ಕೊಪ್ಪಳ ಅ. : ಕುಷ್ಟಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ೧೭ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ ೧೮ ರಿಂದ ೪೪ ವರ್ಷದೊಳಗಿರಬೇಕು. ಯಾವ ಗ್ರಾಮಕ್ಕೆ ನೇಮಕ ಮಾಡಬೇಕಾಗಿದೆಯೋ, ಅಭ್ಯರ್ಥಿಗಳು ಅದೇ ಗ್ರಾಮ / ವಾರ್ಡ್/ ಮೊಹಲ್ಲಾ ನಿವಾಸಿಯಾಗಿರಬೇಕು. ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರಿರಬೇಕು, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು. ಒಂದು ವೇಳೆ ಬಿ.ಪಿ.ಎಲ್ ಅಭ್ಯರ್ಥಿಗಳ ಅರ್ಜಿ ಬಾರದೇ ಇದ್ದಲ್ಲಿ ಎ.ಪಿ.ಎಲ್. ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಕನಿಷ್ಟ ೪ ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿ ಗಿಂತ ಹೆಚ್ಚಿನ ವಿದ್ಯಾರ್ಹತೆಯುಳ್ಳವರನ್ನು ಪರಿಗಣಿಸಲಾಗುವುದಿಲ್ಲ. ಸಹಾಯಕಿಯರು ಗೌರವ ಸೇವೆಗೆ ಸೇರಿದ್ದು, ಮೀಸಲಾತಿ ತತ್ವಗಳು ಅನ್ವಯಿಸುವುದಿಲ್ಲ. ದೇವದಾಸಿಯರು, ಬಾಲನ್ಯಾಯ ಕಾಯ್ದೆಯಡಿ ನಿವಾಸಿಗಳು, ನಿರಾಶ್ರಿತರು, ವಿಚ್ಛೇದಿತ ಮಹಿಳೆಯರು, ಪರಿತ್ಯಕ್ತೆಯರು, ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳು ಸಂಬಂಧಿಸಿದ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ವಿಧವೆಯರಿಗೆ ನೇರ ಆದ್ಯತೆ ನೀಡಲಾಗುವುದು. ಅಂತಹವರು ಗಂಡನ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಹಾಗೂ ಸ್ಥಳೀಯರಾಗಿರಬೇಕು.
ನಿಗದಿತ ಅರ್ಜಿ ನಮೂನೆಯನ್ನು ಕುಷ್ಟಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ, ಅಥವಾ ಕೈ ಬರಹದಲ್ಲಿ ಪತ್ರಾಂಕಿತ ಅಧಿಕಾರಿಗಳ ದೃಢೀಕೃತ ದಾಖಲೆಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕುಷ್ಟಗಿ ಇವರಿಗೆ ಅಕ್ಟೋಬರ್ ೨೨ ರ ಒಳಗಾಗಿ ಸಲ್ಲಿಸಬೇಕು. ಗ್ರಾಮಗಳ ವಿವರ ಸೇರಿದಂತೆ ಹೆಚ್ಚಿನ ವಿವರಗಳನ್ನು ಮೇಲ್ಕಂಡ ಕಚೇರಿಯಲ್ಲಿ ಪಡೆಯಬಹುದಾಗಿದೆ
0 comments:
Post a Comment