PLEASE LOGIN TO KANNADANET.COM FOR REGULAR NEWS-UPDATES





ಇಟಗಿ(ಕುಕನೂರ), ಡಿ. ೨೨: ಇಲ್ಲಿನ ಮಹಾದೇವ ದಂಡನಾಯಕನ ವೇದಿಕೆಯಲ್ಲಿ ಗುರುವಾರ ಸಂಜೆ `೯೦೦ವರ್ಷಗಳ ವರ್ಷಾಚರಣೆ ಹಾಗೂ ಇಟಗಿ ಉತ್ಸವಕ್ಕೆ ಸರಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಚಾಲನೆ ನೀಡಿದರು.
ಇಟಗಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಇಂತಹ ಉತ್ಸವಗಳು ಗ್ರಾಮೀಣ ಜನರ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯಾಗಿ ಮಾರ್ಪಡುತ್ತಿರುವುದು ಗುಣಾತ್ಮಕ ಬೆಳವಣಿಗೆಯಾಗಿದೆ ಎಂದರು.
ಉತ್ಸವಗಳಲ್ಲಿ ನಾವು ನಮ್ಮ ಒಂದು ವರ್ಷದ ಪ್ರಗತಿ ಮತ್ತಿತರ ವಿಷಯಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ಇಂತಹ ವೇದಿಕೆಯಲ್ಲಿ ಪ್ರತಿಭೆಗಳಿಗೆ ತಮ್ಮ ಪ್ರತಿಭೆ ತೋರಿಸಲು ಉತ್ತಮ ಅವಕಾಶ ಇಲ್ಲಿ ದೊರೆಯಲಿದೆ ಎಂದರು.
ಗ್ರಾಮೀಣ ಭಾಗದಲ್ಲಿರುವ ಯುವಕರು ತಮ್ಮಲ್ಲಿರುವ ಕ್ರೀಯಾಶೀಲತೆಯನ್ನು ಒರೆಗೆ ಹಚ್ಚಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ. ನಮ್ಮಲ್ಲಿರುವ ಭಿನ್ನತೆಯನ್ನು ಮರೆತು ಭಾತೃತ್ವ ವೃದ್ಧಿಗೆ ಇಂತಹ ವೇದಿಕೆಗಳು ಪೂರಕವಾಗಲಿವೆ ಎಂದ ಅವರು, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಪ್ರತಿವರ್ಷ ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದಂಡನಾಯಕ ದೇವಾಲಯದ ಇಟಗಿ ಉತ್ಸವ ಆಚರಿಸುತ್ತಾ ಬಂದಿರುವುದು ಸ್ವಾಗತಾರ್ಹ ಎಂದರು.
ಇದೇ ಸಂದರ್ಭದಲ್ಲಿ ದೇವಾಲಯ ಚಕ್ರವರ್ತಿಗೆ ೯೦೦ ವರ್ಷಗಳ ವರ್ಷಾಚರಣೆ ಕೃತಿಯನ್ನು ಆರ್ಕಲಾಜಿಕಲ್ ಸರ್ವೇ ಆಫ್ ಇಂಡಿಯಾದ ರಿಜನಲ್ ಡೈರೆಕ್ಟರ್ ಡಾ.ಎಸ್.ವಿ.ವೆಂಕಟೇಶಯ್ಯ ಬಿಡುಗಡೆಗೊಳಿಸಿದರು. ರಾಜಕೀಯ ಸ್ಪೋಟ ವಿಶೇಷ ಸಂಚಿಕೆಯನ್ನು ಡಾ. ಮಹಾಂತೇಶ ಮಲ್ಲನಗೌಡರ ಬಿಡುಗಡೆಗೊಳಿಸಿದರು.
ನಂತರ ೯೦೦ ವರ್ಷಗಳ ವರ್ಷಾಚರಣೆ ಮತ್ತು ಇಟಗಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಕೆ.ಬಿ.ಬ್ಯಾಳಿ, ಆರ್ಕಲಾಜಿಕಲ್ ಸರ್ವೇ ಆಫ್ ಇಂಡಿಯಾದ ರಿಜನಲ್ ಡೈರೆಕ್ಟರ್ ಡಾ.ಎಸ್.ವಿ.ವೆಂಕಟೇಶಯ್ಯ ಹಿರಿಯ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ಇಟಗಿ ಗ್ರಾ.ಪಂ.ಅಧ್ಯಕ್ಷ ಗವಿಸಿದ್ದಪ್ಪ ಗುಳಗಣ್ಣವರ, ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷೆ ಪ್ರಭಾವತಿ ರಾಮಚಂದ್ರಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಾಧಿಕ ಅಲಿ, ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ, ಪ್ರಾಚಾರ್ಯ ಹನುಮಂತಪ್ಪ ಅಂಡಗಿ, ನಾಗರಿಕ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ಪತ್ರಕರ್ತ ಸಿದ್ದಪ್ಪ ಹಂಚಿನಾಳ, ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ, ಪದಾಧಿಕಾರಿಗಳಾದ ಹನುಮಂತ ಹಳ್ಳಿಕೇರಿ, ಭೀಮಪ್ಪ ನಾಯ್ಕರ ಮತ್ತಿತರರು ಭಾಗವಹಿಸಿದ್ದರುa

Advertisement

0 comments:

Post a Comment

 
Top