ಕೊಪ್ಪಳ ಅ. : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಅ. ೦೧ ರಿಂದ ಪ್ರಾರಂಭಗೊಂಡಿದ್ದು, ನ. ೦೧ ರವರೆಗೆ ನಡೆಯಲಿದೆ ಎಂದು ಯಲಬುರ್ಗಾ ತಹಸಿಲ್ದಾರ್ ಇ.ಡಿ. ಭೃಂಗಿ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರ್ಪಡೆಗೊಳಿಸಲು ಸಂಬಂಧಪಟ್ಟವರು ಭಾರತದ ನಾಗರೀಕನಾಗಿರಬೇಕು, ೧ನೇ ಜನವರಿ ೨೦೧೨ ಕ್ಕೆ ೧೮ ವರ್ಷ ಪೂರ್ಣಗೊಳ್ಳಬೇಕು. ಮತದಾರರಾಗಿ ನೋಂದಾಯಿಸಲಾಗುವ ಸ್ಥಳದಲ್ಲಿ ಸಾಮಾನ್ಯ ನಿವಾಸಿ ಆಗಿರಬೇಕು. ಹಕ್ಕು ಮತ್ತು ಆಕ್ಷೇಪಣಾ ಸ್ವೀಕರಿಸುವ ಸಮಯದಲ್ಲಿ ಅಂದರೆ ಅ. ೦೧ ರಿಂದ ನ. ೦೧ ರವರೆಗೆಇನ ಅವಧಿಯಲ್ಲಿ ಮತದಾರರ ಯಾದಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗಾಗಿ ಅರ್ಜಿ ನಮೂನೆ ೬ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು. ಸಾಮಾನ್ಯ ನಿವಾಸಿ ಎಂದು ರುಜುವಾತುಪಡಿಸಲು ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಶಿಕ್ಷಣ ಸಂಸ್ಥೆಗಳು, ಸರ್ಕಾರ ಸೇರಿದಂತೆ ಇನ್ನಿತರ ನೋಂದಾಯಿತ ಸಂಸ್ಥೆಗಳಿಂದ ನೀಡಲಾದ ಗುರುತಿನ ಚೀಟಿ, ಖಾತಾ ಪ್ರಮಾಣ ಪತ್ರ, ಸ್ಥಳೀಯ ಸಂಸ್ಥೆ/ ಮಾಲೀಕರಿಂದ ನೀಡಲಾದ ಬಾಡಿಗೆ ರಸೀದಿ, ಆಸ್ತಿ ಮತ್ತು ತೆರಿಗೆ ದಾಖಲಾತಿ, ಬ್ಯಾಂಕ್/ ಅಂಚೆ ಕಚೇರಿಯ ಪಾಸ್‌ಬುಕ್ ಪ್ರತಿ, ವಿದ್ಯುತ್/ದೂರವಾಣಿ/ನೀರಿನ ಕರ ಬಿಲ್, ದೈಹಿಕ ಅಂಗವಿಕಲತೆಯ ಪ್ರಮಾಣಪತ್ರ, ವಿದ್ಯಾರ್ಥಿಗಳ ಗುರುತಿನ ಚೀಟಿ, ಮಾಜಿ ಸೇನಾ ಸಿಬ್ಬಂದಿಗಳ ಪಿಂಚಣಿ ಪುಸ್ತಕ, ರೈಲ್ವೆ ಹಾಗೂ ಬಸ್‌ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಮಾಜಿ ಸೇನಾ ಸಿಬ್ಬಂದಿಯ ವಿಧವಾ ಪತ್ನಿ/ ಅವಲಂಬಿತರ ಪ್ರಮಾಣ ಪತ್ರಗಳು. ಈ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ನಮೂನೆ-೬ ಕ್ಕೆ ಜೊತೆಗೆ ಒಂದು ಪಾಸ್‌ಪೋರ್ಟ್ ಅಳತೆಯ ಕಲರ್ ಭಾವಚಿತ್ರ ಲಗತ್ತಿಸಿ ಸಲ್ಲಿಸಬೇಕು. ವಯಸ್ಸಿನ ದಾಖಲಾತಿಗಾಗಿ, ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಪತ್ರ, ಶಾಲೆ/ಕಾಲೇಜುಗಳಿಂದ ನೀಡುವ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರಗಳಿಂದ ನೀಡಲಾಗುವ ಪ್ರಮಾಣ ಪತ್ರ ಇವುಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಮತದಾರರ ಹೆಸರು ಸೇರ್ಪಡೆ ಕುರಿತು ಆಕ್ಷೇಪಣೆ ಅಥವಾ ಹೆಸರು ತೆಗೆದು ಹಾಕಲು ನಮೂನೆ-೭, ಪಟ್ಟಿಯಲ್ಲಿನ ಮುದ್ರಣ ದೋಷ, ತಿದ್ದುಪಡಿಗಾಗಿ ನಮೂನೆ-೮, ಬೇರೆ ಪ್ರದೇಶಕ್ಕೆ ಅಥವಾ ಭಾಗಕ್ಕೆ ಮತದಾರರ ಹೆಸರನ್ನು ವರ್ಗಾವಣೆ ಮಾಡಿಸಿಕೊಳ್ಳಲು ನಮೂನೆ- ೮ಎ ಭರ್ತಿ ಮಾಡಿ ಸಲ್ಲಿಸಬೇಕು. ಸಾರ್ವಜನಿಕರು ಮತ್ತು ಅರ್ಹ ಮತದಾರರು ಇದರು ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಬೂತ್ ಮಟ್ಟದ ಅಧಿಕಾರಿಗಳು, ನಿರ್ದಿಷ್ಟಾಧಿಕಾರಿಗಳು ಅಥವಾ ಯಲಬುರ್ಗಾ ತಹಶೀಲ್ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
0 comments:
Post a Comment