ಕೊಪ್ಪಳ,ನ.: ಭಾರತದಲ್ಲಿ ೬೦೦ಕ್ಕಿಂತ ಹೆಚ್ಚು ಮತ್ತು ಕರ್ನಾಟಕ ರಾಜ್ಯದಲ್ಲಿ ೫೦ ಬುಡಕಟ್ಟಿ ಸಮುದಾಯಗಳು ಜೀವನ ನಡೆಸುತ್ತಿದ್ದಾರೆ. ಪ್ರಕೃತಿಯ ಜೊತೆಯಲ್ಲಿ ಬಾಳುವ ಬುಡಕಟ್ಟು ಸಮುದಾಯದ ನಾವುಗಳು ಈ ನಾಡಿನ ನೆಲ, ಜಲ, ಅರಣ್ಯ, ಪ್ರಾಣಿ-ಪಕ್ಷಿ, ಜೀವ ಜಂತುಗಳೊಂದಿಗೆ ಸಾಮರಸ್ಯದಿಂದ ಬದುಕಿ ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ, ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಕರೆ ನೀಡಿದರು.
ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮೃದ್ಧ ಸಆಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸವಿರುವ ಬುಡಕಟ್ಟು ಸಮುದಾಯಗಳು ಸರಕಾರ ಮತ್ತು ಆಡಳಿತ ವ್ಯವಸ್ಥೆಯ ಕೆಲವಾರು ಅಭಿವೃದ್ಧಿ ಕಾರ್ಯಗಳ ನಡುವೆ ನಿರ್ಲಕ್ಷ ಮತ್ತು ತಾತ್ಸಾರಕ್ಕೊಳಗಾಗಿ ದಿವಾಳಿ ಅಂಚಿಗೆ ತಳ್ಳಲ್ಪಟ್ಟಿದ್ದಾರೆ ಎಂದರು.
ಆದಿವಾಸಿ ಜನಸೇವಾ ಸಂಘದ ರಾಜ್ಯ ಸಾಂಸ್ಕೃತಿಕ ಸಂಚಾಲಕ ಹೇಮರಾಜ ವೀರಾಪುರ ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ. ೬.೬ ಇರುವ ಬುಡಕಟ್ಟು ಸಮುದಾಯಗಳಿಗೆ ಸರಕಾರದ ಮೀಸಲಾತಿ ಇರುವುದು ಕೇವಲ ಶೇ, ೩ ಮಾತ್ರ. ಇಂದಿಗೂ ಲಕ್ಷಾಂತರ ಸಮುದಾಯಗಳಿಗೆ ವಾಸಮಾಡಲು ಮನೆ, ಬಹುತೇಕರಿಗೆ ಜೀವನ ನಡೆಸಲು ಭೂಮಿ ಇಲ್ಲದಿರುವುದು, ಕೈಗಾರಿಕೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಸರಕಾರ ದೌರ್ಜನ್ಯ ಎಸಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ ೨೦೦೬ ಮತ್ತು ೨೦೦೮ನ್ನು ಪರಿನಾಮಕಾರಿಯಾಗಿ ಜಾರಿ ಮಾಡದೆ ಸಮುದಾಯವನ್ನು ಅರಣ್ಯದಿಂದ ಗುಳೇ ಎಬ್ಬಿಸುವುದು ಸರಿಯಲ್ಲ. ನಮ್ಮ ನೆಲ, ಜಲ, ಸಂಸ್ಕೃತಿ ಉಳಿವಿಗಾಗಿ ನಡೆಯಲಿರುವ ೧೩೬ನೆಯ ಬಿರ್ಸಾಮುಂಡಾ ಜಯಂತಿ ಅಂಗವಾಗಿ ಆದಿವಾಸಿಗಳ ಹಕ್ಕೊತ್ತಾಯ ಕಾರ್ಯಕ್ರಮವು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನ.೧೫ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆದಿವಸಿಗಳು, ಆದಿವಾಸಿ ಅಭಿಮಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಶಿಲವಂತರ, ಮೈಲೆಪ್ಪ ಬಿಸರಳ್ಳಿ, ಶಿವಾನಂದ ಹೊದ್ಲೂರು ಹಾಗೂ ಆದಿವಾಸಿ ಜನಸೇವಾ ಸಂಘದ ಕಾರ್ಯಕರ್ತೆ ಎಚ್. ಸೌಭಾಗ್ಯ ಇದ್ದರು.
0 comments:
Post a Comment