PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ.  : ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿರುವ ಇಟಗಿ ಉತ್ಸವದ ಅಂಗವಾಗಿ ಡಿ. ೨೩ ರಂದು ಮಧ್ಯಾಹ್ನ ೨ ಗಂಟೆಗೆ ಇಟಗಿಯ ದೇವಸ್ಥಾನದಿಂದ ಮುಖ್ಯ ದ್ವಾರದವರೆಗೆ ವೈವಿಧ್ಯಮಯ ಕಲಾತಂಡಗಳನ್ನೊಳಗೊಂಡ ಜನಪದ ಕಲಾವಾಹಿನಿ ಮೆರವಣಿಗೆ ನಡೆಯಲಿದೆ.
       ಜನಪದ ಕಲಾವಾಹಿನಿಯ ಉದ್ಘಾಟನೆಯನ್ನು ಸಂಸದ ಶಿವರಾಮಗೌಡ ಅವರು ನೆರವೇರಿಸಲಿದ್ದು, ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಸಂಸದರಿಗೆ ಸಾತ್ ನೀಡುವರು.  ಮೆರವಣಿಗೆಯಲ್ಲಿ ಇಟಗಿಯ ಪ್ಯಾಟಿ ಬಸವೇಶ್ವರ ಕರಡಿ ಮಜಲು ಹಾಗೂ ಭಜನಾ ಸಂಘ ಮತ್ತು ಗೊರ್‍ಲೆಕೊಪ್ಪದ ಕಟ್ಟಿ ಬಸವೇಶ್ವರ ಕರಡಿ ಮಜಲು ಭಜನಾ ಸಂಘದಿಂದ ಕರಡಿ ಮಜಲು, ಬಿನ್ನಾಳದ ಶ್ರೀ ಮಾರುತಿ ಹಲಗಿ ಮೇಳ ಸಂಘದಿಂದ ಹಲಗಿಮೇಳ, ಯಲಬುರ್ಗಾದ ರೇವಣ್ಣಪ್ಪ ಹಿರೇಕುರುಬರ ಅವರಿಂದ ಡೊಳ್ಳು ಕುಣಿತ, ಸಿದ್ಧಾಪುರದ ಮಾರುತಿ ವಿಭೂತಿ ಅವರಿಂದ ಹಗಲು-ವೇಷ, ಇಟಗಿಯ ಓಂ ಗುರೂಜಿ ಯುವಕ ಸಂಘದಿಂದ ಕೋಲಾಟ, ಇಟಗಿಯ ತಿಪ್ಪಣ್ಣ ಈಶಪ್ಪ ಭಜಂತ್ರಿರಿಂದ ಹಲಗಿ ಮಜಲು, ಶಾಂಭವಿ ಕಲಾಮೇಳದಿಂದ ಜಾಂಝಮೇಳ, ಮಹೇಶ್ವರ ಭಜನಾ ಸಂಘ ಹಾಗೂ ಗಾಳಿದುರ್ಗಾದೇವಿ ಭಜನಾ ಸಂಘದಿಂದ ಭಜನಾ ಮೇಳ, ಕೆಲೂರಿನ ಶಾರದಾ ಕರಡಿ ಮಜಲು ತಂಡದಿಂದ ಕರಡಿಮಜಲು, ಮಂಡ್ಯಾದ ಸಿದ್ದೇಗೌಡ ಕೋಡಿಯಾಳ ತಂಡದಿಂದ ಗಾರುಡಿ ಗೊಂಬೆ, ದೇವರಾಜ ಮತ್ತು ತಂಡದಿಂದ ಸೋಮನಕುಣಿತ, ಗೊಂಡಬಾಳದ ಬೆಟ್ಟದಪ್ಪ ತಂಡದಿಂದ ಡ್ರಮ್ ಸೆಟ್, ಹನುಮಾಪುರದ ಕೆಂಚಪ್ಪ ತಂಡದಿಂದ ಡೊಳ್ಳು ಕುಣಿತ, ಬಳ್ಳಾರಿ ಜಿಲ್ಲೆ ಕಂಪ್ಲಿಯ ಶಿಕಾರಿ ರಾಮು ಮತ್ತು ತಂಡದಿಂದ ತಾಷಾರಂಡೋಲ, ಕೂಡ್ಲಗಿಯ ವೀಣಾ ಕಲಾಸಂಘದಿಂದ ಮಹಿಳಾ ಡೊಳ್ಳು, ಕೊಪ್ಪಳದ ಬಸವರಾಜ ವಿಭೂತಿ ತಂಡದಿಂದ ಹಗಲು-ವೇಷ, ಕಿನ್ನಾಳದ ಕಾಶಿ ವಿಶ್ವನಾಥ ಕಲಾ ತಂಡದಿಂದ ಕರಡಿ ಮಜಲು ತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಲಿವೆ.
ಇಟಗಿ ಉತ್ಸವ : ಜಿಲ್ಲಾ ಉಸ್ತುವಾರಿ ಸಚಿವರಿಂದ ಡಿ. ೨೩ ರಂದು ಉದ್ಘಾಟನೆ
ಕೊಪ್ಪಳ ಡಿ. ೨೨ (ಕ.ವಾ): ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುವ ಇಟಗಿ ಉತ್ಸವದ ಉದ್ಘಾಟನಾ ಸಮಾರಂಭ ಡಿ. ೨೩ ರಂದು ಮಧ್ಯಾಹ್ನ ೩ ಗಂಟೆಗೆ ಇಟಗಿಯಲ್ಲಿ ಉತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಮಹಾದೇವ ದಂಡನಾಯಕ ವೇದಿಕೆಯಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಎಸ್ ಸವದಿ ಅವರು ಉತ್ಸವದ ಉದ್ಘಾಟನೆ ನೆರವೇರಿಸುವರು.
       ಗದುಗಿನ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಯಲಬುರ್ಗಾದ ಹಿರೇಮಠದ ಶ್ರೀ ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬೆದವಟ್ಟಿಯ ಶ್ರೀ ಸಂಗಮೇಶ್ವರ ಶಿವಾಚಾರ್ಯರು ಹಾಗೂ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು.  ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣವರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.  ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುನೀಲ ವಲ್ಲ್ಯಾಪುರ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಶಿವರಾಜ ತಂಗಡಗಿ, ಶಾಸಕರುಗಳಾದ (ವಿಧಾನಪರಿಷತ್) ಶಶಿಲ್ ಜಿ. ನಮೋಶಿ, ಮನೋಹರ ಮಸ್ಕಿ, ಹೆಚ್.ಸಿ. ನೀರಾವರಿ, ಹಾಲಪ್ಪ ಆಚಾರ್, ಸಂಸದ ಶಿವರಾಮಗೌಡ, ಜಿ.ಪಂ. ಉಪಾಧ್ಯಕ್ಷೆ ಸೀತಾ ಹಲಗೇರಿ, ತಾ.ಪಂ. ಅಧ್ಯಕ್ಷೆ ನೀಲಮ್ಮ ಕೊಟ್ರಪ್ಪ ಜವಳಿ, ಉಪಾಧ್ಯಕ್ಷ ಹೊಳೆಗೌಡ ಮುದೇಗೌಡ್ರ, ಜಿ.ಪಂ. ಸದಸ್ಯೆ ಉಮಾ ಶಿವಪ್ಪ ಮುತ್ತಾಳ, ತಾ.ಪಂ. ಸದಸ್ಯ ರಾಜಶೇಖರ ಹೊಂಬಳ, ಗ್ರಾ.ಪಂ. ಅಧ್ಯಕ್ಷ ಗವಿಸಿದ್ದಪ್ಪ ಗುಳಗಣ್ಣವರ, ಉಪಾಧ್ಯಕ್ಷ ದೇವಪ್ಪ ಗಾಳೆಪ್ಪ ಹರಿಜನ, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇಟಗಿ ಉತ್ಸವ : ಡಿ. ೨೩ ರ ಸಾಂಸ್ಕೃತಿಕ ಕಾರ್ಯಕ್ರಮಗಳು
ಕೊಪ್ಪಳ ಡಿ.   ಇಟಗಿ ಉತ್ಸವದ ಅಂಗವಾಗಿ ಡಿ. ೨೩ ರಂದು ಮಹಾದೇವ ದಂಡನಾಯಕ ವೇದಿಕೆಯಲ್ಲಿ ಹತ್ತು ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
       ಡಿ. ೨೩ ರಂದು ಸಂಜೆ ೫ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು ಅಮರಾವತಿಯ ಬಸವರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ, ಶಂಕರ ಬಿನ್ನಾಳರಿಂದ ವಚನ ಗಾಯನ,  ಬೆಂಗಳೂರಿನ ಬಸವರಾಜ ಗೋನಾಳರಿಂದ ಶಾಸ್ತ್ರೀಯ ಸಂಗೀತ, ಆನೆಗೊಂದಿಯ ಶೀಲಾ ಪಾಟೀಲರಿಂದ ಭಾವಗೀತೆಗಳು, ಭಾಗ್ಯನಗರದ ನಾಗರಾಜ ಶ್ಯಾವಿ ಅವರಿಂದ ಬಾನ್ಸೂರಿ ವಾದನ, ಮಾರೆಪ್ಪ ಮಾರೆಪ್ಪ ದಾಸರ ಅವರಿಂದ ತತ್ವಪದಗಳು, ಕೊಪ್ಪಳದ ಸದಾಶಿವ ಪಾಟೀಲರಿಂದ ಸುಗಮ ಸಂಗೀತ, ಹಾಬಲಕಟ್ಟಿಯ ದಾವಲಸಾಬ ಅತ್ತಾರರಿಂದ ಲಾವಣಿ ಪದಗಳು, ಬೆಂಗಳೂರಿನ ಮಂಜುಳ ಪರಮೇಶ ಮತ್ತು ತಂಡದಿಂದ ನೃತ್ಯ ರೂಪಕ, ಬೆಂಗಳೂರಿನ ಗುರುರಾಜ ಹೊಸಕೋಟೆ ಅವರಿಂದ ಜಾನಪದ ಗಾಯನ, ರಾಮಣ್ಣ ಬಾರಕೇರರಿಂದ ದಾಸರ ಹಾಡುಗಳು, ವಿರುಪಾಕ್ಷಪ್ಪ ಇಟಗಿ ಅವರಿಂದ ವಚನಗಾಯನ, ಕಲ್ಲೂರಿನ ದೊಡ್ಡಯ್ಯ ಗವಾಯಿಗಳಿಂದ ಶಾಸ್ತ್ರೀಯ ಗಾಯನ, ಕುಕನೂರಿನ ತೇಜಸ್ವಿನಿ ಗುರಪ್ಪ ದಿವಟರ ಅವರಿಂದ ಭರತನಾಟ್ಯ, ಕುಷ್ಟಗಿಯ ಎಕ್ಕರನಾಳರಿಂದ ಜಾನಪದ ಗಾಯನ, ಕೊಪ್ಪಳದ ಎಂ.ಕೆ. ಮೆಲೋಡೀಸ್ ಅವರಿಂದ ದೇಶಭಕ್ತಿ ಗೀತೆಗಳು, ಯಮನೂರಪ್ಪ ಭಜಂತ್ರಿ ಅವರಿಂದ ತತ್ವ ಪದಗಳು, ಕೊಪ್ಪಳದ ಬ್ಲೂ ಸ್ಟಾರ್ ಕ್ರೀಡಾ ಸಂಘದಿಂದ ಜಾನಪದ ಸಂಗೀತ, ಇಟಗಿಯ ಶಿವು ಕಂಚಗಾರರಿಂದ ಹಾಸ್ಯ ನಾಟಕ ಗಡಂಭದೇವ, ಗುಂಡೂರಿನ ಹುಸೇನಸಾಬ್ ರಿಂದ ರಂಗಗೀತೆಗಳು, ಕೊಪ್ಪಳದ ನೇತ್ರಾವತಿ ವಿಶ್ವಕರ್ಮರಿಂದ ಭರತನಾಟ್ಯ, ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡರಿಂದ ಗೀತಗುಚ್ಛ ಕಾರ್ಯಕ್ರಮಗಳು ಜರುಗಲಿವೆ.
ಇಟಗಿ ಉತ್ಸವ : ಇಟಗಿ ಶಾಸನಗಳು-  ವಿಚಾರಗೋಷ್ಠಿ
ಕೊಪ್ಪಳ ಡಿ.  : ಇಟಗಿ ಉತ್ಸವದ ಅಂಗವಾಗಿ ಡಿ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ಇಟಗಿಯ ಮಹಾದೇವ ದಂಡನಾಯಕ ವೇದಿಕೆಯಲ್ಲಿ ಇಟಗಿ ಶಾಸನಗಳು ಕುರಿತ ವಿಚಾರಗೋಷ್ಠಿ ನಡೆಯಲಿದೆ.
       ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತಪ್ರಾಧ್ಯಾಪಕ ಡಾ. ಬಿ.ವಿ. ಶಿರೂರ ಅವರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪಳದ ಹಿರಿಯ ಸಾಹಿತಿಗಳಾದ ಹೆಚ್.ಎಸ್. ಪಾಟೀಲ್, ವಿಠ್ಠಪ್ಪ ಗೋರಂಟ್ಲಿ ಮತ್ತು ಇಟಗಿಯ ಬಸವರಾಜ ಹಳ್ಳಿ ಅವರು ಅತಿಥಿ ಉಪನ್ಯಾಸಕರಾಗಿ ಪಾಲ್ಗೊಳ್ಳುವರು.

Advertisement

0 comments:

Post a Comment

 
Top