PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ದಿನಾಂಕ : ೩೧, ಸ್ಲಂ ಜನಾಂದೋಲನ ಕರ್ನಾಟಕ ಬೆಂಗಳೂರು ಹಾಗೂ ಕೊಪ್ಪಳ ಸ್ಲಂ ಜನ ಜಾಗೃತಿ ವೇದಿಕೆ ಜಂಟಿಯಾಗಿ ಎಲ್ಲಾ ದಮನಿತ ವರ್ಗದವರ ಜನ ಶಕ್ತಿ ಜಾಗೃತಿ ಸಮಾವೇಶವನ್ನು ನಡೆಸಿ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. 
ಸಭೆಯಲ್ಲಿ ಜನಶಕ್ತಿ ಜಾಗೃತಿಯ ಹಕ್ಕೊತ್ತಾಯಗಳಾದ ನಗರದ ಭೂಮಿಯಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಪಾಲನ್ನು ನೀಡುವುದರ ಜೊತೆಗೆ ಸ್ಲಂ ಜನರು ವಾಸಿಸುತ್ತಿರುವ ಕೊಳಗೇರಿಗಳ ಭೂಮಿ ಹಕ್ಕನ್ನು ಸರ್ಕಾರ ಖಾತ್ರಿಗೊಳಿಸಬೇಕು. ರಾಜ್ಯ ಸರ್ಕಾರ ಬಡತನ ನಿರ್ಮೂಲನೆ ಮತ್ತು ಸ್ಲಂ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. ಮತ್ತು ನಗರಾಭಿವೃದ್ಧಿಯ ಹಣದಲ್ಲಿ ಪಾಲನ್ನು ನೀಡಬೇಕು. ಅಸಂಘಟಿತ ಕಾರ್ಮಿಕ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ನೀಡುವುದರ ಜೊತೆಗೆ ಬದುಕುವ ವೇತನವನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೆ ತರಬೇಕು. ನಗರ ವಂಚಿತ ಸಮುದಾಯಗಳ ಭೂಮಿ, ನೀರು, ಶಿಕ್ಷಣ, ಆರೋಗ್ಯ, ವಸತಿ, ಆಹಾರ ಮತ್ತು ಇತರೆ ಬದುಕುವ ಹಕ್ಕುಗಳ ರಕ್ಷಣೆಗಾಗಿ ಮುಂದಾಗೋಣ. 
ನಗರದ ಜನಸಂಖ್ಯೆಯಲ್ಲಿ ಶೇ ೪೦% ರಿಂದ ೫೦% ರಷ್ಟು ಜನ ಕೊಳಗೇರಿಗಳಲ್ಲಿ ವಾಸಿಸುತ್ತಿದ್ದು ನಗರದ ಭೂಮಿಯಲ್ಲಿ ಶೇ ೪೦%ರಷ್ಟು ಭೂಮಿಯನ್ನು ನಗರವಂಚಿತ ಸಮುದಾಯಗಳಿಗೆ ರಾಜ್ಯ ಸರ್ಕಾರದ ಮತ್ತು ಜಿಲ್ಲಾ ಆಡಳಿತಗಳು ಮೀಸಲಿಡಬೇಕು. ಕರ್ನಾಟ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾಯ್ದೆ ೧೯೭೫ ಅಧಿನಿಯಮ ೪ ರ ಅನ್ವಯ ಘೋಷಿತ ಕೊಳಚೆ ಪ್ರದೇಶ ನಿವಾಸಿಗಳಿಗೆ (ಗುರುತಿನ ಪತ್ರ ಅಥವಾ ಬಯೋಮೆಟ್ರಿಕ್ ಕಾರ್ಡ ಬದಲಾಗಿ) ನೊಂದಣಿ ಪತ್ರ ನೀಡಬೇಕು ಮತ್ತು ಅಧಿನಿಯಮ ೨೭ ಎ ಅನ್ವಯ ಭೂ-ಸ್ವಾದೀನ ಪಡಿಸಿಕೊಂಡು ಭೂಮಿಯನ್ನು ಕೊಳಗೇರಿ ನಿವಾಸಿಗಳಿಗೆ ಹಸ್ತಾಂತರಿಸಬೇಕು. ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ನಗರಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಘೋಷಿತ ಕೊಳಚೆ ಪ್ರದೇಶಗಳಿಗೆ ನಗರಾಭಿವೃದ್ದಿ ಇಲಾಖೆ ಆದೇಶ ಸಂಖ್ಯೆ ನ ಅ ಇ ೩೯/ಟಿ.ಎಂ.ಡಿ.೨೦೦೭ ದಿನಾಂಕ : ೦೧-೦೯-೨೦೦೭ ರಂತೆ ಸಕ್ರಮಗೊಳಿಸಬೇಕು ಹಾಗೂ ವಸತಿ ಇಲಾಖೆ ಆದೇಶ ಸಂಖ್ಯೆ ವ.ಇ.ನೀಡಿ ಸ್ಲಂ ನಿವಾಸಿಗಳಿಗೆ ಖಾತೆ ಮಾಡಿಕೊಡಬೇಕು. ನಗರಾಭಿವೃದ್ದಿ ಪ್ರಾಧಿಕಾರಗಳಿಂದ ನಿರ್ಮಾಣವಾಗುವ ಬಡಾವಣೆಯಲ್ಲಿ ಈಗ ಜಾರಿಯಲ್ಲಿರುವ ಎಲ್.ಐ.ಜಿ. ಮತ್ತು ಇ.ಡಬ್ಲ್ಯೂ.ಎಸ್. ಪ್ರಮಾಣ ಶೇ ೫% ಇದ್ದು ಇದು ಮಧ್ಯವರ್ತಿಗಳ ಮತ್ತು ರಾಜಕೀಯ ಹಿಂಬಾಲಕರ ಕೈ ಸೇರುತ್ತದೆ. ಆದ್ದರಿಂದ ನಗರ ವಂಚಿತ ಸಮುದಾಯಗಳಾದ ಎಸ್.ಸಿ/ಎಸ್.ಟಿ.ಓ.ಬಿ.ಸಿ ಅಲ್ಪಸಂಖ್ಯಾತರು, ಅಟೋ ಚಾಲಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸಗಾರರು, ಹಮಾಲಿಗಳು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಇತರೇ ವರ್ಗಗಳಿಗೆ ಈಗಾಗಲೇ ಜೆ.ಎನ್.ಎನ್.ಯು.ಆರ್.ಎಂ. ಮತ್ತು ರಾಜೀವ್ ಅವಾಸ್ ಯೋಜನೆಯಲ್ಲಿ ಸೂಚಿಸಿರುವಂತೆ ಶೇ ೨೦%ರಷ್ಟು ನಿವೇಶನಗಳನ್ನು ಮೀಸಲಿಡಬೇಕು. 
ಸರ್ಕಾರ ಬಡವರಿಗೆ ನೀಡಲು ನಿಗದಿಗೊಳಿಸಿರುವ ೨೨೫ ಸ್ಕ್ವೇಯರ್ ಫೀಟ್ ನಿವೇಶನಗಳನ್ನು ಒಂದು ಕುಟುಂಬದ ಆಧಾರಿತ ಮಾನದಂಡವಾಗಿದ್ದು ಸರ್ಕಾರದ ಈ ಮಾನದಂಡವನ್ನು ಕುಟುಂಬದಲ್ಲಿರುವ ವ್ಯಕ್ರಿಗಳ ಸಂಖ್ಯೆಯ ಅನ್ವಯ ನಿಗಧಿಗೊಳಿಸಬೇಕು. ರಾಜ್ಯ ಸರ್ಕಾರದ ವಾರ್ಷಿಕ ಬಜೆಟನಲ್ಲಿ ಸ್ಲಂ ನಿವಾಸಿಗಳಿಗೆ ಜನಸಂಖ್ಯೆ ಮತ್ತು ನಗರ ವಂಚಿತ ಸಮುದಾಯಗಳ ಜನಸಂಖ್ಯೆ ಆಧಾರದಲ್ಲಿ ೨೦೧೧ ರ ಜನಗಣತಿ ಪರಿಗಣಿಸಿ ಹಣ ಮೀಸಲಿಡಬೇಕು. ಸ್ಥಳೀಯ ಸಂಸ್ಥೆಗಳಾದ ಪುರಸಭೆ, ನಗರಸಭೆ, ನಗರಪಾಲಿಕೆಗಳ, ವಾರ್ಷಿಕ ಬಜೆಟನಲ್ಲಿ ನಗರವಂಚಿತ ಸಮುದಾಯಗಳ ಅಭಿವೃದ್ದಿಗೆ ಪ್ರತಿಶತ ೪೦%ರಷ್ಟು ಹಣವನ್ನು ಮೀಸಲಿಡಬೇಕು. ನಗರಾಭಿವೃದ್ಧಿ ಯೋಜನೆಗಳಿಗೆ ಬರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನಗಳಲ್ಲಿ ಶೇ ೪೦%ರಷ್ಟು ಹಣವನ್ನು ನಗರವಂಚಿತ ಸಮುದಾಯಗಳ ಅಭಿವೃದ್ದಿಗೆ ಮೀಸಲಿಡಬೇಕು. ನಗರವಂಚಿತ ಸಮುದಾಯಗಳ ಸಮಗ್ರ ಅಭಿವೃದ್ದಿಗೆ ನಗರಾಡಳಿತದಲ್ಲಿರುವ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಶೇ ೨೨.೭೫% ರಷ್ಟು ವಿಶೇಷ ಘಟಕ ಯೋಜನೆ ವಿಕಲ ಚೇತನ ಕಲ್ಯಾಣ ಶೇ ೩% ಅಲ್ಪಸಂಖ್ಯಾತರ ಕಲ್ಯಾಣದ ಶೇ ೧೫% ಮತ್ತು ಇತರ ಹಿಂದುಳಿದ ವರ್ಗಗಳ ಮತ್ತು ಕೊಳಚೆ ಪ್ರದೇಶಗಳ ಕಲ್ಯಾಣದ ಶೇ ೭.೨೫% ಯೋಜನೆಗಳ ಅನುಷ್ಠಾನಕ್ಕೆ ಏಕಗವಾಕ್ಷಿ ಜಾರಿಗೆ ತರಬೇಕು. 
ಪಡಿತರ ವಿತರಣೆಗೆ ನೇರವಾಗಿ ಪೋಸ್ಟ್ ಆಫೀಸ್ ಬ್ಯಾಂಕ ಖಾತೆ ಮೂಲಕ ಬಡವರಿಗೆ ಸಬ್ಸಿಡಿ ನೀಡುವ ಕೇಂದ್ರ ಮತ್ತು ರಾಜ್ಯ ಸರಕಾರದ ಆಲೋಚನೆಯನ್ನು ತಕ್ಷಣಕ್ಕೆ ಬಿಡಬೇಕು ಸರ್ಕಾರಗಳೇ ಪಡಿತರ ವಿತರಣಾ ವ್ಯವಸ್ಥೆಯನ್ನು ವಹಿಸಿಕೊಳ್ಳಬೇಕು. ದೇಶದ ನಾಗರೀಕರನ್ನು ಅದರಲ್ಲೂ ಬಡವರನ್ನು ಅಪರಾಧಿಗಳೆಂದು ಪರಿಗಣಿಸುವ ಆಧಾರ ಯೋಜನೆ ಮತ್ತು ಬಯೋಮೆಟ್ರಿಕ್ ಯೋಜನೆಗಳನ್ನು ಕೈಬಿಡಬೇಕು. ಈ ಯೋಜನೆ (ಆಧಾರ)ಗೆ ಸಂಸತ ಅನುಮೋದನೆ ನೀಡದಿದ್ದರೂ ಜಿಲ್ಲಾಢಳಿತಗಳು ಭಯೋತ್ಪಾದನೆ ಮೂಲಕ ಜನರನ್ನು ಹೆದರಿಸುತ್ತಿರುವುದನ್ನು ಈ ದೇಶದ ನಾಗರೀಕರು ಪ್ರಶ್ನಿಸಬೇಕಿದೆ. ಬಡತನ ರೇಖೆಗೆ ನಗರ ನಿವಾಸಿಗಳಿಗೆ ಕೇಂದ್ರ ಸರ್ಕಾರದ ನಿಗಧಿಗೊಳಿಸಿರುವ ೩೨ ರೂಪಾಯಿಗಳ ಮಾನದಂಡ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಇದನ್ನು ಕೈ ಬಿಡಬೇಕು ಮತ್ತು ಸುಪ್ರೀಂ ಕೋರ್ಟ ಮಧ್ಯಪ್ರವೇಶ ಮಾಡಬೇಕು. ಕುಡಿಯುವ ನೀರನ್ನು ರಾಜ್ಯ ಸರ್ಕಾರ ಕನ್ನಡ ಗಂಗಾ ಯೋಜನೆ ಹೆಸರಿನ್ಲಲಿ ಖಾಸಗೀಕರಣ ಮಾಡುತ್ತಿದ್ದು ನೀರಿನ ನಲ್ಲಿಗೆ ಮೀಟರ್ ಹಾಕುವುದನ್ನು ನಿಲ್ಲಿಸಬೇಕು ಕೊಳಗೇರಿ ನಿವಾಸಿಗಳಿಗೆ ಸಾರ್ವಜನಿಕ ನಲ್ಲಿಗಳ ಮೂಲಕ ಉಚಿತವಾಗಿ ನೀರು ಪೂರೈಸಬೇಕು. ಬಡವರಿಗೆ ನೀಡುವ ಮನೆಗಳನ್ನು ನೇರವಾಗಿ ಜನರೇ ಕಟ್ಟಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು. ಖಾಸಗೀ ಸಹಭಾಗಿತ್ವದಲ್ಲಿ ಮನೆ ನಿರ್ಮಾಣ ಮಾಡುವುದನ್ನು ನಿಲ್ಲಸಬೇಕು. ನಗರವಂಚಿತ ಸಮುದಾಯಗಳಿಗೆ ಒಂಟಿ ಮನೆಗಳನ್ನು ನಿರ್ಮಿಸಿಕೊಡಬೇಕು. ಎಂಬ ಮುಂತಾದ ಸ್ಲಂ ಜನರ ಪರ ಅನೇಕ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಸರ್ಕಾರಕ್ಕೆ ಮನಿವ ಸಲ್ಲಿಸಲಾಗುತ್ತದೆ. ಸಮಾವೇಶದಲ್ಲಿ ಅಧ್ಯಕ್ಷತೆಯನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಘಟನಾ ಸಂಚಾಲಕರಾದ  ವಿಜಯ ಗುಂಟ್ರಾಳ ಉದ್ಘಾಟನೆಯನ್ನು ಶ್ರೀ ಗವಿಸಿದೇಶ್ವರ ಕಾಲೇಜಿನ ನಿವೃತ್ತ ಪ್ರಾಚಾರ್ಯರರಾದ ಹಾಗೂ ಸಾಹಿತ್ಯಿ ಆದ ಅಲ್ಲಮಪ್ರಭು ಬೇಟದೂರು ಪ್ರಾಸ್ತಾವಿಕ ವಿಭಾಗೀಯ ಸಂಚಾಲಕರು ಆದ ಇಂತಿಯಾಜ್ ಮಾನವಿ ವೀರಕನ್ನಡಿಗ ಯುವಕ ಸಂಘ ಅಧ್ಯಕ್ಷ  ಶಿವಾನಂದ ಹೊದ್ಲೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್. ಕೊಪ್ಪಳ ಸ್ಲಂ ಜನಜಾಗೃತಿ ವೇದಿಕೆ ಅಧ್ಯಕ್ಷರಾದ  ಚನ್ನಬಸಪ್ಪ ಹೊಳೆಯಪ್ಪನವರ ಪ್ರಧಾನ ಕಾರ್ಯದರ್ಶಿ ಮೈಲಪ್ಪ ಪೂಜಾರ ಮುಂತಾದವರು ಭಾಗವಹಿಸಿದರು. ಸ್ವಾಗತ, ನಿರೂಪಣೆ, ವಂದಾರ್ನಪಣೆಯನ್ನು ಎ.ಎಫ್.ಅಬ್ದುಲ ರಾಟಿ ಮಾಡಿದರು.  

Advertisement

0 comments:

Post a Comment

 
Top