PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಡಿ-೨೪,  ದಿ. ಶೇಖರಪ್ಪ ಶಿಲ್ಪಿ ಯವರ ಶ್ರೀ ಅಂಜನೇಯ ಸ್ವಾಮಿಯ ಪರಮ ಬಕ್ತರಾಗಿದ್ದು ಸುಮಾರು ೪೦ ವರ್ಷಗಳಿಂದಲೂ ತಾವು ತಮ್ಮ ಸುವರ್ಣ ಕೆಲಸದ ಜೊತೆಯಲ್ಲಿಯೇ ಗುರುವಿನ ಸೇವೆಯನ್ನು ಮಾಡುತ್ತಲೆ ಎಷ್ಟೋಜನರ ಸಂಸಾರಿಕ ಜೀವನದ ನೋವು ಸಂಕಷ್ಟಗಳನ್ನು ಭಗವಂತನ ಕೃಪೆಯಿಂದ ಸೂಕ್ತ ಸಲಹೆಗಳನ್ನು ಸೂಚಿಸುತ್ತಾ ಬಂದವರು, ಅವರು ಬಕ್ತರ ನಂಬಿಕೆಗೆ ಪಾತ್ರರಾಗಿದ್ದರು. ಇಂತಹ ದೈವಿಭಕ್ತರು ದೈವಾದೀನರಾಗಿ ಇಂದಿಗೆ ಇವರಿಗೆ ೫ ವರ್ಷಗಳಾದ ನಿಮಿತ್ಯ ಪೂಜ್ಯರ ೫ ನೇ ಪುಣ್ಯಸ್ಮರಣೆ ಹಾಗೂ ಶ್ರೀ ಹನುಮಾನ ಚಾಲೀಸ ಕನ್ನಡ ಮತ್ತು ಇಂಗ್ಷೀಷನ ಕಿರುಕೃತಿ ಬಿಡುಗಡೆ ಸಮಾರಂಭ ಇದೇ ದಿ?? ೨೬-೧೨-೨೦೧೧ ರಂದು ಸೋಮವಾರ ಬೆಳಗ್ಗೆ ೧೦-೩೦ ಕ್ಕೆ ಗವಿಸಿದ್ದೇಶ್ವರ ಕಾಲೇಜ ಹಿಂದುಗಡೆ ಇರುವ ಶ್ರೀ ಸಹಸ್ರಾಂಜನಯ್ಯ ದೇವಸ್ಥಾನದಲಿ ಆಯೋಜಿಸಲಾಗಿದೆ. 
ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಹಳು ಯಲಬುರ್ಗಾ, ಡಾ| ಕೊಟ್ಟುರೇಶ್ವರ ಮಹಾಸ್ವಾಮಿಗಳು ಕಲ್ಮಟ ಗಂಗಾವತಿ, ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ, ಶ್ರೀ ಜಗನ್ನಾತ ಮಹಾಸ್ವಾಮಿಗಳು ಹಿರೇಮುಚ್ಚಳಗುಡ್ಡ, ಶ್ರೀ ಶಿರಸಪ್ಪಯ್ಯ ಮಹಾಸ್ವಾಮಿಗಳು ಕೊಪ್ಪಳ, ಶ್ರೀ ದಿವಾಕರ ಮಹಾಸ್ವಾಮಿಗಳು ಶ್ರೀ iದಾನೇಗುಂದಿ ಸರಸ್ವತಿ ಪೀಠ ಗಿಣಗೇರಿ ವಹಿಸುವರು. 
ಉದ್ಘಾಟನೆಯನ್ನು ಶಾಸಕರಾದ ಸಂಗಣ್ಣ ಕರಡಿ ನೆರವೇರಿಸುವರು ಇದೆ ಸಂದರ್ಭದಲ್ಲಿ ಶ್ರೀ ಹನಮಂತ ಚಾಲೀಸ ಕನ್ನಡ ಮತ್ತು ಇಂಗ್ಷೀಷ ಕಿರು ಕೃತಿಯನ್ನು ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಆರ್. ನವಲಿಹಿರೇಮಠ ಬಿಡುಗಡೆಗೋಳಿಸಲಿದ್ದಾರೆ. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷರಾದ ಸುರೇಶ ದೇಸಾಯಿ ವಹಿಸುವರು. ಮುಖ್ಯ ಅತಿಥಿಗಳಾಗಿ ವಿದಾನ ಫರಿಷತ ಮಾಜಿ ಸದಸ್ಯರಾದ ಕರಿಯಣ್ಣ ಸಂಗಟಿ, ಶ್ರೀ ಚಿಜಯಚಂದ್ರಶೇಖರ ಶಿಕ್ಷಣ ವಿಶ್ವಸ್ಥ ಮಂಡಳಿಯ, ಸಿ.ವಿ ಚಂದರಶೇಖರ , ವಿನೂತನ ಶಿಕ್ಷಣ ಸೇವಾ ಸಂಸ್ಥೆಯ ಅಧ್ಯಕ್ಷರಾದ ಸಿಂದಲಿಂಗಯ್ಯ ಹಿರೇಮಠ, ಜಿ.ಟಿ.ಪಂಪಾಪತಿ ಕುಕನೂರ ಜಲ್ಲಾ ಸರಕರಿ ಸಂಘದ ಅಧ್ಯಕ್ಷರಾದ ಶಂಬುಲಿಂಗನಗೌಡ ಪಾಟೀಲ ಆಗಮಿಸಲಿದ್ದಾರೆ. 
ಸರ್ವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಬೇಕೆಂದು ಟ್ರಸ್ಟ ಸದಸ್ಯರಾದ ಅಣ್ಣ್ಣಪ್ಪ ಕಲ್ಲಪ್ಪ ಚಿಲಕಮುಕಿ ಮನವಿ ಮಾಡಿಕೊಂಡಿದ್ದಾರೆ. 

Advertisement

0 comments:

Post a Comment

 
Top