PLEASE LOGIN TO KANNADANET.COM FOR REGULAR NEWS-UPDATES


 | ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ

ಹೊಸದಿಲ್ಲಿ,ಡಿ.22:ರಾಷ್ಟ್ರೀಯ ಜನತಾ ದಳದ ನಾಯಕ ಲಾಲೂ ಪ್ರಸಾದ್ ಹಾಗೂ ಇತರ ಪಕ್ಷಗಳಿಂದ ವಾಗ್ದಾಳಿಗೆ ಒಳಗಾದ ಬಳಿಕ ಕೇಂದ್ರದ ಯುಪಿಎ ಸರಕಾರವು ಲೋಕಪಾಲ ಮಸೂದೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಸ್ತಾಪವನ್ನು ಮರು ಸೇರ್ಪಡೆಗೊಳಿಸಲು ಇಂದು ನಿರ್ಧರಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ,ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇತರ ಹಿರಿಯ ಸಚಿವರ ಉಪಸ್ಥಿತಿಯಲ್ಲಿ ನಡೆದ ಕಾಂಗ್ರೆಸ್ ಕೋರ್ ಸಮಿತಿಯ ಸಭೆಯೊಂದರಲ್ಲಿ ಲೋಕಪಾಲ ಪೀಠ ಹಾಗೂ ಶೋಧ ಸಮಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಸೇರ್ಪಡೆ ಗೊಳಿಸಲು ನಿರ್ಧರಿಸಲಾಯಿತು.
ಸಂಪುಟ ಟಿಪ್ಪಣಿಯಲ್ಲಿ ಮೂಲ ಪ್ರಸ್ತಾಪದಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ಕೈಬಿಟ್ಟಿರುವ ವಿಚಾರವನ್ನು ಲೋಕ ಸಭೆಯಲ್ಲಿ ಶೂನ್ಯವೇಳೆಯಲ್ಲಿ ಎತ್ತಿದ ಲಾಲೂ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಈ ಕೋರ್ ಸಮಿತಿಯ ಸಭೆ ನಡೆದಿದೆ.
ಮೂಲದಲ್ಲಿ ಅವಕಾಶವಿದ್ದ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕೈಬಿಡಲು ಕಾಂಗ್ರೆಸ್ ಹಾಗೂ ಆರೆಸ್ಸೆಸ್-ಬಿಜೆಪಿ ಕೂಟ ಸಂಚು ನಡೆಸಿವೆಯೆಂದು ಲಾಲೂ ಆರೋಪಿಸಿದರು.ಸಮಾಜವಾದಿ ಪಕ್ಷ, ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸೆ-ಮುಶಾವರತ್,ಲೋಕ ಜನಶಕ್ತಿ ಪಕ್ಷ ಹಾಗೂ ಇತರ ಹಲವು ಸಣ್ಣ ಪಕ್ಷಗಳು ಅಲ್ಪಸಂಖ್ಯಾತ ಮೀಸಲಾತಿಯ ಬೇಡಿಕೆಯನ್ನು ಬೆಂಬಲಿಸಿದವು.
ಈ ಗದ್ದಲದಲ್ಲಿ ಲೋಕಸಭೆ ಮುಂದೂಡಲ್ಪಟ್ಟಾಗ ಕಾಂಗ್ರೆಸ್ ಹಾಗೂ ಸರಕಾರ ಈ ಸಮಯವನ್ನು ಪ್ರಸ್ತಾಪದ ಮರು ಸೇರ್ಪಡೆಗೆ ಬಳಸಿಕೊಂಡವು.
ಸಂವಿಧಾನವು ಅಲ್ಪಸಂಖ್ಯಾತರಿಗೆ ಮೀಸಲಾತಿಯ ಅವಕಾಶ ಕಲ್ಪಿಸಿಲ್ಲ.ಆದುದರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿಯೊದಗಿಸುವ ಪ್ರಸ್ತಾಪದ ಸೇರ್ಪಡೆ ಕಾನೂನು ಸಮಸ್ಯೆಗೆ ಕಾರಣವಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದ ನಿಯೋಗವೊಂದು ಲೋಕಸಭಾ ನಾಯಕ ಪ್ರಣವ್ ಮುಖರ್ಜಿಯವರಿಗೆ ಹೇಳಿದ ಬಳಿಕ ನಿನ್ನೆ ರಾತ್ರಿ ಅಲ್ಪಸಂಖ್ಯಾತರ ಮೀಸಲಾತಿ ಪ್ರಸ್ತಾಪವನ್ನು ಕಾಯ್ದೆಯಿಂದ ಕೈಬಿಡಲಾಗಿತ್ತು.
ಸರಕಾರವು ಲೋಕಪಾಲ ಪೀಠ ಹಾಗೂ ಶೋಧ ಸಮಿತಿಯ ಶೇ.50ಮೀಸಲಾತಿಗೆ ಸಂಬಂಧಿಸಿದಂತೆ ಹೊಸ ಲೋಕಪಾಲ ಮಸೂದೆಯಿಂದ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕೈಬಿಟ್ಟು, ಸಿಬಿಐಯ ವಿಚಾರಣೆ ಹಾಗೂ ತನಿಖೆ ವಿಭಾಗಗಳ ವಿಭಜನೆಯನ್ನು ತೆಗೆದು ಹಾಕಿತು.
ಮರು ವಿಮರ್ಶಿತ ಲೋಕಪಾಲ ಹಾಗೂ ಲೋಕಾಯುಕ್ತ ಮಸೂದೆ-2011ರಲ್ಲಿ ಈ ಎರಡು ಸಂಸ್ಥೆಗಳಲ್ಲಿ ಶೇ.50ಎಸ್ಸಿ,ಎಸ್ಟಿ,ಒಬಿಸಿ ಹಾಗೂ ಮಹಿಳೆಯರಿರಬೇಕೆಂದು ಹೇಳಿತ್ತಾದರೂ ಅಲ್ಪಸಂಖ್ಯಾತರ ಪ್ರಸ್ತಾಪವನ್ನು ಕೈಬಿಡಲಾಗಿತ್ತು.ಇದೇ ರೀತಿಯ ಮೀಸಲಾತಿಯನ್ನು ಲೋಕಪಾಲದ ಶೋಧ ಸಮಿತಿಯಲ್ಲೂ ಒದಗಿಸಲಾಗಿತ್ತು.

ಗುರುವಾರ ಸಂಸದರಿಗೆ ನೀಡಲಾಗಿದ್ದ ಮಸೂದೆಯಲ್ಲಿ ಸಿಬಿಐಯ ನಿರ್ದೆಶಕನನ್ನು ಪ್ರಧಾನಿ, ಲೋಕಸಭಾ ವಿಪಕ್ಷ ನಾಯಕ ಹಾಗೂ ಭಾರತದ ಮುಖ್ಯನ್ಯಾಯಧೀಶ ಅಥವಾ ಅವರಿಂದ ಹೆಸರಿಸಲ್ಪಟ್ಟ ಸುಪ್ರೀಂ ಕೋರ್ಟ್ ನ್ಯಾಯಾಧೀಶನನ್ನೊಳಗೊಂಡ ತ್ರಿಸದಸ್ಯ ಸಮಿತಿ ಆಯ್ಕೆ ಮಾಡಬೇಕೆಂದು ಹೇಳಿದೆ.

ಈ ನೇಮಕಾತಿ ಪ್ರಕ್ರಿಯೆಯ ಬದಲಾವಣೆಯನ್ನು ದಿಲ್ಲಿ ವಿಶೇಷ ಪೊಲೀಸ್ ಸಂಸ್ಥಾಪನ ಕಾಯ್ದೆ- 1946ಕ್ಕೆ ತಿದ್ದುಪಡಿ ತರುವ ಮೂಲಕ ಮಾಡಲಾಗುವುದು. ಮಸೂದೆಯ ಪ್ರಕಾರ ಸಿಬಿಐಯನ್ನು ಲೋಕಪಾಲದ ಪೂರ್ಣ ನಿಯಂತ್ರಣದಿಂದ ಹೊರಗಿಡಲಾಗಿದೆ.ಆದಾಗ್ಯೂ,ಲೋಕಪಾಲವು ತಾನು ಸಿಬಿಐಗೆ ವಹಿಸಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ನಡೆಸುವ ಪ್ರಸ್ತಾಪವನ್ನು ಕಾಯ್ದೆ ಒಳಗೊಂಡಿದೆ.

ಅಂತಾರಾಷ್ಟ್ರೀಯ ಸಂಬಂಧ,ಬಾಹ್ಯ ಹಾಗೂ ಆಂತರಿಕ ಭದ್ರತೆ,ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಶಕ್ತಿ ಹಾಗೂ ಬಾಹ್ಯಾಕಾಶಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹೊರಗಿಡುವಂತಹ ರಕ್ಷಣೆಯೊಂದಿಗೆ ಪ್ರಧಾನಿಯನ್ನು ಲೋಕಪಾಲದ ವ್ಯಾಪ್ತಿಗೆ ತರಲಾಗಿದೆ.

ಪ್ರಧಾನಿ,ಲೋಕಸಭಾಧ್ಯಕ್ಷ,ಲೋಕಸಭೆಯ ವಿಪಕ್ಷ ನಾಯಕ,ಭಾರತದ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟಪತಿ ಹೆಸರಿಸುವ ಖ್ಯಾತನಾಮ ಕಾನೂನು ತಜ್ಞನೊಬ್ಬನನ್ನೊಟಗೊಂಡ ಸಮಿತಿಯು ಲೋಕಪಾಲದ ಅಧ್ಯಕ್ಷ ಹಾಗೂ ಸದಸ್ಯರನ್ನು ಆರಿಸಲಿದೆ.

ಲೋಕಾಯುಕ್ತರನ್ನು ಆರಿಸಲು ಮುಖ್ಯಮಂತ್ರಿ,ವಿಧಾನಸಭಾಧ್ಯಕ್ಷ ವಿಪಕ್ಷ ನಾಯಕ, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಅಥವಾ ಇತರ ನ್ಯಾಯಾಧೀಶ ಹಾಗೂ ರಾಜ್ಯಪಾಲರು ಹೆಸರಿಸಿದ ಖ್ಯಾತ ನ್ಯಾಯವೇತ್ತರನ್ನೊಳಗೊಂಡ ಸಮಿತಿಗೆ ಅಧಿಕಾರ ನೀಡಲಾಗಿದೆ.

ಅಲ್ಪಸಂಖ್ಯಾತರಿಗೆ ಒಳ ಮೀಸಲಾತಿ

ನವದೆಹಲಿ (ಪಿಟಿಐ):ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ನಿಗದಿಯಾದ ಶೇ 27ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4.5ಒಳ ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಸಚಿವ ಸಂಪುಟ ಅವಿರೋಧವಾಗಿ ಕೈಗೊಂಡ ನಿರ್ಣಯದ ಅನ್ವಯ ರಾಷ್ಟ್ರೀಯ ಅಲ್ಪಸಂಖ್ಯಾತರ ಕಾಯಿದೆ 1992ರ ಪರಿಚ್ಛೇದ 2(ಸಿ)ಅಡಿ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5 ಒಳ ಮೀಸಲಾತಿ ದೊರೆಯಲಿದೆ.

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಶಿಫಾರಸಿನ ಮೇಲೆ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.ಮುಸ್ಲಿಮರು,ಸಿಖ್,ಕ್ರೈಸ್ತರು,ಬೌದ್ಧ ಧರ್ಮೀಯರು, ಝೋರಾಷ್ಟ್ರೀಯನ್ಸ್(ಪಾರ್ಸಿಗಳು)ಸೇರಿದಂತೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ, ಸಶಕ್ತೀಕರಣ ಸಚಿವಾಲಯದ ಇತರೆ ಹಿಂದುಳಿದ ವರ್ಗಗಳ ಅಧಿಸೂಚನೆ ಪಟ್ಟಿಯಲ್ಲಿರುವ ಜಾತಿ, ಪಂಗಡಗಳು ಒಳ ಮೀಸಲಾತಿ ಲಾಭ ಪಡೆಯಲಿವೆ

Advertisement

0 comments:

Post a Comment

 
Top