ಕೊಪ್ಪಳ ಡಿ. : ಮುನಿರಾಬಾದ್‌ನ ಕೃಷ್ಣ ಅನಿಲ್ ಕರಣಿ ಅವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯಾಗಿರುವ ಅದೇ ಗ್ರಾಮದ ಕೆ.ಆರ್. ಸಾಗರ್ ಎಂಬಾತನನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಬಂಧಿಸಿ, ಆರೋಪಿಯಿಂದ ೪೬೨೦೦ ಬೆಲೆಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮುನಿರಾಬಾದ್‌ನ ಕೃಷ್ಣ ಅನಿಲ್ ಕರಣಿ ಅವರು ಕಳೆದ ಅಕ್ಟೋಬರ್ ೧೯ ರಂದು ಕೆಲಸಕ್ಕೆಂದು ಹೊಸಪೇಟೆಗೆ ಹೋಗಿ ಮಧ್ಯಾಹ್ನ ವಾಪಸ್ ಬರುವಷ್ಟರಲ್ಲಿ ಮನೆಯ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಅಲ್ಲದೆ ಮನೆಯಲ್ಲಿದ್ದ ಸುಮಾರು ೪೬೨೦೦ ರೂ. ಬೆಲೆಬಾಳುವ ಚಿನ್ನ, ಬೆಳ್ಳಿ ಮುಂತಾದ ಒಡವೆಗಳ ಕಳ್ಳತನವಾಗಿರುತ್ತದೆ. ಪ್ರಕರಣದ ಬಗ್ಗೆ ಕೃಷ್ಣ ಅವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ೨೨ ವರ್ಷದ ಕೆ.ಆರ್. ಸಾಗರ್ ತಂದೆ ಕೆ. ರಾಮಚಂದ್ರ ಎಂಬಾತ ಕದ್ದ ಒಡವೆಗಳನ್ನು ಊರಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ಡಿ. ೧೦ ರಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ೪೬೨೦೦ ರೂ. ಬೆಲೆಬಾಳುವ ಚಿನ್ನ ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಗ್ರಾಮೀಣ ಸಿಪಿಐ ವೆಂಕಟಪ್ಪ ನಾಯಕ, ಮುನಿರಾಬಾದ್ ಪಿ.ಎಸ್.ಐ. ವಿಶ್ವನಾಥ ಹಾಗೂ ಸಿಬ್ಬಂದಿಗಳಾದ ನಿಸಾರ್ ಅಹ್ಮದ್ ಖಾಜಿ, ಸುಭಾಸ್, ಈಶಪ್ಪ, ಮಹಾಂತಗೌಡ, ಮಾರುತಿ, ಸಿದ್ದಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್, ಡಿ.ವೈಎಸ್‌ಪಿ ವಿಜಯ ಡಂಬಳ ಇವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ .
0 comments:
Post a Comment