ಕೊಪ್ಪಳ : ಇಂದಿನ ಸ್ಪರ್ಧಾ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ, ಯುವಜನತೆಯಲ್ಲಿ ಸಂಗಿತಾಸಕ್ತಿ ಕೊರತೆ ಎದ್ದು ಕಾಣುತ್ತಿದೆ. ಯುವ ಜನಾಂಗ ಟಿ.ವಿ. ಹಾಗೂ ಮೊಬೈಲ್ ಮೋಜಿಗೆ ಬಿದ್ದು ಸಂಗೀತದಿಂದ ದೂರ ಉಳಿಯುತ್ತಿದ್ದಾರೆಂದು. ಯುವ ಜನರಲ್ಲಿ ಉತ್ಸಾಹ ಹೆಚ್ಚಾದಾಗಲೇ ಇಂತಹ ಯುವಜನೋತ್ಸವಕ್ಕೆ ಅರ್ಥ ಬರುತ್ತದೆ ಎಂದು ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಭಾಗ್ಯನಗರದ ಪ್ರಾಚಾರ್ಯ ಸಿ.ವಿ.ಜಡಿಯವರ ಹೇಳಿದರು.
ಅವರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕೊಪ್ಪಳ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಆಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜರುಗಿದ ೨೦೧೧-೧೨ನೇ ಸಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಯುವ ಜನಾಂಗ ದುಶ್ಚಟಕ್ಕೆ ದಾಸರಾಗಿ ತಮ್ಮನ್ನು ತಾವು ಮುಖ್ಯವಾಹಿನಿಯಿಂದ ದೂರವಾಗುತ್ತಿದ್ದಾರೆ. ಅಧ್ಯಯನ ಶೀಲತೆಯನ್ನು ಮೈಗೂಡಿಸಿಕೊಂಡು ಕಲೆಯನ್ನು ವೃದ್ಧಿಸಿಕೊಳ್ಳಬೇಕು. ಇದಲ್ಲದೇ, ಯುವ ಜನಾಂಗ ಪಾಶ್ಚಾತ್ತ್ಯ ಸಂಗೀತಕ್ಕೆ ಹೆಚ್ಚಿನ ಒಲವು ನೀಡುತ್ತಿದ್ದು ಇದರಿಂದ ಜಾನಪದವನ್ನು ಕಡೆಗಣಿಸುತ್ತಿರುವುದು ಸೂಕ್ತವಲ್ಲ ಎಂದ ಅವರು, ನಮ್ಮ ದೇಶಿಯ ಸಂಗೀತವನ್ನು ಗುರುತಿಸುವ ಹಾಗೂ ಅದನ್ನು ಬೆಳೆಸುವ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇಂತಹ ಕಾರ್ಯಕ್ರಮದಲ್ಲಿ ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಭಾಗದ ಹಿರಿಯ ಕಲಾವಿದರ ಮಾರ್ಗದರ್ಶನದೊಂದಿಗೆ ಸ್ಪರ್ಧೆಗಳಿಗೆ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವ ಮೂಲಕ ಈ ನೆಲದ ಋಣವನ್ನು ತೀರಿಸುವಂತಾಗಬೇಕು ಎಂದು ಸಿ.ವಿ.ಜಡಿಯವರ ಕರೆ ನೀಡಿದರು.
ವಿಜೇತ ಸ್ಪರ್ಧಾಳುಗಳ ವಿವರ : ಇಂದು ನಡೆದ ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳ ಪಟ್ಟಿ ಈ ಕೆಳಗಿನಂತಿದೆ.
ಜಾನಪದ ನೃತ್ಯದಲ್ಲಿ ಕೊಪ್ಪಳದ ಗೌರಿಶಂಕರ ಯುವಕ ಮಂಡಳ ಪ್ರಥಮ, ಕುಷ್ಟಗಿ ತಾಲೂಕು ದೋಟಿಹಾಳ ಗ್ರಾಮದ ಬನಶಂಕರಿ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಜನಪದ ಗೀತೆಯಲ್ಲಿ ಗಂಗಾವತಿಯ ಶಿಲ್ಪಾ ತಂಡ ಪ್ರಥಮ ಸ್ಥಾನ ಪಡೆದರೆ, ಕೊಪ್ಪಳ ತಾಲೂಕಿನ ಅಂದಪ್ಪ ತಂಡ ದ್ವಿತಿಯ ಸ್ಥಾನ ಪಡೆದುಕೊಂಡಿದೆ. ಅದೇ ರೀತಿಯಾಗಿ ಕುಚುಪುಡಿ ನೃತ್ಯದಲ್ಲಿ ಕೊಪ್ಪಳದ ಅಶೀಕ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಭರತನಾಟ್ಯದಲ್ಲಿ ಭಾಗ್ಯನಗರದ ಸ್ವಾತಿ ಪ್ರಥಮ ಸ್ಥಾನ, ಆಶುಭಾಷಣದಲ್ಲಿ ಕೊಪ್ಪಳ ತಾಲೂಕಿನ ಗೊಂಡಬಾಳದ ಮಲ್ಲಪ್ಪ ಪ್ರಥಮ ಸ್ಥಾನ, ಗಂಗಾವತಿಯ ರವಿಚಂದ್ರ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಶಾಸ್ತ್ರೀಯ ಸಂಗೀತದಲ್ಲಿ ಮಲ್ಲಯ್ಯ ಹಿರೇಮಠ ಪ್ರಥಮ ಸ್ಥಾನ, ಶಕುಂತಲಾ ಬೆನ್ನಾಳ ದ್ವಿತಿಯ ಸ್ಥಾನ ಪಡೆದುಕೊಂಡರು. ತಬಲ ಸೊಲೋದಲ್ಲಿ ಜಲೀಲ ಪಾಶಾ ಪ್ರಥಮ, ಪ್ರತಾಪ ಹಿರೇಮಠ ದ್ವಿತಿಯ ಸ್ಥಾನ ಪಡೆದುಕೊಂಡರೇ ಕೊಳಲು ವಾದದಲ್ಲಿ ನಾಗರಾಜ ಶ್ಯಾವಿ ಹಾಗೂ ಸಿತಾರ್ ವಾದನದಲ್ಲಿ ಶರಣಪ್ಪ ಹಂಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಲಾಸ್ ಎನ್.ಘಾಡಿ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
0 comments:
Post a Comment