ಕೊಪ್ಪಳ ಡಿ. ಕೊಪ್ಪಳ ಜಿಲ್ಲೆ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಪ್ರದೇಶವನ್ನು ಹೊಂದಿದ್ದು ಮುಂಗಾರು ಮತ್ತು ಬೇಸಿಗೆ ಎರಡು ಹಂಗಾಮಿನಲ್ಲಿ ಶೇಂಗಾ ಬೆಳೆಯಲಾಗುತ್ತಿದೆ ಆದರೆ, ಗುಣಮಟ್ಟದ ಬೀಜದ ಕೊರತೆ, ಹೆಚ್ಚು ಇಳುವರಿ ನೀಡುವ ಹೊಸ ತಳಿಗಳ ಕೊರತೆಯಿಂದಾಗಿ ರೈತರು ತಮ್ಮಲ್ಲಿಯೇ ಬೆಳೆದು ಉಳಿಸಿಕೊಂಡಿರುವ ಬೀಜಗಳ ಮೆಲೆ ಅವಲಂಬಿತರಿರುವದರಿಂದ ಪ್ರತಿ ವರ್ಷ ಇಳುವರಿಯು ಕುಂಟಿತಗೊಳ್ಳುತ್ತಿದೆ.
ದಿನಾಂಕ ೨೭-೧೨-೨೦೧೧ರಂದು ನಡೆದ ೯ನೇಯ ತರಬೇತಿಯಲ್ಲಿ ಹ್ಯಾಟಿ ಗ್ರಾಮದ ೧೦೮ ಜನ ರೈತರು ಭಾಗವಹಿಸಿದ್ದರು. ತರಬೇತಿಯ ಉದ್ಘಾಟನೆಯಲ್ಲಿ ವಿಸ್ತರಣಾ ಮುಂದಾಳು ವಿ ಆರ್. ಜೋಶಿ ಹಾಗೂ ತಾಲೂಕು ಕೃಷಿಕ ಸಮಾಜದ ಸದಸ್ಯರುಗಳಾದ ದೇವಪ್ಪ ಬಹದ್ದೂರಬಂಡಿ, ಗ್ಯಾನಪ್ಪ ಮತ್ತು ಚನ್ನವೀರಗೌಡ ಇವರುಗಳು ರೈತರಿಗೆ ತರಬೇತಿಯಲ್ಲಿನ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸದುಪಯೋಗ ಪಡೆಯಲು ಕೋರಿದರು. ಶೇಂಗಾ ಬೆಳೆಯ ವಿವಿಧ ತಳಿಗಳಬಗ್ಗೆ ಡಾ: ಮಲ್ಲಿಕಾರ್ಜುನ ಕೆಂಗನಾಳ ಪರಿಚಯಿಸಿದರು ಹಾಗೂ ರೋಗಗಳ ನಿರ್ವಹಣೆಯ ಬಗ್ಗೆ ಮತ್ತು ಲಘುಪೋಶಕಾಂಶಗಳ ಬಳಕೆಯ ಬಗ್ಗೆ ತಿಳಿಸಿದರು. ಯುಸೂಫಲಿ ನಿಂಬರಗಿ ಮಾನತಾಡಿ ವಿವಿಧ ಬೇಸಾಯ ಪದ್ದತ್ತಿಗಳ ಬಗ್ಗೆ ವಿವಿರಿಸಿದರು. ಕಿರಣ ಕುಮಾರ ಮಾತನಾಡಿ ಶೇಂಗಾ ಬೆಳೆಯಲ್ಲಿ ಕೀಟನಿರ್ವಹಣೆಯ ಬಗ್ಗೆ ರೈತರೊಂದಗೆ ಚರ್ಚಿಸಿದರು. ತರಬೇತಿಯ ಸಮಾರೋಪದಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ. ಬಿ. ಬಾಲರೆಡ್ಡಿ ರೈತರನ್ನು ಉದ್ದೇಶಿಸಿ ಮಾತನಾಡಿ ಶೇಂಗಾ ಬೆಳೆಯಲ್ಲಿ ಲಘು ಪೋಶಕಾಂಶಗಳನ್ನು ಸೂಕ್ತವಾಗಿ ಬಳಸಲು ಸಲಹೆ ನೀಡಿದರು. ಬೀಜೋಪಚಾರದ ಬಗ್ಗೆ ವಿವರಿಸಿ ರೈತರು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೃಷಿ ವಿಸ್ತರಣಾ ಶಿಕ್ಷಣ ಘಟಕಕ್ಕೆ ಭೇಟಿ ನೀಡಿ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒತ್ತು ನೀಡಿದರು.
0 comments:
Post a Comment