಾಟೀಲ್, ವಿರೇಶ ಪಲ್ಲೇದ,ಗವಿಸಿದ್ದಪ್ಪ ಪಲ್ಲೇದ,ಶರಣು ಸಜ್ಜನ್, ಉಮೇಶ ಉಮಚಗಿ,ಸಿದ್ದಪ್ಪ ಪಲ್ಲೇದ,ಮಂಜಪ್ಪ ಹಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top