ಹೈದರಾಬಾದ್, ಅ.05: ಇಸ್ರೋದ 'ಭುವನ' ಸುಂದರಿ ಗೂಗಲ್ ಅರ್ಥ್ ಗೆ ಸೆಡ್ಡು ಹೊಡೆದು ನಿಂತಿದೆ. ಇದು ಗೂಗಲ್ ಅರ್ಥ್ ಗೆ ಭಾರತದ ದಿಟ್ಟ ಉತ್ತರ. ನೋಂದಾಯಿತ ಬಳಕೆದಾರರು ಇದರ ಇಸ್ರೋದ 'ಭುವನ' ಸೇವೆಯನ್ನು ಉಪಯೋಗಿಸಬಹುದು.
ಈ ಉಪಗ್ರಹ ಮಾಹಿತಿಯು ಹೈದರಾಬಾದಿನಲ್ಲಿರುವ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಉಪಗ್ರಹ ಕೇಂದ್ರದ Open Earth Observation Data Archive ಮೂಲಕ ಲಭ್ಯವಾಗುತ್ತದೆ.
ಹಾಗೆ ನೋಡಿದರೆ, ಗೂಗಲ್ ಅರ್ಥ್ ಗಿಂತ ಇಸ್ರೋದ 'ಭುವನ' ಸುಂದರಿ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ಬಾಹ್ಯಾಕಾಶದಿಂದ ಇಸ್ರೋದ ಉಪಗ್ರಹಗಳು ಸೆರೆಹಿಡಿಯುವ ಭೂ ಮೇಲ್ಮೈ ಚಿತ್ರ ಮಾಹಿತಿಯನ್ನು ಬಿತ್ತರಿಸುತ್ತದೆ.
ವೆಬ್‌ಸೈಟ್ ಲಿಂಕ್ ಹೀಗಿದೆ: www.bhuvan.nrsc.gov.in ಅಥವಾ http://bhuvan-noeda.nrsc.gov.in.
0 comments:
Post a Comment