PLEASE LOGIN TO KANNADANET.COM FOR REGULAR NEWS-UPDATES


ಭಾರತದಿಂದ ತೀವ್ರ ಆಕ್ರೋಶ
ಹೊಸದಿಲ್ಲಿ, ನ.  : ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರನ್ನು ಅಮೆರಿಕದ ಭದ್ರತಾಧಿಕಾರಿಗಳು ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಎರಡು ಬಾರಿ ತಪಾಸಣೆ ನಡೆಸಿರುವುದೀಗ ವಿವಾದಕ್ಕೆ ಕಾರಣವಾಗಿದೆ. ಭದ್ರತಾಧಿಕಾರಿಗಳು ಅವರ ಮೇಲಂಗಿ ಹಾಗೂ ಶೂಗಳನ್ನು ತೆಗೆಸಿ ಸ್ಫೋಟಕ ಗಳಿಗಾಗಿ ತಪಾಸಣೆ ನಡೆಸಿರುವುದು ಭಾರತವನ್ನು ರೊಚ್ಚಿಗೆಬ್ಬಿಸಿದ್ದು, ಅಮೆರಿಕದ ಗಣ್ಯರ ವಿರುದ್ಧ ಪ್ರತೀಕಾರಾತ್ಮಕ ಕ್ರಮದ ಬೆದರಿಕೆ ಹಾಕಿದೆ.
ಸೆ.29ರಂದು 80ರ ಹರೆಯದ ಕಲಾಂರನ್ನು ನ್ಯೂಯಾರ್ಕ್‌ನಲ್ಲಿ ಏರ್ ಇಂಡಿಯಾ ವಿಮಾನವೊಂದನ್ನು ಏರುವ ಮೊದಲು ಇಂತಹ ತಪಾಸಣೆ ಗೊಳಪಡಿಸಲಾಗಿತ್ತು. ಕಲಾಂ ವಿಮಾನ ದಲ್ಲಿ ಕುಳಿತ ಬಳಿಕವೂ ಅಲ್ಲಿನ ಭದ್ರತಾಧಿಕಾರಿಗಳು ವಿಮಾನದ ಬಾಗಿಲ ನ್ನು ಬಲಾತ್ಕಾರವಾಗಿ ತೆರೆಸಿ ಅವರ ಮೇಲಂಗಿ ಹಾಗೂ ಶೂಗಳನ್ನು ಸ್ಫೋಟಕ ವಸ್ತುಗಳ ತಪಾಸಣೆಗಾಗಿ ಕೊಂಡೊ ಯ್ದರು. ಕಲಾಂ ವಿಮಾನವೇರುವ ಮೊದಲು ಅವುಗಳನ್ನು ಪರಿಶೀಲಿಸಲು ತಾವು ಮರೆತಿದ್ದೇವೆಂಬ ಕಾರಣವನ್ನು ನೀಡಿದ ಅವರು ಬಳಿಕ ಕಲಾಂಗೆ ಅವುಗಳನ್ನು ಹಿಂದಿರುಗಿಸಿದರೆಂದು ಮೂಲಗಳು ತಿಳಿಸಿವೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಅಮೆರಿಕದ ಭಾರತೀಯ ರಾಯಭಾರಿಣಿ ನಿರುಪಮಾ ರಾವ್‌ಗೆ ಕರೆ ಮಾಡಿ, ಈ ವಿಚಾರವನ್ನು ವಾಶಿಂಗ್ಟನ್‌ನ ಉನ್ನತ ಮಟ್ಟದೊಂದಿಗೆ ಲಿಖಿತವಾಗಿ ಪ್ರಸ್ತಾಪಿಸುವಂತೆ ಸೂಚಿಸಿದರು. ಈ ‘ಅನಂಗೀಕಾರಾರ್ಹ’ ಘಟನೆಯ ಕುರಿತು ವರದಿಯೊಂದನ್ನು ನೀಡುವಂತೆಯೂ ಅವರು ಭಾರತೀಯ ದೂತಾವಾಸಕ್ಕೆ ಆದೇಶಿಸಿದರೆಂದು ಮೂಲಗಳು ತಿಳಿಸಿವೆ. ಇಂತಹ ಘಟನೆ ಮರುಕಳಿಸಿದಲ್ಲಿ ರಾಜತಾಂತ್ರಿಕ ಕ್ರಮದಲ್ಲಿ ಪ್ರತಿಕಾರ ಕೈಗೊಳ್ಳುವ ಬೆದರಿಕೆಯನ್ನೂ ಭಾರತ ಹಾಕಿದೆಯೆಂದು ಅವು ಹೇಳಿವೆ.
ಕಲಾಂ ಅಂತಹ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಅವುಗಳ ಬಗ್ಗೆ ಎಂದೂ ದೂರು ಸಲ್ಲಿಸಿಲ್ಲವೆಂದು ಅವರ ನಿಕಟ ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಬಾರಿ ಕಲಾಂ ಭಾರತಕ್ಕೆ ಮರಳಿದ ಬಳಿಕ ಅವರ ಕಚೇರಿಯು ಈ ಘಟನೆಯ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಅಮೆರಿಕದ ವಿಮಾನಯಾನ ಅಧಿಕಾರಿಗಳು ಕಲಾಂರನ್ನು ತಪಾಸಣೆಗೊಳಪಡಿಸಿದುದು ಇದು ಮೊದಲ ಸಲವೇನಲ್ಲ. ಕಲಾಂರ ಹೆಸರು ತಪಾಸಣೆಯಿಂದ ವಿನಾಯಿತಿ ಪಡೆದಿರುವ ಭಾರತೀಯರ ಪಟ್ಟಿಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊದ ಬಳಿಯಿದ್ದಾಗಲೂ ಅವರನ್ನು 2009ರ ಎಪ್ರಿಲ್‌ನಲ್ಲಿ ಅಮೆರಿಕದ ಕಾಂಟಿನೆಂಟಲ್ ಏರ್‌ಲೈನ್ಸ್‌ನ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದರು.
ಇತ್ತೀಚಿನ ಘಟನೆಯ ವಿಸ್ತ್ರತ ವರದಿಯೊಂದನ್ನು ಏರ್ ಇಂಡಿಯಾದ ಭದ್ರತಾ ನಿರ್ದೇಶಕ ಎಸ್.ಮಾಥುರ್ ಸಿದ್ಧಪಡಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಅದು ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಅಕ್ಟೋಬರ್‌ನಲ್ಲಿ ರವಾನಿಸಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿರುವುದರಿಂದ ಅಲ್ಲಿನ ಭದ್ರತಾ ಸಂಸ್ಥೆಗಳೀಗ ತನಿಖೆ ನಡೆಸುತ್ತಿವೆಯೆಂದು ತನಗೆ ಮಾಹಿತಿ ಬಂದಿದೆ. ಇಂತಹದು ನಡೆಯಬಾರದೆಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ನಸೀಂ ಝೈದಿ ಹೇಳಿದರು.
ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಉಭಯ ದೇಶಗಳ ಅಧಿಕಾರಿಗಳೂ ಗಣ್ಯ ವ್ಯಕ್ತಿಗಳ ಸಾಮಾನ್ಯ ಪಟ್ಟಿ ತಯಾರಿ ಸಹಿತ ಅನೇಕ ಕ್ರಮಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದರು.
ಕ್ಷಮೆಯಾಚಿಸಿದ ಅಮೆರಿಕ
ಹೊಸದಿಲ್ಲಿ, ನ.13: ಅಮೆರಿಕದ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೊಳಪಡಿಸಿದ ಘಟನೆಯ ಕುರಿತು ಅಮೆರಿಕವು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರಿಂದ ಕ್ಷಮೆ ಯಾಚಿಸಿದೆ.ಕಲಾಂ ಹಾಗೂ ಭಾರತ ಸರಕಾರಕ್ಕೆ ಕಳುಹಿಸಿರುವ ಲಿಖಿತ ಕ್ಷಮಾ ಯಾಚನೆಯೊಂದರಲ್ಲಿ, ಗಣ್ಯರ ತುರ್ತು ತಪಾಸಣೆಯ ನಿಯಮವನ್ನು ಅಧಿಕಾರಿಗಳು ಅನುಸರಿಸಲಿಲ್ಲವೆಂದು ಅದು ಹೇಳಿದೆ.‘‘ಸೆ.29ರಂದು ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಕಲಾಂರನ್ನು ಭದ್ರತಾ ತಪಾಸಣೆಗೊಳಪಡಿಸುವ ಮೂಲಕ ಅವರಿಗೆ ಉಂಟುಮಾಡಿ ರುವ ಅನನುಕೂಲತೆಯ ಬಗ್ಗೆ ಆಳವಾಗಿ ವಿಷಾದಿಸುತ್ತೇವೆ’’ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಹೇಳಿದ್ದು ಅಮೆರಿಕ ಕಲಾಂರ ಬಗ್ಗೆ ಅತ್ಯಂತ ಗೌರವ ಹೊಂದಿದೆಯೆಂದು ನುಡಿದಿದೆ. ಮುಂದೆ ಅಂತಹ ಘಟನೆ ಮರುಕಳಿಸದಂತೆ ಅಮೆರಿಕ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಯೆಂದೂ ಅದು ಹೇಳಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಅಮೆರಿಕದ ಭಾರತೀಯ ರಾಯಭಾರಿಣಿ ನಿರುಪಮಾ ರಾವ್‌ಗೆ ಕರೆ ಮಾಡಿ, ಈ ವಿಚಾರವನ್ನು ವಾಶಿಂಗ್ಟನ್‌ನ ಉನ್ನತ ಮಟ್ಟದೊಂದಿಗೆ ಲಿಖಿತವಾಗಿ ಪ್ರಸ್ತಾಪಿಸುವಂತೆ ಸೂಚಿಸಿದರು.
ಈ ‘ಅನಂಗೀಕಾರಾರ್ಹ’ ಘಟನೆಯ ಕುರಿತು ವರದಿಯೊಂದನ್ನು ನೀಡುವಂತೆಯೂ ಅವರು ಭಾರತೀಯ ದೂತಾವಾಸಕ್ಕೆ ಆದೇಶಿಸಿದರೆಂದು ಮೂಲಗಳು ತಿಳಿಸಿವೆ. ಇಂತಹ ಘಟನೆ ಮರುಕಳಿಸಿದಲ್ಲಿ ರಾಜತಾಂತ್ರಿಕ ಕ್ರಮದಲ್ಲಿ ಪ್ರತಿಕಾರ ಕೈಗೊಳ್ಳುವ ಬೆದರಿಕೆಯನ್ನೂ ಭಾರತ ಹಾಕಿದೆಯೆಂದು ಅವು ಹೇಳಿವೆ.ಕಲಾಂ ಅಂತಹ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಹಾಗೂ ಅವುಗಳ ಬಗ್ಗೆ ಎಂದೂ ದೂರು ಸಲ್ಲಿಸಿಲ್ಲವೆಂದು ಅವರ ನಿಕಟ ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಬಾರಿ ಕಲಾಂ ಭಾರತಕ್ಕೆ ಮರಳಿದ ಬಳಿಕ ಅವರ ಕಚೇರಿಯು ಈ ಘಟನೆಯ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು.
ಅಮೆರಿಕದ ವಿಮಾನಯಾನ ಅಧಿಕಾರಿಗಳು ಕಲಾಂರನ್ನು ತಪಾಸಣೆಗೊಳಪಡಿಸಿದುದು ಇದು ಮೊದಲ ಸಲವೇನಲ್ಲ.
ಕಲಾಂರ ಹೆಸರು ತಪಾಸಣೆಯಿಂದ ವಿನಾಯಿತಿ ಪಡೆದಿರುವ ಭಾರತೀಯರ ಪಟ್ಟಿಯಲ್ಲಿ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊದ ಬಳಿಯಿದ್ದಾಗಲೂ ಅವರನ್ನು 2009ರ ಎಪ್ರಿಲ್‌ನಲ್ಲಿ ಅಮೆರಿಕದ ಕಾಂಟಿನೆಂಟಲ್ ಏರ್‌ಲೈನ್ಸ್‌ನ ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದರು.
ಇತ್ತೀಚಿನ ಘಟನೆಯ ವಿಸ್ತ್ರತ ವರದಿಯೊಂದನ್ನು ಏರ್ ಇಂಡಿಯಾದ ಭದ್ರತಾ ನಿರ್ದೇಶಕ ಎಸ್.ಮಾಥುರ್ ಸಿದ್ಧಪಡಿಸಿದ್ದು, ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಅದು ವರದಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಅಕ್ಟೋಬರ್‌ನಲ್ಲಿ ರವಾನಿಸಿದೆ. ಈ ಘಟನೆ ಅಮೆರಿಕದಲ್ಲಿ ನಡೆದಿರುವುದರಿಂದ ಅಲ್ಲಿನ ಭದ್ರತಾ ಸಂಸ್ಥೆಗಳೀಗ ತನಿಖೆ ನಡೆಸುತ್ತಿವೆಯೆಂದು ತನಗೆ ಮಾಹಿತಿ ಬಂದಿದೆ. ಇಂತಹದು ನಡೆಯಬಾರದೆಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ನಸೀಂ ಝೈದಿ ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಉಭಯ ದೇಶಗಳ ಅಧಿಕಾರಿಗಳೂ ಗಣ್ಯ ವ್ಯಕ್ತಿಗಳ ಸಾಮಾನ್ಯ ಪಟ್ಟಿ ತಯಾರಿ ಸಹಿತ ಅನೇಕ ಕ್ರಮಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದರು.

Advertisement

0 comments:

Post a Comment

 
Top