ಕೊಪ್ಪಳ ತಾಲೂಕಿನ ಹೊರತಟ್ನಾಳ ಗ್ರಾಮದಲ್ಲಿ ದಿನಾಂಕ: ೧೮-೧೦-೨೦೧೧ ರಂದು ಜೈ ಮಾತೃಭೂಮಿ ಯುವಕ ಸಂಘದ ಉದ್ಘಾಟಕ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ಉದ್ಘಾಟಕರಾಗಿ ಆಗಮಿಸಿದ ಸೈಯದ್ ಫೌಂಡೇಶನ್ ಹಾಗೂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಮ್.ಸೈಯದ್ ರವರು ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸಂಘದಲ್ಲಿ ಎಲ್ಲಾ ಜಾತಿಯ ಯುವ ಮಿತ್ರರಿದ್ದು ಇದೊಂದು ಸರ್ವ ಧರ್ಮದ ಯುವ ಮಿತ್ರರ ಸೇನೆಯಂತೆ ನನಗೆ ಬಾಸವಾಗುತ್ತದೆ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತಮ್ಮ ಬದುಕಿನಲ್ಲಿ ಸಾಧ್ಯವಾದಷ್ಟು ಬಡವರಿಗಾಗಿ ದಾನ, ಧರ್ಮ ಮಾಡುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಹಾಗೂ ಪ್ರತಿಯೊಬ್ಬ ಯುವಕ ಈ ನಾಡಿನ ಸಂಪತ್ತು ಯಾವುದೆ ಜಾತಿ ವ್ಯಾಮೋಹಕ್ಕೆ ಒಳಗಾಗದೆ ನಾಡಿಗಾಗಿ ಸಲ್ಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಹಾಂತೇಶ ಪಾಟೀಲ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ ಅವರು ಹೊರತಟ್ನಾಳ ಗ್ರಾಮದ ಯುವಕರು ಉತ್ಸಾಹಿಗಳೆಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಚಂದ್ರು ಮಾತನಾಡಿ ಈ ಸಂಘದ ಸರ್ವ ಯುವಕರು ಸದಾ ಉತ್ಸಾಹಿ ಚಿಲುಮೆಯಂತೆ ಕಾರ್ಯ ನಿರ್ವಹಿಸುತ್ತಾರೆ. ಇವರು ಯಾವುದೇ ರಾಜಕೀಯ ಪಕ್ಷಗಳಿಂದ ಪ್ರೇರಿತರಾಗದೆ ಈ ನಾಡಿಗಾಗಿ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿರುವುದರಿಂದ ಇವರು ಅನ್ಯ ಗ್ರಾಮದ ಯುವಕರಿಗೆ ಮಾದರಿಯಾಗಿದ್ದಾರೆ. ಇದೆ ಸಂದರ್ಭದಲ್ಲಿ ಗ್ರಾಮದ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ತಾಲೂಕ ಅಕ್ಷರ ದಾಸೋಹದ ಅಧ್ಯಕ್ಷರಾದ ಎಸ್.ಆರ್.ಕಮ್ಮಾರರಿಗೆ ಸನ್ಮಾನ ಮಾಡಿದರು. ಸನ್ಮಾನಿತರು ಮಾತನಾಡಿ ಗ್ರಾಮದ ಯುವಕರು ಸಮಾಜ ಸೇವೆ ಮಾಡುವ ಒಳ್ಳೆಯ ಮನಸ್ಸನ್ನು ಹೊಂದಿದ್ದು ಪ್ರತಿಯೊಬ್ಬ ಯುವಕರು ಸುಶಿಕ್ಷಿತರಾಗಿದ್ದು ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಎಲ್ಲಾ ಗುಣಗಳನ್ನು ಹೊಂದಿರುವುದರಿಂದ ಈ ಸಂಘ ರಾಜ್ಯ ಮಟ್ಟದಲ್ಲಿ ಹೆಸರುಗಳಿಸುತ್ತದೆಂಬ ನಂಬಿಕೆ ನನಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಹುಲಗಪ್ಪ ಮತ್ತು ಗುರುರಾಜ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ|| ವಿಷ್ಣು ಸ್ಮಾರಕ ಟ್ರಸ್ಟನ ಅಧ್ಯಕ್ಷರಾದ ಗ್ಯಾನಪ್ಪ ಹಿಟ್ನಾಳರವರು ಸಂಘದ ಸದಸ್ಯರಿಗೆ ನೆನಪಿನ ಕಾಣಿಕೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಗ್ರಾ.ಪಂ. ಸದಸ್ಯರಾದ ಹನುಮಪ್ಪ ಕಿಟಗೇರಿ ಮತ್ತು ಶ್ರೀಮತಿ ಯಲ್ಲವ್ವ ಗಂಡ ದೇವಪ್ಪ ವಾಲಿಕಾರ ಗ್ರಾಮದ ಗುರು ಹಿರಿಯರು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬೆಳಕು ಗ್ರಾಮೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆಯ ಅಧ್ಯಕ್ಷರಾದ ಫಕೀರಪ್ಪ ಎನ್.ಎಮ್ಮಿಯರ್ ರವರು ನಿರೂಪಿಸಿದರು. ಸ್ವಾಗತಕಾರರಾದ ಮಾರುತಿ ಚಾಮಲಾಪುರ ಮತ್ತು ಪುಷ್ಪಾರ್ಚಣೆಯನ್ನು ಆನಂದ ಕವಳಿಕೇರಿಯವರು ನೆರವೇರಿಸಿದರು. ವಂದನಾರ್ಪಣೆಯನ್ನು ವೆಂಕಟೇಶ. ಎಚ್.ನಾಯಕ ಮಾಡಿದರು. ಪ್ರಾರ್ಥನೆಯನ್ನು ಕುಮಾರಿ ದ್ಯಾಮವ್ವ ಹಾಗೂ ಸಂಗಡಿಗರು ಹಾಡಿದರು. ಸಂಘದ ಸರ್ವ ಸದಸ್ಯರು ಹಾಜರಿದ್ದರು.
0 comments:
Post a Comment