ಕೊಪ್ಪಳ, ಡಿ. ೨೬ : ಗದಗ ಹೊಸಪೇಟೆ ಮಾರ್ಗದ ಬನ್ನಿಕೊಪ್ಪದ ಹತ್ತಿರ, ಭಾನಾಪುರ ಕ್ರಾಸ್, ಮೊದಲಾದ ಕಡೆಗೆ ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯದ ಭಿತ್ತಿ ಚಿತ್ರ ಪ್ರದರ್ಶಿಸಿ, ನಾವು ಇಟ್ಟಿಗೆಯವರೆಂದು ಹೇಳಿಕೊಳ್ಳಬೇಕು ಎಂದು ಡಾ.ಬಿ.ವಿ. ಶಿರೂರ ಹೇಳಿದರು.
ಇಟಿಗಿ ಉತ್ಸವದ ಎರಡನೇ ದಿನ ಹಮ್ಮಿಕೊಂಡಿದ್ದ ಇಟಗಿ ಶಾಸನಗಳು ವಿಚಾರಗೋಷ್ಠಿ ಅಧ್ಯಕ್ಷ ಸ್ಥಾನದಿಂದ ಕಿವಿಮಾತು ಹೇಳಿದರಲ್ಲದೆ, ಜಿಲ್ಲಾಡಳಿತ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಿಯಾಶೀಲಗೊಳ್ಳಬೇಕು ಎಂದರು.
ಶೈವಧರ್ಮದ ದೇವಾಲಯ ಮುಂದೆ ಮತಧರ್ಮಗಳ ಒತ್ತಡದಿಂದ ಅಗ್ರಹಾರ ಹಾಳಾಗಿ ವಿದ್ಯಾಕೇಂದ್ರ ನಶಿಸಿಹೋಗಿರಬೇಕೆಂದು ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿಯವರು ಅಭಿಪ್ರಾಯ ಮಂಡಿಸಿದರು.
ಸ್ಥಳೀಯ ನಿವೃತ್ತ ಶಿಕ್ಷಕ ಬಸವರಾಜ ಹಳ್ಳಿಯವರು ಮಹಾದೇವ ದೇವಾಲಯದ ಒಂದೊಂದು ಕುಸುರಿ ಕಲೆಯನ್ನು ಸ್ಪೂರ್ತಿಯಿಂದ ತಿಳಿಸಿಕೊಟ್ಟರು. ಪ್ರಾಚಾರ್ಯ ಸಿ.ವಿ. ಜಡಿಯವರು ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
0 comments:
Post a Comment