PLEASE LOGIN TO KANNADANET.COM FOR REGULAR NEWS-UPDATES




koppal: ಇಂದಿನ ಸ್ಪರ್ದಾತ್ಮಕ ಮತ್ತು ಯಾಂತ್ರಿಕ ಯುಗದಲ್ಲಿ ಪೌರಾಣಿಕ ನಾಟಕಗಳು ಮನುಷ್ಯನಿಗೆ ನೆಮ್ಮದಿ ನೀಡುವ ಕೇಂದ್ರಗಳಾಗಿವೆ. ಈ ಪ್ರಕಾರದ ನಾಟಕಗಳು ಜನರನ್ನು ರಂಗಭೂಮಿಯ ಕಡೆಗೆ ಸೇಳೆಯುತ್ತವೆ. ಎಂದು  ಸಣ್ಣ ಕೈಗಾರಿಕಾ ಸಚಿವ ರಾಜುಗೌಡ (ನರಸಿಂಹನಾಯಕ) ಹೇಳಿದರು.
       ಕೊಪ್ಪಳ ತಾಲೂಕು ಹನುಮನಳ್ಳಿಯ ಶ್ರೀ ಮಾರುತ್ತೇಶ್ವರ ಜಾತ್ರೆಯ ಅಂಗವಾಗಿ ಮಾರುತ್ತೇಶ್ವರ ನಾಟ್ಯ ಸಂಘ ಹನುಮನಳ್ಳಿ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ  ಗಂಡುಗಲಿ ಕುಮಾರರಾಮ ಎಂಬ ಸುಂದರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. 
    ನಾಟಕದ ಪ್ರಕಾರಗಳಾದ ಸಾಮಾಜಿಕ ನಾಟಕಗಳಿಗಿಂತ ಪೌರಾಣಿಕ ನಾಟಕಗಳಿಂದ ಹಳ್ಳಿಗರಿಗೆ ಉತ್ತಮ ನಡವಳಿಕೆ, ಮನರಂಜನೆ ಹಾಗೂ ಹಬ್ಬದ ವಾತಾವರಣವನ್ನು ಮೂಡಿಸುತ್ತವೆ.  ನಾಟಕಗಳು ಸಾಮಾನ್ಯ ಜನರಿಗೆ ಉತ್ತಮ ಸಾಮರಸ್ಯ ಮತ್ತು ಸೌಹಾರ್ದತೆ ಮೂಡಿಸಲು ನೆರವಾಗುತ್ತವೆ.  ಆದರೆ ಇತ್ತೀಚಿನ ದಿನಗಳಲ್ಲಿ ನಾಟಕ ಪ್ರಯೋಗಗಳು ಕಡಿಮೆಯಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

  ಸಮಾರಂಭದಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಹಾವಳಿಯಿಂದ ನಾಟಕಗಳೇ ಮಾಯವಾಗುವ ಪರಸ್ಥಿತಿ  ಬಂದಿರುವುದು ತುಂಬಾ ಶೋಚನೆಯ. ಆರ್ಥಿಕ ಸಂಪನ್ಮೂಲದ ಕೊರತೆಯಿಂದಾಗಿ ರಂಗಭೂಮಿ ಕಲಾವಿದರು ಈ ತರಹದ ಪ್ರಯತ್ನಗಳಿಗೆ ಕೈಹಾಕುವುದು ತುಂಬಾ ವಿರಳ ಆದರೆ ಹನುಮನಳ್ಳಿ ಗ್ರಾಮಸ್ಥರ ಪ್ರಯತ್ನ ಪ್ರಸಂಶಿನಿಯವಾದದು ಎಂದರು. ರೈತರು, ಕೃಷಿ ಕಾರ್ಮಿಕರು, ಗಾರೆ ಕೆಲಸದವರು, ಇನ್ನಿತರರು ಸೇರಿ ಗುರು ಕಾಣಿಕೆ ಸಲ್ಲಿಸಿ ಈ ತರದ ಪ್ರಯತ್ನ ಮಾಡಿರುವುದು ನಿಜವಾದ ರಂಗಭೂಮಿ ಆಸಕ್ತಿಯನ್ನು ತೊರಿಸುತ್ತದೆ. ರಾಮಾಯಣ, ಮಹಾಭಾರತ, ಎಚ್ಚಮ ನಾಯಕ, ಗಂಡುಗಲಿ ಕುಮಾರರಾಮ, ಮುಂತಾದ ಪೌರಾಣಿಕ ನಾಟಕಗಳಿಂದ ಒಳ್ಳೆಯ ಗುಣಗಣನ್ನು ಅಳವಡಿಸಿಕೊಳ್ಳಲು ಪೂರಕವಾಗಿವೆ. ಡಾ|| ರಾಜಕುಮಾರರಂತಹ ಮಹಾನ್ ಕಲಾವಿದರು ಪೌರಾಣಿಕ ನಾಟಕಗಳಿಂದಾಗಿಯೇ ಬೆಳಕಿಗೆ ಬಂದಿದ್ದು ಎಂದರು. ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರದಾನ ವೇದಿಕೆಗೆ ಗಂಡುಗಲಿ ಕುಮಾರರಾಮನ ಹೆಸರಿಟ್ಟು ಸರ್ಕಾರ ಅವರನ್ನು ಗೌರವಸಿದೆ ಎಂದು ಅವರು ನುಡಿದರು.
 ಜಿಲ್ಲಾ ಪಂಚಾಯತ ಸದಸ್ಯ ನಾಗನಗೌಡ, ಗಣ್ಯರಾದ ಪ್ರಸನ ಗಡಾದ, ನಾಟಕ ನಿದೇರ್ಶಕ ನಾಗರಾಜ ಬೇಳೂರು, ನಾಗಪ್ಪ ದಳಪತಿ, ಸಿಪಿಐ ವೆಂಕಟಪ್ಪ ನಾಯಕ, ಡಿ.ಮಲ್ಲಣ್ಣ, ಬಿಇಓ ಉಮೇಶ ಪೂಜಾರ, ಸಿದ್ದಮ್ಮ ಮುರಡಿ, ರಾಘವೇಂದ್ರ ನರಗುಂದ, ಕುಬೇರಪ್ಪ ಬಡಿಗೇರ ಮತ್ತು ಹನುಮನಳ್ಳಿ ಗ್ರಾಮಸ್ತರು ಉಪಸ್ಥಿತರಿದ್ದರು. ಪ್ರಾಣೇಶ ಪೂಜಾರ ನಿರೂಪಿಸಿದರು.  ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವ ರಾಜುಗೌಡ್ರ ಮತ್ತು ಶಾಸಕ ಕರಡಿ ಸಂಗಣ್ಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

Advertisement

0 comments:

Post a Comment

 
Top