ಕೊಪ್ಪಳ ನ. : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ತರಬೇತಿ ಕಾರ್ಯಕ್ರಮದ ಅಡಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹುಮನಾಬಾದ್ (ಬೀದರ್ ಜಿಲ್ಲೆ) ಇವರ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯ ಅವಧಿಯು ೩೦ ದಿನಗಳ ಅವಧಿಯದಾಗಿದ್ದು, ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ೧೦೦೦ ರೂ.ಗಳ ತರಬೇತಿ ಭತ್ಯೆ ನೀಡಲಾಗುವುದು. ತರಬೇತಿ ಸಮಯದಲ್ಲಿ ವಾಸ್ತವ್ಯಕ್ಕೆ ಅಭ್ಯರ್ಥಿಗಳೇ ವ್ಯವಸ್ಥೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು, ವಾರ್ಷಿಕ ಆದಾಯ ರೂ. ೪೦೦೦೦, ನಗರ ಪ್ರದೇಶದವರಿಗೆ ರೂ. ೫೫೦೦೦ ಮೀರಿರಬಾರದು, ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು, ಕನಿಷ್ಟ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು, ಲಘುವಾಹನ ಚಾಲನಾ ಪರವಾನಗಿ ಪಡೆದು ಒಂದು ವರ್ಷ ಪೂರ್ಣವಾಗಿರಬೇಕು, ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವ-ವಿವರಗಳನ್ನು ಒಳಗೊಂಡ ಕೈಬರಹದ ಅಥವಾ ಬೆರಳಚ್ಚು ಮಾಡಿದ ಅರ್ಜಿಯೊಂದಿಗೆ ಅಗತ್ಯ ಪೂರಕ ದಾಖಲಾತಿಗಳನ್ನು ಲಗತ್ತಿಸಿ ವಿಭಾಗ ವ್ಯವಸ್ಥಾಪಕರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಗುಲಬರ್ಗಾ ವಿಭಾಗ, ೩ನೇ ಮಹಡಿ, ವಿಕಾಸಭವನ (ಮಿನಿ ವಿಧಾನಸೌಧ) ಗುಲಬರ್ಗಾ ಇವರಿಗೆ ನವೆಂಬರ್ ೩೦ ಒಳಗಾಗಿ ಸಲ್ಲಿಸಬೇಕು ಎಂದು ವಿಭಾಗದ ವ್ಯವಸ್ಥಾಪಕ ಆರ್.ಆರ್. ಮಠ್ ಅವರು ತಿಳಿಸಿದ್ದಾರೆ.
0 comments:
Post a Comment