PLEASE LOGIN TO KANNADANET.COM FOR REGULAR NEWS-UPDATES


ಮಂಗಳೂರು, ಅ.3: ಸಂಪ್ರದಾಯದ ಹೆಸರಿನಲ್ಲಿ ಧಾರ್ಮಿಕ ಶುಭ ಕಾರ್ಯಗಳಲ್ಲಿ ಮೂಲೆ ಗುಂಪಾಗಿದ್ದ, ಪತಿಯನ್ನು ಕಳೆದುಕೊಂಡ ಸಾವಿರಾರು ಮಹಿಳೆಯರು ಕಂದಾಚಾರಕ್ಕೆ ಸಡ್ಡು ಹೊಡೆದು, ಇಂದು ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ದೇವರ ಬೆಳ್ಳಿ ರಥವನ್ನು ಎಳೆಯುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಈ ಹಿಂದೆ ಜನಾರ್ದನ ಪೂಜಾರಿ ತಿಳಿಸಿದಂತೆ, ಗಂಡನನ್ನು ಕಳೆದುಕೊಂಡ ಮಹಿಳೆಯರನ್ನು ಧಾರ್ಮಿಕ ಹಾಗೂ ಶುಭ ಕಾರ್ಯಗಳಿಂದ ದೂರ ಇಡುವ ಆಚರಣೆ ಬಿಟ್ಟು ಅವರನ್ನು ಇತರ ಮಹಿಳೆಯರಂತೆ ಕಾಣಬೇಕು.ಸಮಾಜದಲ್ಲಿ ಹೊಸ ಬದಲಾವಣೆಗಾಗಿ ಇಂತಹ 1500 ಮಹಿಳೆಯರಿಗೆ ಕುದ್ರೋಳಿಯಲ್ಲಿ ನವರಾತ್ರಿ ಸಂದರ್ಭದಲ್ಲಿ ಹೂ, ಬಳೆ, ಕುಂಕುಮ, ಸೀರೆಯನ್ನು ವಿತರಿಸುವುದು ಮತ್ತು ಈ ಮಹಿಳೆಯರಿಂದಲೇ ದೇವರ ರಥ ಎಳೆಯುವ ಧಾರ್ಮಿಕ ಕಾರ್ಯ ನಡೆಸುವುದಾಗಿ ಹೇಳಿದ್ದರು. ಅದೇ ಪ್ರಕಾರ ಇಂದು ಕುದೋಳಿಯಲ್ಲಿ ವಿವಿಧ ಕಡೆಗಳಿಂದ ಗಂಡನನ್ನು ಕಳೆದುಕೊಂಡ ಸುಮಾರು 2000ಕ್ಕೂಅಧಿಕ ಮಹಿಳೆಯರು ಆಗಮಿಸಿದ್ದರು. ಆದರೆ ಸಂಘಟಕರು ಇಷ್ಟು ಜನ ಬರುವುದನ್ನು ನಿರೀಕ್ಷಿಸದೇ ಇದ್ದ ಕಾರಣ 1700 ಹೆಂಗಸರಿಗೆ ಸೀರೆ ಪ್ರಸಾದ ಹಂಚಿದರು. ಇದರಿಂದ ಉಳಿದವರು ನಿರಾಸೆ ವ್ಯಕ್ತಪಡಿಸಿದರು. ಸೀರೆ ಪ್ರಸಾದ ಪಡೆದವರು ಸಂತಸ ವ್ಯಕ್ತಪಡಿಸಿದರು.

Advertisement

0 comments:

Post a Comment

 
Top