
ಭಾನುವಾರ ಇಲ್ಲಿಯ ಎಪಿಎಂಸಿ ಆವರಣದಿಂದ ಆರಂಭಗೊಂಡ ಜಾಥಾಗೆ ಆಡಳಿತ ಮಂಡಳಿಯ ಸೂರಿಬಾಬು ಚಾಲನೆ ನೀಡಿದರು.ಜಾಥಾದುದ್ದಕ್ಕೂ ಸರಳ ಜೀವನ ಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ `ಶ್ರೇಷ್ಠತೆಗೆ ಸರಳತೆಯೆ ಮೂಲ`, `ಸರಳತೆ ಎಂದರೆ ಬಾಹ್ಯದಲ್ಲಿ ವ್ಯಕ್ತವಾಗುವ ವೇಷಭೂಷಣಗಳಿಗೆ ಸೀಮಿತವಲ್ಲ, ಮೂಲಭೂತವಾದ ಸರಳತೆ ಆಂತರಿಕವಾಗಿದೆ`, ಮನುಷ್ಯರ ಸರಳ ನಡೆ, ನುಡಿಗಳು ಆವರ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸುತ್ತವೆ`, `ಬೆಂಕಿ ದೇಹವನ್ನು ಹಾಳುಮಾಡಿದರೆ, ಕುಡಿತವು ದೇಹ ಹಾಗೂ ಆತ್ಮವನ್ನು ನಾಶ ಮಾಡುತ್ತದೆ`, ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಜಾಥಾ ಆರ್. ಜಿ. ರಸ್ತೆ, ಹಳೆಯ ಬಸ್ ನಿಲ್ದಾಣ, ಕನಕದಾಸ ವೃತ್ತ, ಗ್ರಾಪಂ ಕಚೇರಿ ಮಾರ್ಗದ ಮೂಲಕ ಪೊಲೀಸ್ ಠಾಣೆಯವರೆಗೆ ಸಾಗಿತು.
0 comments:
Post a Comment
Click to see the code!
To insert emoticon you must added at least one space before the code.