PLEASE LOGIN TO KANNADANET.COM FOR REGULAR NEWS-UPDATES



ಕಾಮನೂರು: ಕೊಪ್ಪಳ ತಾಲೂಕಿನ ಇರಕಲಗಡ ವಲಯದ ಸ.ಹಿ.ಪ್ರಾ.ಶಾಲೆ, ಕಾಮನೂರಲ್ಲಿ ಏಳನೆ ತರಗತಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಭೀಮನೂರ ಶಾಲೆಯ ವಿದ್ಯಾರ್ಥಿನಿ ಕು.ಜ್ಯೋತಿ ಕಾಮನೂರು ಶಾಲೆಯ ಮಂಜುನಾಥ ಉದ್ಘಾಟಿಸಿದರು. ವಲಯದ ೨೦ ಶಾಲೆಗಳ ಸುಮಾರು ೬೦೦ ವಿದ್ಯಾರ್ಥಿಗಳು ವಿವಿಧ ಶಾಲೆಗಳಲ್ಲಿ ಪಾಲ್ಗೋಂಡಿದ್ದರು. ಕಾರ್ಯಕ್ರಮ ಕುರಿತು ಸೋಮಶೇಖರ ಚ. ಹರ್ತಿ ಶಿಕ್ಷಣ ಸಂಯೋಜಕರು ಮಾತನಾಡಿ ಒಂದೇ ದಿನದಲ್ಲಿ ೧೦ ಶಾಲೆಗಳಿಗೆ ಅಕ್ಕ ಪಕ್ಕದ ೧೦ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿ ಭಾಷಾ ವಿಷಯಗಳು ಕೋರ್ ವಿಷಯಗಳು ಹಾಗೂ ಸಾಮಾನ್ಯ ಜ್ಙಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ರಚಿಸಿ ಕಾರ್ಯಕ್ರಮ ನಡೆಸಲಾಯಿತು.
ಇಂತಹ ಕಾರ್ಯಕ್ರಮದಿಂದಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಕಣ್ಣ ಮು.ಶಿ. ವಹಿಸಿದ್ದರು, ಶಾರದಾ ರಜಪೂತ, ವೀಣಾ ಸ.ಶಿ. ಯಲಮಗೆರಿ ಕಾರ್ಯಕ್ರಮ ನಡೆಸಿದರು. ನಾಗರಾಜ, ಸತೀಶ, ರತ್ನಮ್ಮ, ವಿಶ್ವನಾಥ ಶಿಕ್ಷಕರು ಪಾಲ್ಗೋಂಡಿದ್ದರು.  ಪೂರ್ಣಿಮಾ ಸ.ಶಿ. ಸ್ವಾಗತಿಸಿದರು, ಆಶಾ ಸ.ಶಿ. ವಂದಿಸಿದರು.

Advertisement

0 comments:

Post a Comment

 
Top