ದುಬೈ:2011 ಡಿಸೆಂಬರ್ 30ನೇ ಶುಕ್ರವಾರ ದುಬಾಯಿಯ ಸತ್ವಾದಲ್ಲಿ ಇರುವ ಸಫಾ ಪಾರ್ಕಿನಲ್ಲಿ ವೈವಿಧ್ಯಮಯ ಹೂವುಗಳಿಂದ ಕಂಗೊಳಿಸುವ ಹಚ್ಚ ಹಸಿರಿನ ಹುಲ್ಲು ಹಾಸಿನ ಮೇಲೆ ದಿನಪೂರ್ತಿ ಆಹ್ಲಾದಕರ ವಾತಾವರಣದಲ್ಲಿ ಬೆಳಗಿನಿಂದ ಸಂಜೆಯವರೆಗೆ,ಯು.ಎ.ಇ.ಯಲ್ಲಿ ನೆಲೆಸಿರುವ ಬಂಟ ಬಾಂಧವರು ಒಟ್ಟು ಸೇರಿ ವಿಹಾರ ಕೂಟದಲ್ಲಿ ಸಂಭ್ರಮಿಸಿದರು.
ಯು.ಎ.ಇ.ಬಂಟ್ಸ್ ಸಂಘಟನೆಯ ಸಂಘಟಕರಾದ ಸರ್ವೋತ್ತಮ ಶೆಟ್ಟಿಯವರು ಯು.ಎ.ಇ. ಯ ವಿವಿಧ ಕಡೆಗಳಿಂದ ಆಗಮಿಸಿದ ಬಂಧು ಮಿತ್ರರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ದಿನಪೂರ್ತಿ ನಡೆಸಲಾದ ವೈವಿಧ್ಯಮಯ ಸ್ಪರ್ಧೆಗಳಿಗೆ ವಿವಿಧ ತಂಡಗಳಾಗಿ ರಚಿಸಿ ಸ್ಪರ್ಧೆಗಳನ್ನು ಆಯೋಜಿಸಿದ ಜವಬ್ಧಾರಿಯನ್ನು ರೇಶ್ಮಾ ದೀವೇಶ್ ಆಳ್ವ, ಜಯಶ್ರೀ ಸಂತೋಷ್ ಶೆಟ್ಟಿ,ಚಿತ್ರ ಪ್ರಸನ್ನಾ ಶೆಟ್ಟಿ ಮತ್ತು ದೇವಿಕಾ ಗಣನಾಥ್ ಮಲ್ಲಿ ಇವರುಗಳು ವಹಿಸಿ ಕೊಂಡಿದ್ದರು.
ಐದು ವರ್ಷದ ಒಳಗಿನ ಮಕ್ಕಳಿಗೆ ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆ ಐದರಿಂದ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಚಿತ್ರ ರಚನೆ ಮತ್ತು ಕಲರಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು.ಹಿರಿಯರಿಗೆ "ಪಿಕ್ನಿಕ್ ಪೇರ್"ಪ್ರತಿಯೊಬ್ಬರಿಗೂ ಒಂದೊಂದು ಸಂಖ್ಯೆಗಳನ್ನು ನೀಡಿ ಅವರ ಜೊತೆಗಾರ, ಜೊತೆಗಾರ್ತಿಯನ್ನು ಸಂಜೆಯೊಳಗೆ ಹುಡುಕುವ ಸ್ಪರ್ಧೆಯನ್ನು ಪ್ರಥಮ ಕಾರ್ಯಕ್ರಮವಾಗಿ ಆರಂಭಿಸಲಾಯಿತು.ಚಿಕ್ನಿ ಚಮೇಲಿ,ಚಮಕ್ ಚಮೇಲಿ,ಶೀಲಾ,ಮುನ್ನಿ,ಜಲೇಬಿ ಬಾಯಿ ಮತ್ತು ಶಾಲು ಹೆಸರಿನಲ್ಲಿ ತಂಡಗಳನ್ನು ರಚಿಸಿ "ಜಿಂಗಲ್ ಮಿಂಗಲ್"ವಿಭಾಗದಲ್ಲಿ ಉಡುಪುಗಳನ್ನು ಸೇರಿಸಿ,ಉದ್ದನೆಯ ಚೈನ್,ಎತ್ತರದ ಯೂಮನ್ ಟವರ್ ಮತ್ತು "ಉಲ್ಲಾಲ"ವಿಭಾಗದಲ್ಲಿ ಕೊರಿಯೋಗ್ರಾಫಿ ನೃತ್ಯ,ನ್ಯೂಸ್ ಪೇಪರ್ ಡ್ರೆಸ್ಸ್,ದಂ ಶರಾಡ್ ವಿಭಾಗದಲ್ಲಿ ಫುಡ್ ಬಜಾರ್, ಚಲನ ಚಿತ್ರದ ಹೆಸರು,ಚಲನ ಚಿತ್ರದ ಗೀತೆಯನ್ನು ತಿಳಿಸುವ ಸ್ಪರ್ಧೆ ಇತ್ಯಾದಿ ನೂತನ ಅಕರ್ಷಕ ಸ್ಪರ್ಧೆಗಳು ಗುಂಪು ಗುಂಪಿನ ಮದ್ಯೆ ಅತ್ಯಂತ ಪೈಪೋಟಿಯಿಂದ ದಿನಪೂರ್ತಿ ನಡೆದು ಭಾಗವಹಿಸಿದ ಎಲ್ಲರು ಸಂತಸ ಪಟ್ಟರು.ತುಳು ನಾಡಿನ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಅತ್ಯಂತ ಉತ್ಸಾಹದಿಂದಲೇ ನಡೆಯಿತು.
ಮಧ್ಯಾಹ್ನದ ರುಚಿಕರ ಭೋಜನದ ವ್ಯವಸ್ಥೆ ಉಡ್ ಲ್ಯಾಂಡ್ ರೆಸ್ಟೋರೆಂಟ್ ನವರದಾಗಿತ್ತು. ದಿನಪೂರ್ತಿ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಚಿಕ್ನಿ ಚಮೇಲಿ ಪ್ರಥಮ ಸ್ಥಾನ ಪಡೆದು ದ್ವಿತೀಯ ಸ್ಥಾನದಲ್ಲಿ ಚಮಕ್ ಚಮೇಲಿ ಪಡೆಯಿತು ಕೊನೆಯಲ್ಲಿ ಬಹುಮಾನ ವಿತರಣೆ ನಡೆಯಿತು.
ವಿಹಾರ ಕೂಟಕ್ಕೆ ಡಾ.ಚಂದ್ರಕುಮಾರಿ ಆರ್.ಶೆಟ್ಟಿ ಮತ್ತು ಡಾ.ನೀಮಾ ಶರದ್ ಶೆಟ್ಟಿ,ಡಾ. ಶರದ್ ಶೆಟ್ಟಿ,ಸೀಮಾ ನಿರ್ಮನ್ ಶೆಟ್ಟಿಯವರು ತಮ್ಮ ಇನ್ನಿತರ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದರು.
ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಾದ,ಗಲ್ಫ್ ಕನ್ನಡಿಗದ ಅಶೋಕ್ ಬೆಳ್ಮಣ್,ನಮ್ಮ ಟಿ.ವಿ.ಯ ನವೀನ್ ರವರು ವಿಹಾರಕೂಟದಲ್ಲಿ ಭಾಗಿಗಳಾಗಿದ್ದು ತಮ್ಮ ಮಾಧ್ಯಮ ಸೇವೆಯನ್ನು ಸಲ್ಲಿಸಿದ್ದಾರೆ.
ಯು.ಎ.ಇ.ಬಂಟ್ಸ್ 2011ರ ಕಾರ್ಯಕಾರಿ ಸಮಿತಿಯವರಾದ ಜೀವನ್ ರಾಜ ಶೆಟ್ಟಿ ದೀಪಶ್ರೀ ಶೆಟ್ಟಿ,ಸುಭಾಶ್ ಚೌಟ,ಸ್ಮಿತಾ ಚೌಟ,ಜಿತೇಂದ್ರ ಶೆಟ್ಟಿ,ಸುರೇಕಾ ಶೆಟ್ಟಿ,ಮಹೇಶ್ ಶೆಟ್ಟಿ,ಹೇಮಾ ಶೆಟ್ಟಿ,ಅನಿಲ್ ಶೆಟ್ಟಿ,ರೇಖಾ ಶೆಟ್ಟಿ,ಅಶ್ವಿತ್ ಶೆಟ್ಟಿ,ಹರಿಣಿ ಶೆಟ್ಟಿ,ರಶ್ಮೀಕಾಂತ್ ಶೆಟ್ಟಿ,ಮೆಘ್ನಾ ಶೆಟ್ಟಿ,ಪ್ರಸಾದ್ ಶೆಟ್ಟಿ ಮತ್ತು ಶೋಭಾ ಶೆಟ್ಟಿ ಇವರುಗಳ ಪೂರ್ವ ತಯಾರಿ,ಶ್ರಮದ ಫಲವಾಗಿ ಸರ್ವೋತ್ತಮ ಶೆಟ್ಟಿಯವರ ಮಾರ್ಗದರ್ಶನದಲ್ಲಿ ವಿಹಾರಕೂಟ ಯಶಸಿಯಾಗಿತ್ತು.
0 comments:
Post a Comment