PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ನ. ೦೩ (ಕ.ವಾ) : ಕಳೆದ ಸೆಪ್ಟಂಬರ್ ೧೮, ೧೯ ರಂದು ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ದಿನಾಂಕ ೦೯ ರಿಂದ ೧೧-೧೧-೨೦೧೧ ರವರೆಗೆ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ ಗುಂಪು -೧ರ ಅಥ್ಲೆಟಿಕ್ಸ್, ವ್ಹಾಲಿಬಾಲ್, ಬಾಸ್ಕೆಟ್ ಬಾಲ್ ಸ್ಪರ್ಧೆಯ ಕ್ರೀಡೆಗೆ ಪಾಲ್ಗೊಳ್ಳಲು ಈ ಮೂಲಕ ಸೂಚಿಸಲಾಗಿದೆ.
ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದಿನಾಂಕ ೦೯-೧೧-೨೦೧೧ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ  ಬೆಳಿಗ್ಗೆ ೯.೦೦ ಗಂಟೆಗೆ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ. ಅಂದು ಅಪರಾಹ್ನ ೩.೦೦ ಗಂಟೆಗೆ ಕ್ರೀಡಾಕೂಟ ಉದ್ಘಾಟನೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಸಂಘಟಿಕರು ಕ್ರೀಡಾಪಟುಗಳಿಗೆ ಸಾಮಾನ್ಯ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿರುತ್ತಾರೆ.  ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆಯನ್ನು ಸಂಘಟನೆಯ ನಂತರ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಸಿ.ಎ.ಪಾಟೀಲ್, ವ್ಹಾಲಿಬಾಲ್ ತರಬೇತುದಾರರು, ಹಾಗೂ ೯೪೮೬೩೩೧೪೬ ಎ.ಯತಿರಾಜು ಖೋಖೋ ತರಬೇತಿದಾರರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಎನ್.ಘಾಡಿ  ಕೋರಿದ್ದಾರೆ. 

Advertisement

0 comments:

Post a Comment

 
Top