PLEASE LOGIN TO KANNADANET.COM FOR REGULAR NEWS-UPDATES


ವಿದ್ಯಾಗಿರಿ: ಸಮಾಜದಲ್ಲಿ ಹೆಚ್ಚುತ್ತಿರುವ ಮಾರುಕಟ್ಟೆ ಮನೋಧರ್ಮದಿಂದ ಕನ್ನಡ ಶಾಲೆಗಳು ಉಳಿಯಲು ಸಾಧ್ಯವಿಲ್ಲ. ಆದರೆ, ನಿಜವಾದ ಕನ್ನಡದ ಮನಸ್ಸು ಕನ್ನಡ ಶಾಲೆಗಳನ್ನು ಮುಚ್ಚು ವುದಿಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅವರು ಶುಕ್ರವಾರ ೮ನೇ ಆಳ್ವಾಸ್ ನುಡಿಸಿರಿ ಉದ್ಘಾಟಿಸಿ, ಸಮಾಜದಲ್ಲಿ ಮಿಲಿಟರಿ ಮನೋ ಧರ್ಮ ಮತ್ತು ಮಾರುಕಟ್ಟೆ ಮನೋಧರ್ಮ ಹೆಚ್ಚುತ್ತಿದೆ. ಮಾರುಕಟ್ಟೆ ಮನೋಧರ್ಮಕ್ಕೆ ಲಾಭವೇ ಮುಖ್ಯ. ಉಳಿದೆಲ್ಲ ಗೌಣ. ಈ ಮನೋಧರ್ಮದಿಂದ ಕನ್ನಡ ಶಾಲೆಗಳು ಉಳಿಯುವುದು ಅಸಾಧ್ಯ ಎಂದರು.

ಇಂದು ರಾಜಕೀಯ ನಾಯಕರನ್ನು ಸೋಲಿಸುವ ಮಟ್ಟಕ್ಕೆ ಆರ್ಥಿಕ ನಾಯಕತ್ವ ಬೆಳೆದಿದೆ. ಸರ್ಕಾರಗಳು ತೈಲಬೆಲೆ ನಿಯಂತ್ರಿಸಲಾಗದ ಮಟ್ಟಕ್ಕೆ ಅಸಮರ್ಥವಾಗಿರುವುದು ಇದಕ್ಕೆ ಸಾಕ್ಷಿ. ಪಕ್ಷ ಯಾವುದೇ ಆಗಲಿ, ಅವು ಆರ್ಥಿಕ ನಾಯಕತ್ವದ ಅಡಿಯಾಳಾಗಿ ಕಾರ್ಯನಿರ್ವಹಿಸುತ್ತವೆ. ಆರ್ಥಿಕ ನಾಯಕತ್ವವು ಶೈಕ್ಷಣಿಕ, ರಾಜಕೀಯ ಮತ್ತು ಸ್ವಲ್ಪ ಮಟ್ಟಿಗೆ ಸಾಂಸ್ಕೃತಿಕ ಕ್ಷೇತ್ರಗಳನ್ನು ಆಳಲು ಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

’ಮಾರುಕಟ್ಟೆ ಮನೋಧರ್ಮ ಪ್ರಬಲವಾಗಿ, ಅಮೆರಿಕ ಅಮಲಿನಲ್ಲಿ ಹಾಳಾಗುವ ಪ್ರವೃತ್ತಿ ಹೆಚ್ಚುತ್ತಿದೆ. ಅಮೆರಿಕದಿಂದ ಏನು ಬೇಕಾದರೂ ಅರಿವಾಗಿ ಬರಲಿ. ಆದರೆ, ಅಮಲಾಗಿ ಬರುವುದು ಬೇಡ’ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡದ ಮನಸ್ಸುಗಳ ಹುಡುಕುವ ಪ್ರಯತ್ನ: ಮಾರುಕಟ್ಟೆ ಮನೋಧರ್ಮ ಮತ್ತು ಮಿಲಿಟರಿ ಮನೋಧರ್ಮಗಳ ನಡುವೆ ನಿಜವಾದ ಕನ್ನಡದ ಮನಸ್ಸುಗಳನ್ನು ಹುಡಕುವ ಕೆಲಸ ನುಡಿಸಿರಿ ಯಿಂದ ನಡೆಯುತ್ತಿದೆ. ಕನ್ನಡದ ಮನಸ್ಸುಗಳ ಸಾಮರಸ್ಯಕ್ಕೆ ನುಡಿಸಿರಿಯೇ ಸಾಕ್ಷಿ.

ದಕ್ಷಿಣ ಕನ್ನಡದ ಜನ ಮಾತನಾಡುವುದು ತುಳು. ಆದರೆ, ಅವರು ನಿಜವಾದ ಕನ್ನಡದ ಮನಸ್ಸು ಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇದು ನಿಜವಾದ ಸಾಮರಸ್ಯದ ಸಂಕೇತ. ನಮ್ಮ ನಮ್ಮ ಕೂಪಗಳನ್ನು ಮೀರಿ ನಿಂತಾಗ ಮಾತ್ರ ಸಾಮರಸ್ಯ ಸಾಧ್ಯ ಎಂದರು.

’ಕೆಲವರು ಚರಿತ್ರೆಯನ್ನೇ ಪುರಾಣ ಅಂದುಕೊಂಡಿದ್ದಾರೆ. ಇನ್ನು ಕೆಲವರು ಪುರಾಣವನ್ನು ಚರಿತ್ರೆ ಎಂದು ಬಿಂಬಿಸಹೊರಡುತ್ತಾರೆ. ಆಗ ಮನಸ್ಸುಗಳನ್ನು ಮೀರಿದ ಅಸಹನೆ ಸೃಷ್ಟಿಯಾಗುತ್ತದೆ. ನಮ್ಮ ಭಾಷೆಯನ್ನು ನಮ್ಮ ಜೊತೆ ವಾಸಿಸುವವರ ಮೇಲೆ ಹೇರಲು ಹೊರಟಾಗ ಸಂಘರ್ಷ ಉಂಟಾಗುತ್ತದೆ. ದೈಹಿಕ ನೆಲೆಯ ಚಿಂತನೆಗಳು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟರೆ, ಮಾನಸಿಕ ನೆಲೆಯ ಚಿಂತನೆಗಳು ಸಾಮರಸ್ಯಕ್ಕೆ ಸಹಕಾರಿ.

ಕನ್ನಡವನ್ನು ಒಂದು ಸಂಸ್ಕೃತಿಯಾಗಿ ನೋಡಿದರೆ ಅದೇ ನಿಜವಾದ ಕರ್ನಾಟಕ ಸಂಸ್ಕೃತಿ. ಗೌರವಯುತವಾಗಿ ಮತ್ತು ವ್ಯಕ್ತಿ ದ್ವೇಷವಿಲ್ಲದೆ ಸಂಘರ್ಷ ನಡೆಸಿದರೆ ಅದು ನಿಜವಾದ ಕನ್ನಡದ ಮನಸ್ಸು. ಸಾಮರಸ್ಯ ಅಂದರೆ ಅಸಹಾಯಕತೆಯಲ್ಲ. ಹಾಗೆಯೇ ಸಂಘರ್ಷವೆಂದರೆ ಅಕ್ರಮಣ ಶೀಲತೆಯೂ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’, ಎಂದರು.

ಜಾತಿ ವ್ಯವಸ್ಥೆಯಲ್ಲಿ ಹೆಚ್ಚಳ: ವಿದ್ಯಾವಂತರು ಹೆಚ್ಚಿದಂತೆ ಜಾತಿ ವ್ಯವಸ್ಥೆ ನಾಶವಾಗುವ ಬದಲಾಗಿ ಹೆಚ್ಚಿದೆ. ವೇದಿಕೆ ಮೇಲೆ ಮಾತನಾಡುವುದಕ್ಕೂ, ಬದುಕುವುದಕ್ಕೂ ವ್ಯತ್ಯಾಸವಿರು ವುದೇ ಇದಕ್ಕೆ ಕಾರಣ. ಇವುಗಳನ್ನೆಲ್ಲ ದೂರವಿಟ್ಟು ಜಾಗತೀಕರಣದ ಹುಸಿ ಮಾದರಿಗಳಿಂದ ಕನ್ನಡದ ತನ ಸಾಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಪುಸ್ತಕ, ಪತ್ರಿಕೆ ಬಿಡುಗಡೆ: ಅನು ಬೆಳ್ಳೆಯವರು ಬರೆದ ‘ಕೆದಂಬಾಡಿ ಜತ್ತಪ್ಪ ರೈ ಅವರ ಬದುಕು ಬರಹ’, ಇಸ್ಮಾಯಿಲ್ ಮೂಡುಶೆಡ್ಡೆಯವರು ಬರೆದ ‘ಮೋಹನ ರಾಗ’ ಹಾಗೂ ಕಳೆದ ವರ್ಷದ ನುಡಿಸಿರಿಯ ಸಂಪೂರ್ಣ ಸಂಗ್ರಹ ರೂಪ ಪುಸ್ತಕ ‘ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.



ಆಳ್ವಾಸ್ ಕಾಲೇಜ್‌ನ ವಿದ್ಯಾರ್ಥಿಗಳು ರೂಪಿಸಿದ ಆಳ್ವಾಸ್ ಮಾಧ್ಯಮದ ವಿಶೇಷ ಸಂಚಿಕೆ ಹಾಗೂ ವಿದ್ಯಾರ್ಥಿ ಯಶೋಧರ ಬಂಗೇರ ರೂಪಿಸಿರುವ ‘ಬಿದಿರೆ’ ಪತ್ರಿಕೆಗಳನ್ನು ಸಮ್ಮೇಳದ ಅಧ್ಯಕ್ಷ ಎಂ.ಎಂ. ಕಲಬುರ್ಗಿ ಬಿಡುಗಡೆ ಮಾಡಿದ

Advertisement

0 comments:

Post a Comment

 
Top