PLEASE LOGIN TO KANNADANET.COM FOR REGULAR NEWS-UPDATES


ಗಂಗಾವತಿ: ನಗರದಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಭೂತೋ ನ ಭವಿಷ್ಯತಿ ಎಂಬಂತೆ ಅಭೂತಪೂರ್ವ ಯಶಸ್ವಿ ಕಂಡಿದೆ ಎಂದು ಸಮ್ಮೇಳನದ ಅಧ್ಯಕ್ಷ  ಸಿ.ಪಿ. ಕೃಷ್ಣಕುಮಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ ಹರ್ಷ ವ್ಯಕ್ತಪಡಿಸಿದರು. 

ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಭಾನುವಾರ ಬೆಳಿಗ್ಗೆ ಇಲ್ಲಿಯ ಜಯನಗರದ ಶರಣ ಸಾಹಿತ್ಯ ಬಳಗದ ಮುಖ್ಯಸ್ಥ ಶ್ರೀಶೈಲ ಪಟ್ಟಣಶೆಟ್ಟಿ ಅವರ ಮನೆಯಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಚಹಾಕೂಟದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. 

ಸಿಪಿಕೆ ಮಾತನಾಡಿ, ಸಂಘಟಕರಲ್ಲಿ ಮನೆಮಾಡಿದ್ದ ಎಲ್ಲ ಆತಂಕ ದೂರ ಮಾಡಿ, ಸಾಹಿತಿಗಳ ಮನಗೆದ್ದ ಬತ್ತದ ಕಣಜ ಗಂಗಾವತಿಯ ಜನತೆ ಸಮ್ಮೇಳನ ಯಶಸ್ವಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಂಗಾವತಿ ಜನ ನಾಡಿನ ಸಾಹಿತಿಗಳ ಮನಸ್ಸು ಗೆದ್ದಿದ್ದು, ಅವರ ಆದರಾತಿಥ್ಯ ಅಚ್ಚಳಿಯದೆ ಉಳಿದಿದೆ ಎಂದರು.

ನಲ್ಲೂರು ಪ್ರಸಾದ ಮಾತನಾಡಿ, ಗಂಗಾವತಿ ಜನ ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಿಕೊಟ್ಟಿದ್ದಾರೆ. ಗಂಗಾವತಿಯ ಸವಿನೆನಪು ಎದೆಯಲ್ಲಿ ಬಚ್ಚಿಟ್ಟುಕೊಂಡು ಹೊರಡುತ್ತೇನೆ. ನನ್ನ ಅವಧಿಯ ಕೊನೆಯ ಸಮ್ಮೇಳನ 

ಯಶಸ್ವಿಗೊಳಿಸಿದ್ದಕ್ಕೆ ಗಂಗಾವತಿಯ ಜನಕ್ಕೆ ಋಣಿಯಾಗಿದ್ದೆೀನೆ. ಸಮ್ಮೇಳನ ಸಂಪೂರ್ಣ ತೃಪ್ತಿ ತಂದಿದೆ. ನನ್ನ ಅವಧಿಯಲ್ಲಿ ನಡೆದ ಇತರ ಮೂರು ಸಮ್ಮೇಳನಕ್ಕಿಂತ  ಗಂಗಾವತಿ ಸಮ್ಮೇಳನವನ್ನು ಇಲ್ಲಿನ ಜನ ಹತ್ತು ಪಟ್ಟು ಚೆನ್ನಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು. 

ಶ್ರೀಶೈಲ ಪಟ್ಟಣಶೆಟ್ಟಿ, ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಸಿದ್ದಾಪುರ, ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ರುದ್ರಮ್ಮ ಹಾಸಿನಾಳ, ಚಂದ್ರಶೇಖರ್ ನೂಲ್ವಿ ಇದ್ದರು.


Advertisement

0 comments:

Post a Comment

 
Top