PLEASE LOGIN TO KANNADANET.COM FOR REGULAR NEWS-UPDATES


ಮೂಡಬಿದ್ರೆ:: ಆಳ್ವಾಸ್ ಎಜುಕೇಶನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲ್ಲಿರುವ ಎಂಟನೇ ವರುಷದ "ಆಳ್ವಾಸ್ ನುಡಿಸಿರಿ"ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಆಳ್ವಾಸ್ ನುಡಿಸಿರಿ ರೂವಾರಿ,ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ತಿಳಿಸಿದ್ದಾರೆ.
ನವೆಂಬರ್ 11ರಿಂದ 13ರ ತನಕ ಮೂಡಬಿದ್ರೆ ವಿದ್ಯಾಗಿರಿಯಲ್ಲಿ "ಕನ್ನಡ ಮನಸ್ಸು ಸಂಘರ್ಷ ಮತ್ತು ಸಾಮರಸ್ಯ"ಪರಿಕಲ್ಪನೆಯಲ್ಲಿ ಈ ಬಾರಿ ಆಳ್ವಾಸ್ ನುಡಿಸಿರಿ ನಡೆಯಲಿದೆ.ಸರ್ವಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುರ್ಗಿ ಸಮ್ಮೇಳನವನ್ನು ಮುನ್ನಡೆಸಲಿದ್ದಾರೆ.
ನವೆಂಬರ್ 13ರಂದು ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಚಂದ್ರಶೇಖರ ಕಂಬಾರ ಅವರು ಮಾಡಲಿದ್ದಾರೆ.ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರ ಸಮಗ್ರ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮೋಹನ್ ಆಳ್ವ ಅವರು ತಿಳಿಸಿದ್ದಾರೆ.
2006ರಲ್ಲಿ ಕನ್ನಡ ಮನಸ್ಸು ಪ್ರಚಲಿತ ಪ್ರಶ್ನೆಗಳು ಪರಿಕಲ್ಪನೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯ ಮೂರನೇ ವರುಷದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರ ಅವರು ಸಮ್ಮೇಳನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

Advertisement

0 comments:

Post a Comment

 
Top