PLEASE LOGIN TO KANNADANET.COM FOR REGULAR NEWS-UPDATES


ಈಚೆಗಿನ ವರ್ಷಗಳಲ್ಲಿ ಸರಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನ್ಯಾಯಾಂಗ ಮತ್ತು ಮಾಧ್ಯಮಗಳು ಸಹ ಹಿಂಸೆಗೆ ಒಳಗಾದವರನ್ನೇ ಅಪರಾಧಿಗಳು ಅಥವಾ ನ್ಯಾಯಕ್ಕೆ ಅರ್ಹರಲ್ಲದ ಎರಡನೆಯ ದರ್ಜೆಯ ಪ್ರಜೆಗಳು ಎಂದು ಪರಿಗಣಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದೇ ವೇಳೆಗೆ ಹಿಂಸಾಕೃತ್ಯ ನಡೆಸುವವರಿಗೆ ಸರಕಾರ, ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಔದಾರ್ಯ ತೋರಿಸುತ್ತಿವೆ. ಹಿಂಸೆ ಕುರಿತು ಜನರ ಸಂವೇದನಾ ಶೂನ್ಯತೆ ಮತ್ತು ಸರಕಾರದ ಅಂಗ ಸಂಸ್ಥೆಗಳ ನಿಷ್ಕ್ರಿಯತೆಗೆ ಇನ್ನೊಂದು ಆಯಾಮವೂ ಇದೆ.
ಕೋಮು ಹಿಂಸೆಯ ಬಹುತೇಕ ಕೃತ್ಯಗಳನ್ನು ನಡೆಸುವ ವರು ತಕ್ಷಣ ಗುರುತು ಹಿಡಿಯಬಹುದಾದ ಒಬ್ಬರೋ ಇಬ್ಬರೋ ವ್ಯಕ್ತಿಗಳಲ್ಲ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ನಡೆದ ಹೆಚ್ಚಿನ ಕೋಮು ಹಿಂಸೆಯ ಪ್ರಕರಣಗಳಲ್ಲಿ ಹಿಂದುತ್ವದ ಸಂಘಟನೆ ಗಳ ಪ್ರಚೋದನೆಗೆ ಒಳಗಾಗಿ ನೂರಾರು, ಒಮ್ಮಿ ಮ್ಮೆ ಸಾವಿರಾರು ಜನ ಒಟ್ಟಾಗಿ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಧಾಳಿ ನಡೆಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಪರಿಚಿತರೂ ನಿರ್ದಿಷ್ಟ ಗುರುತು ಚಹರೆಗಳಿಲ್ಲದ ಮುಖರಹಿತರೂ ಆಗಿರುವ ಅಪರಾಧಿಗಳು ‘‘ನಾಪತ್ತೆಯಾಗಿ ದ್ದಾರೆ ಅಥವಾ ತಲೆಮರೆಸಿಕೊಂಡಿದ್ದಾರೆ’’ ಎಂದು ಶರಾ ಬರೆದು ಕೇಸು ಕ್ಲೋಸ್ ಮಾಡುವುದು ಪೊಲೀಸ್ ಇಲಾಖೆ ಮತ್ತು ಕೋರ್ಟುಗಳಿಗೆ ಅಭ್ಯಾಸವೇ ಆಗಿ ಹೋಗಿದೆ. ಹೀಗಾಗಿ ಸ್ವಾತಂತ್ರ್ಯಾನಂತರ ಕೋಮು ಹಿಂಸೆಯ ಸಣ್ಣ ಅಥವಾ ದೊಡ್ಡ ಯಾವ ಪ್ರಕರಣದಲ್ಲೂ ಅಪರಾಧಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿ ಅವರಿಗೆ ಸೂಕ್ತ ಶಿಕ್ಷೆ ಕೊಟ್ಟಿ ರುವ ಉದಾಹರಣೆ ಇಲ್ಲವೇ ಇಲ್ಲ ಎಂದರೂ ನಡೆಯುತ್ತದೆ.
ಭಾರತದ ಕಾನೂನು ವ್ಯವಸ್ಥೆ ಕೋಮು ಹಿಂಸೆ ನಡೆಸುವವರಿಗೆ ಅನುಕೂಲವಾಗು ವಂತೆಯೇ ಇದೆ. ಬ್ರಿಟಿಷ್ ವಸಾಹತು ಶಾಹಿಯ ಬಳುವಳಿಯಾದ ನಮ್ಮ ಕ್ರಿಮಿನಲ್ ಕಾಯ್ದೆ ಮತ್ತು ಅಪರಾಧ ವಿಚಾರಣಾ ಸಂಹಿತೆ, ಅವು ಈಗ ಜಾರಿಯಲ್ಲಿರುವಂತೆ ಸಮಾಜದ ಬಿಡಿ ಬಿಡಿ ವ್ಯಕ್ತಿಗಳು ನಡೆಸುವ ಹಿಂಸೆ, ವಂಚನೆ, ಅತಿಕ್ರಮಣ, ಕಾನೂನು ಉಲ್ಲಂಘನೆ, ದೇಶದ್ರೋಹ ಮುಂತಾದ ಕೃತ್ಯಗಳ ವಿಚಾರಣೆ ಹಾಗೂ ನ್ಯಾಯಪ್ರಧಾನ ಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿದೆ. ಸಂಘಟಿತ ಕೋಮು ಹಿಂಸೆಯನ್ನು ನಿಗ್ರಹಿಸಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ಸೂಕ್ತವಾದ ಕಾನೂನಿನ ಕಲಮುಗಳು ಕ್ರಿಮಿನಲ್ ಕಾಯ್ದೆ ಯಲ್ಲಾಗಲೀ ಅಪರಾಧ ವಿಚಾರಣೆ ಸಂಹಿತೆಯ ಲ್ಲಾಗಲಿ ಇಲ್ಲ; ಇರುವ ಕಲಮುಗಳಲ್ಲಿ ಅಪರಾಧಿಗಳಿಗೆ ತಪ್ಪಿಸಿ ಕೊಳ್ಳಲು ಸಾಕುಬೇಕೆನಿಸು ವಷ್ಟು ಅವಕಾಶಗಳಿವೆ.
ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಉಮಾಭಾರತಿ, ಬಾಳ್‌ಠಾಕ್ರೆ ಮುಂತಾದವರಿಗೆ ಇದುವರೆಗೂ ಯಾವ ಶಿಕ್ಷೆಯೂ ಆಗದಿರುವುದಕ್ಕೆ ಮತ್ತು ದೆಹಲಿಯ ಸಿಖ್ಖ್ ನರಮೇಧ, ಬಾಬರಿ ಮಸೀದಿ ಧ್ವಂಸ, ಮುಂಬೈ ಗಲಭೆ, ಮತ್ತು ಗುಜರಾತ್ ಹಿಂಸಾಕಾಂಡ ಮುಂತಾದವುಗಳ ತನಿಖೆಯ ನಾಟಕ ಈಗಲೂ ದೇಶದ ವಿವಿಧ ನ್ಯಾಯಾಲಯ ಗಳಲ್ಲಿ ಮುಂದುವರಿದಿರುವುದಕ್ಕೆ ದೇಶದ ಕ್ರಿಮಿನಲ್ ನ್ಯಾಯವ್ಯವಸ್ಥೆಯ ನ್ಯೂನತೆ ಕೂಡ ಒಂದು ಕಾರಣ. ಕೋಮುಹಿಂಸೆಯ ಹೆಚ್ಚಿನ ಪ್ರಕರಣ ಗಳನ್ನು ಅವುಗಳ ನ್ಯಾಯನಿರ್ಣಯದ ತೊಡಕು ಗಳು ಏನೇ ಇರಲಿ ಹಾಲಿ ಕ್ರಿಮಿನಲ್ ಕಾಯ್ದೆ ಪ್ರಕಾರವೇ ಅಪರಾಧ ಎಂದು ಗುರುತಿಸಬಹುದು. ಆದರೆ ಕೋಮು ಹಿಂಸೆಯನ್ನು ಪ್ರಚೋದಿಸುವ ದ್ವೇಷಪೂರಿತ ಅಪಪ್ರಚಾರ ನಿರ್ದಿಷ್ಟ ಸಮುದಾಯ ಗಳ ವಿರುದ್ಧ ಇಲ್ಲ ಸಲ್ಲದ ಆಪಾದನೆ, ತಮ್ಮ ಅಭಿಪ್ರಾಯ ಒಪ್ಪಿಕೊಳ್ಳದವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದು ಇವೇ ಮುಂತಾದ ‘‘ಮನಸ್ಸು ತೊಳೆಯುವ’’ ಕೋಮು ವಾದಿ ಕುತಂತ್ರಗಳನ್ನು ನಿಗ್ರಹಿಸಲು ಹಾಲಿ ಕ್ರಿಮಿ ನಲ್ ಕಾಯ್ದೆ ವಿಫಲವಾಗಿದೆ.
ಬಿಜೆಪಿ ಶಿವಸೇನೆ ಗಳಂತಹ ಬಲಪಂಥೀಯ ರಾಜಕೀಯ ಪಕ್ಷಗಳು, ಭಾಷಾದುರಭಿಮಾನದ ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ತಾವು ಒಲ್ಲದ ಅನ್ಯವಿಚಾರ ಅನ್ಯಧರ್ಮ ಮತ್ತು ಅನ್ಯಸಮುದಾಯಗಳ ವಿರುದ್ಧ ನಿರಂತರವಾಗಿ ಅಪಪ್ರಚಾರದಲ್ಲಿ ತೊಡಗಿ ಕೊಂಡಿವೆ. ಅವು ಸೃಷ್ಟಿಸಿರುವ ಸಮೂಹ ಸನ್ನಿ ಹಾಗೂ ಹಿಂಸಾರತಿಯ ಪರಿಣಾಮವಾಗಿ ಬೀದಿ ನಾಯಿಯನ್ನು ಕೂಡ ಹೊಡೆಯಲು ಹೇಸಿ ಕೊಳ್ಳುವ ಸಾಮಾನ್ಯ ಜನ, ದೇಶ, ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಕೊಲೆ ರಕ್ತಪಾತಗಳಿಗೆ ಸಜ್ಜಾಗುತ್ತಿದ್ದಾರೆ. ಹಿಂಸೆಯ ಈ ಸಾಮೂಹಿಕ ಮನೋವ್ಯಾಧಿಗೆ ಸಹ ಕ್ರಿಮಿನಲ್ ಕಾಯ್ದೆಯಲ್ಲಿ ಸೂಕ್ತ ಪರಿಹಾರಗಳಿಲ್ಲ. ಕೋಮುದ್ವೇಷ, ಧಾರ್ಮಿಕ, ಭಾಷಿಕ ಹಾಗೂ ಇತರ ಅಲ್ಪಸಂಖ್ಯಾತ ಜನಸಮುದಾಯಗಳ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಮುಂತಾದ ಕೆಡುಕುಗಳನ್ನು ನಿಗ್ರಹಿಸಲು ಸಮರ್ಥವಾದ ಕಾಯ್ದೆಯೊಂದರ ಕೊರತೆ ದೇಶ ವನ್ನು ದೀರ್ಘಕಾಲದಿಂದಲೂ ಬಾಧಿಸುತ್ತಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಮುಖ್ಯಸ್ಥರಾಗಿರುವ ರಾಷ್ಟ್ರೀಯ ಸಲಹಾ ಸಮಿತಿ (ಇದು ಸರಕಾರದ ಅಂಗ ಸಂಸ್ಥೆ ಅಲ್ಲ) ಸಿದ್ಧಪಡಿಸಿ ಸರಕಾರ ಮುಂದೆ ಇಟ್ಟಿರುವ ಮಸೂ ದೆಯ ಕರಡು ಈ ಕೊರತೆಯನ್ನು ನೀಗಿಸುವ ಉದ್ದೇಶ ಹೊಂದಿದೆ. 2004ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯುಪಿಎ ಸರಕಾರದ ಪ್ರಧಾನ ಪಕ್ಷವಾಗಿರುವ ಕಾಂಗ್ರೆಸ್ ಕೋಮು ಹಿಂಸೆಯ ನಿಯಂತ್ರಣಕ್ಕೆ ಸೂಕ್ತ ಮಸೂ ದೆಯೊಂದನ್ನು ಜಾರಿಗೆ ತರುವ ಆಶ್ವಾಸನೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿತ್ತು. 2005ರಲ್ಲಿ ಯುಪಿಎ ಸರಕಾರ ಈ ಮಸೂದೆಯ ಸ್ಥೂಲ ರೂಪುರೇಷೆಗಳನ್ನು ಜನರ ಮುಂದೆ ಇಟ್ಟಿತು. ಪ್ರಸ್ತಾಪಿತ ಮಸೂದೆ, ಕೇಂದ್ರ ಸರಕಾರಕ್ಕೆ ನಿರಂಕುಶ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ ಎಂಬ ಕಾರಣಕ್ಕೆ ಅದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು.
ಹಾಗಾಗಿ ಸರಕಾರ ಮಸೂದೆಯನ್ನು ಜಾರಿಗೆ ತರುವ ಆಲೋಚನೆಯನ್ನು ಕೈ ಬಿಟ್ಟಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮರಳಿ ಅಧಿಕಾರಕ್ಕೆ ಬಂದಿತು. ಅದು ನೇಮಿ ಸಿದ ರಾಷ್ಟ್ರೀಯ ಸಲಹಾ ಸಮಿತಿ, ಕೋಮು ಹಿಂಸೆ ನಿಯಂತ್ರಣಾ ಮಸೂದೆಯ ಪರಿಷ್ಕೃತ ಆವೃತ್ತಿಯೊಂದನ್ನು ಇದೀಗ ಸಿದ್ಧಪಡಿಸಿದೆ. ಅದು ಸದ್ಯಕ್ಕೆ ಸರಕಾರದ ಪರಿಶೀಲನೆಯಲ್ಲಿದ್ದು, ಲೋಕಸಭೆಯಲ್ಲಿ ಇನ್ನೂ ಮಂಡನೆಯಾಗಿಲ್ಲ. ಆದರೆ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳು ಈಗಾಗಲೇ ಮಸೂದೆ ಕುರಿತು ತಮ್ಮ ಆಕ್ಷೇಪ ಗಳನ್ನು ಹೇಳುವುದರ ಜೊತೆಗೆ ಬಹುಸಂಖ್ಯಾತ ಹಿಂದು ಸಮುದಾಯದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಭಯ ಆತಂಕಗಳನ್ನು ಹೆಚ್ಚಿಸುವ ತನ್ನ ಮಾಮೂಲಿ ದಂಧೆಯನ್ನು ಪ್ರಾರಂಭಿಸಿಬಿಟ್ಟಿವೆ. ಮಸೂದೆಯ ಕರಡನ್ನು ಸಿದ್ಧಪಡಿಸಿರುವ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಮಾನವ ಹಕ್ಕು ಕಾರ್ಯಕರ್ತೆ ಅರುಣಾರಾಯ್, ಎಡ ಪಂಥೀಯ ಅರ್ಥಶಾಸ್ತ್ರಜ್ಞ ಜಾನ್‌ಡ್ರೆಝೆ, ಪತ್ರಕರ್ತ ಹಾಗೂ ಸಮಾಜ ಸೇವಕ ಹರ್ಷಮಾಂದರ್ ಮುಂತಾದ ಉದಾರ ವಾದಿ ಪ್ರಜಾಸತ್ತಾತ್ಮಕ ನಿಲುವಿನ ಬುದ್ಧಿಜೀವಿ ಗಳು ಸದಸ್ಯರಾಗಿದ್ದಾರೆ.
ಆದರೆ ಇವರು ಯಾರೂ ಆರಾಮ ಕುರ್ಚಿಯ ಬುದ್ಧಿಜೀವಿ ಗಳಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಈ ಹೋರಾಟಗಾರ ಚಿಂತಕರ ಸಲಹಾ ಸಮಿತಿಯ ಬಗ್ಗೆ ದೇಶದ ಬಲಪಂಥೀಯರ ಆಕ್ಷೇಪ ಮತ್ತು ಭರ್ತ್ಸನೆ ಮೊದಲಿನಿಂದಲೂ ಇದ್ದದ್ದೇ. ಹಾಗಾಗಿ ಈ ಸಮಿತಿ ತಯಾರಿಸಿದ ಕೋಮುಹಿಂಸೆ ನಿಯಂತ್ರಣದ ಮಸೂದೆಯ ಕರಡನ್ನು ಬಿಜೆಪಿ ತಿರಸ್ಕರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಕೆಲವು ಬಿಜೆಪಿಯೇತರ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಸಹ ಉದ್ದೇಶಿತ ಮಸೂ ದೆಯ ಬಗ್ಗೆ ತಮ್ಮ ಸಂದೇಹ ವ್ಯಕ್ತಪಡಿಸಿವೆ. ಇದರ ತಪ್ಪುಒಪ್ಪುಗಳು ಏನು ಎಂದು ವಿಮರ್ಶೆ ನಡೆಸುವ ಮುನ್ನ ಮಸೂದೆಯಲ್ಲಿ ಏನಿದೆ ಎಂದು ಗಮನಿಸುವುದು ಅಗತ್ಯ.

ಮಸೂದೆಯ ಮುಖ್ಯಾಂಶಗಳು

 

ಮಸೂದೆಯ ಉದ್ದೇಶವನ್ನು ಅದರ ಪಠ್ಯದ ಪ್ರಾರಂಭದಲ್ಲೇ ಈ ಕೆಳಗಿನಂತೆ ಹೇಳಲಾಗಿದೆ.
1. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಹಾಗೂ ಎಲ್ಲರಿಗೂ ಸಮಾನವಾಗಿ ಕಾನೂನಿನ ರಕ್ಷಣೆಯ ಹಕ್ಕು ಇದೆ ಎಂಬ ತತ್ವವನ್ನು ರಕ್ಷಿಸುವುದು ಮತ್ತು ಎತ್ತಿ ಹಿಡಿಯು ವುದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಷ್ಟಕ್ಷಪಾತವಾಗಿ ನಿರ್ವಹಿಸ ಬೇಕಾದ ಕರ್ತವ್ಯಗಳನ್ನು ಆದೇಶಿಸುವುದು.
2. ದೇಶದ ನಿರ್ದಿಷ್ಟ ಧಾರ್ಮಿಕ ಸಮುದಾ ಯಗಳು, ಧಾರ್ಮಿಕ ಹಾಗೂ ಭಾಷಿಕ ಅಲ್ಪ ಸಂಖ್ಯಾತ ಸಮುದಾಯಗಳು ಮತ್ತು ಅನು ಸೂಚಿತ ಜಾತಿಪಂಗಡಗಳನ್ನು ಗುರಿಯಾಗಿಸಿ ಕೊಂಡು ನಡೆಸುವ ಸಾಮೂಹಿಕ ಹಿಂಸೆಯನ್ನು ತಡೆಗಟ್ಟುವುದು ಮತ್ತು ತನ್ಮೂಲಕ ದೇಶದ ಸೆಕ್ಯುಲರ್ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದು.
3. ಕೋಮು ಹಿಂಸೆಯ ಪ್ರಕರಣಗಳ ಸೂಕ್ತ ಪ್ರಾಥಮಿಕ ತನಿಖೆ, ನ್ಯಾಯ ವಿಚಾರಣೆ ಮತ್ತು ಅಪರಾಧಿಗಳಿಗೆ ಶಿಕ್ಷೆ ಕುರಿತು ಮಸೂದೆಯಲ್ಲಿ ನಿಯಮಗಳನ್ನು ಅಳವಡಿಸಿ, ಸಂತ್ರಸ್ತರಿಗೆ ನ್ಯಾಯ ಮತ್ತು ರಕ್ಷಣೆಯ ಅವರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದು.
ಕೋಮುಹಿಂಸೆಯ ಹೆಚ್ಚಿನ ಪ್ರಕರಣಗಳನ್ನು ಅವುಗಳ ನ್ಯಾಯನಿರ್ಣಯದ ತೊಡಕುಗಳು ಏನೇ ಇರಲಿ ಹಾಲಿ ಕ್ರಿಮಿನಲ್ ಕಾಯ್ದೆ ಪ್ರಕಾರವೇ ಅಪರಾಧ ಎಂದು ಗುರುತಿಸಬಹುದು. ಆದರೆ ಕೋಮುಹಿಂಸೆಯನ್ನು ಪ್ರಚೋದಿಸುವ ದ್ವೇಷಪೂರಿತ ಅಪಪ್ರಚಾರ ನಿರ್ದಿಷ್ಟ ಸಮುದಾಯಗಳ ವಿರುದ್ಧ ಇಲ್ಲ ಸಲ್ಲದ ಅಪಾದನೆ, ತಮ್ಮ ಅಭಿಪ್ರಾಯ ಒಪ್ಪಿಕೊಳ್ಳದವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದು ಇವೇ ಮುಂತಾದ ‘‘ಮನಸ್ಸು ತೊಳೆಯುವ’’ ಕೋಮುವಾದಿ ಕುತಂತ್ರಗಳನ್ನು ನಿಗ್ರಹಿಸಲು ಹಾಲಿ ಕ್ರಿಮಿನಲ್ ಕಾಯ್ದೆ ವಿಫಲವಾಗಿದೆ.
ಬಿಜೆಪಿ ಶಿವಸೇನೆಗಳಂತಹ ಬಲಪಂಥೀಯ ರಾಜಕೀಯ ಪಕ್ಷಗಳು, ಭಾಷಾದುರಭಿಮಾನದ ಸಂಘಟನೆಗಳು ಮತ್ತು ಧಾರ್ಮಿಕ ಸಂಸ್ಥೆಗಳು ತಾವು ಒಲ್ಲದ ಅನ್ಯವಿಚಾರ, ಅನ್ಯಧರ್ಮ ಮತ್ತು ಅನ್ಯಸಮುದಾಯಗಳ ವಿರುದ್ಧ ನಿರಂತರವಾಗಿ ಅಪಪ್ರಚಾರದಲ್ಲಿ ತೊಡಗಿಕೊಂಡಿವೆ. ಅವು ಸೃಷ್ಟಿಸಿರುವ ಸಮೂಹ ಸನ್ನಿ ಹಾಗೂ ಹಿಂಸಾರತಿಯ ಪರಿಣಾಮವಾಗಿ ಬೀದಿನಾಯಿಯನ್ನು ಕೂಡ ಹೊಡೆಯಲು ಹೇಸಿಕೊಳ್ಳುವ ಸಾಮಾನ್ಯ ಜನ, ದೇಶ, ಧರ್ಮ ಮತ್ತು ಭಾಷೆಯ ಹೆಸರಿನಲ್ಲಿ ಕೊಲೆ ರಕ್ತಪಾತಗಳಿಗೆ ಸಜ್ಜಾಗುತ್ತಿದ್ದಾರೆ.

4. ಉದ್ದೇಶ ಪೂರ್ವಕವೂ, ಪೂರ್ವಯೋಜಿತವೂ ಆದ ಗುಂಪು ಹಿಂಸೆಯ ಸಂತ್ರಸ್ತರೆಲ್ಲರಿಗೂ ಪುನರ್ವಸತಿ ಪರಿಹಾರ ಮತ್ತು ರಕ್ಷಣೆಗಳನ್ನು ಒದಗಿಸುವುದು.
5. ವಿಷಯಕ್ಕೆ ಸಂಬಂಧಿಸಿದ ಹಾಗೆ ಇತರ ಎಲ್ಲ ಅವಶ್ಯ ಕ್ರಮಗಳನ್ನೂ ಕೈಗೊಳ್ಳುವುದು.

ಮಸೂದೆಯ ಪ್ರಕಾರ ಕೋಮುಹಿಂಸೆ ಎಂದರೆ ಏನು?

 

1. ‘‘ಯಾವುದೇ ವ್ಯಕ್ತಿ ಒಂದು ನಿರ್ದಿಷ್ಟ ಸಮುದಾಯಕ್ಕೆ (ಧಾರ್ಮಿಕ, ಭಾಷಿಕ ಅಥವಾ ಅನುಸೂಚಿತ ಜಾತಿ ಪಂಗಡ) ಸೇರಿದವರು ಎಂಬ ಕಾರಣಕ್ಕೆ ಅವರ ಮೇಲೆ ದೈಹಿಕ ಹಲ್ಲೆ ನಡೆಸುವುದು, ಅವರ ಆಸ್ತಿ ಪಾಸ್ತಿ ನಾಶಪಡಿಸುವುದು ಹಾಗೂ ಈ ಬಗೆಯ ಕೃತ್ಯಗಳನ್ನು ಬಿಡಿಬಿಡಿಯಾಗಿ ಅಥವಾ ಸತತವಾಗಿ ಹಠಾತ್ತನೆ ಅಥವಾ ಪೂರ್ವ ತಯಾರಿ ಮಾಡಿಕೊಂಡು ನಡೆಸುವುದನ್ನು ಕೋಮುಹಿಂಸೆ ಮತ್ತು ನಿರ್ದಿಷ್ಟ ಸಮುದಾಯಗಳ ಮೇಲೆ ಪೂರ್ವ ಯೋಜಿತವಾಗಿ ನಡೆಸುವ ಹಿಂಸಾಚಾರ’’ ಎಂದು ಮಸೂದೆ ಪರಿಗಣಿಸುತ್ತದೆ.
2. ಕೋಮು ಹಿಂಸಾಚಾರ ಮಾತ್ರವಲ್ಲ ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಕೂಡ ಈ ಮಸೂದೆಯ ಪ್ರಕಾರ ಒಂದು ಅಪರಾಧ. ಉದಾ: ಹಿಂಸೆಗೆ ಒಳಗಾದವರ ಉದ್ಯೋಗ ವ್ಯವಹಾರಗಳಿಗೆ ಸಾಮೂಹಿಕ ಬಹಿಷ್ಕಾರ ವಿಧಿಸುವುದು, ಶಿಕ್ಷಣ, ವೈದ್ಯಕೀಯ, ಸಾರಿಗೆ ಸಂಚಾರ ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ಸಂತ್ರಸ್ತ ಸಮುದಾಯಗಳಿಗೆ ನಿರಾಕರಿಸುವುದು, ಮೂಲಭೂತ ಹಕ್ಕುಗಳನ್ನು ಅವರಿಗೆ ನಿರಾಕರಿಸುವುದು ಅಥವಾ ಹಾಗೆ ಮಾಡುವುದಾಗಿ ಬೆದರಿಸಿ ಅವಮಾನಿಸುವುದು, ಸಂತ್ರಸ್ತರನ್ನು ಅವರ ಊರುಮನೆಗಳಿಂದ ಬಲಾತ್ಕಾರವಾಗಿ ಓಡಿಸುವುದು ಇವೇ ಮುಂತಾದವನ್ನು ಕೂಡ ಮಸೂದೆ ‘ಅಪರಾಧ’ ಎಂದು ಪರಿಗಣಿಸುತ್ತದೆ.

3. ಸಂತ್ರಸ್ತ ಸಮುದಾಯಗಳ ಸ್ತ್ರೀಯರ ಮೇಲೆ ನಡೆಯುವ ದೈಹಿಕ ಅತಿಕ್ರಮಣ, ಅತ್ಯಾಚಾರ, ಬೆತ್ತಲೆಗೊಳಿಸುವುದು, ಬೆತ್ತಲೆ ಮಾಡಿ ಮೆರವಣಿಗೆ ಮಾಡುವುದು, ಧಾರ್ಮಿಕ ಸಮುದಾಯಗಳ ಅವಹೇಳನ, ಅವುಗಳ ವಿರುದ್ಧ ದ್ವೇಷ ಪ್ರಚೋದನೆ ಮತ್ತು ಸಾಮೂಹಿಕ ಸಂಘಟಿತ ದಾಳಿಗಳು ಅಪರಾಧ ಎಂದು ಮಸೂದೆ ಸಾರುತ್ತದೆ.
ಸರಕಾರಿ ಸಿಬ್ಬಂದಿಯ ಉತ್ತರದಾಯಿತ್ವ
ಪ್ರಸ್ತಾಪಿತ ಕೋಮು ಹಿಂಸೆ ನಿಯಂತ್ರಣ ಮಸೂದೆ ತನ್ನ ವ್ಯಾಪ್ತಿಯಲ್ಲಿ ಬರುವ ಅಪರಾಧಗಳನ್ನು ನಿರೂಪಿಸುವುದರ ಜೊತೆಗೆ ಆ ಕುರಿತು ಅವುಗಳಿಗೆ ಸಂಬಂಧಪಟ್ಟ ಸರಕಾರಿ ಸಿಬ್ಬಂದಿಯ ಉತ್ತರದಾಯಿತ್ವ ಏನು ಎಂಬುದನ್ನು ಈ ಕೆಳಗಿನಂತೆ ಸ್ಪಷ್ಟಪಡಿಸಿದೆ.
1.ಕೋಮು ಹಿಂಸೆ ಒಂದು ಪ್ರದೇಶದಲ್ಲಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಅಡೆತಡೆಗಳಿಲ್ಲದೆ ಮುಂದುವರಿದಿದೆ ಎಂಬುದು ಸಾಬೀತಾದರೆ ಅಂತಹ ಹಿಂಸೆಯನ್ನು ನಿಯಂತ್ರಿಸುವುದಕ್ಕೆಂದೇ ನೇಮಕಗೊಂಡಿರುವ ಸರಕಾರಿ ಸಿಬ್ಬಂದಿ ತಮ್ಮ ಕರ್ತವ್ಯ ಪಾಲಿಸಿಲ್ಲ ಎಂದೇ ತಿಳಿಯಲಾಗುವುದು. ಈ ಕರ್ತವ್ಯ ಲೋಪ ಕೂಡ ಶಿಕ್ಷಾರ್ಹ ಅಪರಾಧ.
2. ಹಿಂಸೆಯ ಸಂತ್ರಸ್ತರಿಗೆ ರಕ್ಷಣೆ ಒದಗಿಸದೆ ಇರುವುದು, ಹಿಂಸೆಯ ಪ್ರಕರಣಗಳ ಬಗ್ಗೆ ಮೇಲಧಿಕಾರಿಗಳಿಗೆ ತಪ್ಪುಮಾಹಿತಿ ನೀಡುವುದು ಇವೇ ಮುಂತಾದ ಕುಕೃತ್ಯಗಳನ್ನು ಎಸಗುವ ಆಡಳಿತ ಮತ್ತು ಪೊಲೀಸು ಇಲಾಖೆಯ ಸಿಬ್ಬಂದಿ ಕೂಡ ಕೋಮು ಹಿಂಸಾಚಾರಕ್ಕೆ ಜವಾಬ್ದಾರ ಎಂದು ಮಸೂದೆ ಪರಿಗಣಿಸುತ್ತದೆ. ಇದು ಕೂಡ ಶಿಕ್ಷಾರ್ಹವಾಗಿದೆ. -  Varthabharati Column

Advertisement

0 comments:

Post a Comment

 
Top