PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ.  : ಕೊಪ್ಪಳ ಜಿಲ್ಲೆಯಲ್ಲಿ ಆಧಾರ್ ಯೋಜನೆಯ ಅನುಷ್ಠಾನದಲ್ಲಿ ಒಟ್ಟು ೧೭೧೨೧೩ ಜನರನ್ನು ಆಧಾರ್ ಕಾರ್ಡ್‌ಗಾಗಿ ನೋಂದಣಿ ಮಾಡಿಕೊಳ್ಳಲಾಗಿದೆ.
ಕೊಪ್ಪಳದಲ್ಲಿ ೨೦ ಘಟಕಗಳು ಕೆಲಸ ಮಾಡುತ್ತಿದ್ದು ೪೯೮೧೩ ನಿವಾಸಿಗಳ ನೋಂದಣಿಯಾಗಿವೆ. ಗಂಗಾವತಿಯಲ್ಲ್ಲಿ  ೨೪ ಘಟಕಗಳು ಕೆಲಸ ಮಾಡುತ್ತಿದ್ದು ೫೮೪೧೮ ನಿವಾಸಿಗಳ ನೋಂದಣಿಯಾಗಿವೆ. ಕುಷ್ಟಗಿಯಲ್ಲಿ ೧೮ ಘಟಕಗಳು ಕೆಲಸ ಮಾಡುತ್ತಿದ್ದು ೩೦೧೨೬ ನಿವಾಸಿಗಳ ನೋಂದಣಿಯಾಗಿವೆ. ಯಲಬುರ್ಗಾದಲ್ಲಿ ೧೮ ಘಟಕಗಳು ಕೆಲಸ ಮಾಡುತ್ತಿದ್ದು ೩೨೮೫೬ ನಿವಾಸಿಗಳ ನೋಂದಣಿಯಾಗಿವೆ. ಒಟ್ಟು ೮೦ ಘಟಕಗಳು ಕೆಲಸಮಾಡುತ್ತಿದ್ದು ೧೭೧೨೧೩ ನಿವಾಸಿಗಳ ನೋಂದಣಿಯಾಗಿವೆ. ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರ ಸ್ಥಾನಗಳಲ್ಲಿ ನೋಂದಣಿ ಕೇಂದ್ರವನ್ನು ತೆರೆಯಲಾಗಿದ್ದು, ಇನ್ನು ಹೆಚ್ಚುವರಿಯಾಗಿ ೧೫೦ ಘಟಕಗಳ ಬೇಡಿಕೆಯನ್ನು ಸಲ್ಲಿಸಲಾಗಿದೆ.  ಇನ್ನೂ ಹೆಚ್ಚಿನ ಕಂಪ್ಯೂಟರ್ ಯೂನಿಟ್‌ಗಳ ಬಂದ ನಂತರ ಹೋಬಳಿಗಳಲ್ಲಿ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಆದ್ಯತೆಯ ಮೇರೆಗೆ ಆಧಾರ್ ನೋಂದಣಿ ಕೇಂದ್ರರಗಳನ್ನು ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ಆಧಾರ್ ನೋಂದಣಿ ಕಾರ್ಯಕ್ಕಾಗಿ ಟೆರಾಸಾಫ್ಟ್ ಕಂಪನಿಯವರಿಗೆ ವಹಿಸಲಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೯೭ ಆಪರೇಟರ್‍ಸ್, ೨೦ ಮೇಲ್ವಿಚಾರಕರು, ೪ ಜನ ತಂತ್ರಜ್ಞರು ಹಾಗೂ ತಾಲೂಕಾ ನೋಡೆಲ್ ಅಧಿಕಾರಿಗಳು ಹಾಗೂ ಒಬ್ಬರು ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ಪ್ರತಿ ಆಧಾರ್ ನೋಂದಣಿ ಕೇಂದ್ರಕ್ಕೆ ಭರ್ತಿಮಾಡಿದ ಅರ್ಜಿಗಳನ್ನು ಪರಿಶೀಲಿಸುವುದಕ್ಕಾಗಿ ಜಿಲ್ಲೆಯಲ್ಲಿ ೧೦೬ ನೌಕರರನ್ನು ಪರಿಶೀಲಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಆಧಾರ್ ಯೋಜನೆಯ ನೋಡಲ್ ಅಧಿಕಾರಿ ಕೃಷ್ಣಮೂರ್ತಿ ದೇಸಾಯ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top