ಕೊಪ್ಪಳ : ದಿ: ೦೧: ಹಿರಿಯ ನಾಗರಿಕರಿಗೆ ಸರಕಾರಗಳು ಸಂಧ್ಯಾ ಸುರಕ್ಷಾ, ಗುರುತಿನ ಪತ್ರ, ಬಸ್, ರೈಲು, ಪ್ರಯಾಣದ ದರದಲ್ಲಿ ರಿಯಾಯಿತಿ, ಹಾಗೂ ಬ್ಯಾಂಕಿನ ಯೋಜನೆಗಳನ್ನು ಜಾರಿಗೋಳಿಸಿದೆ. ಶಿಕ್ಷಣದ ಕೊರತೆಯಿರುವ ಸಮುದಾಯಗಳಲ್ಲಿ, ಹಿರಿಯ ನಾಗರಿಕರ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ವಾಣಿಜ್ಯೋಧ್ಯಮಿ ಶಹಬುದ್ದೀನ್ ನೂರಭಾಷಾ ಹೇಳಿದರು.
ಅವರು ಕೊಪ್ಪಳದ ಸೈಲಾನಪೂರದಲ್ಲಿ ಸೇವಾ ಸಂಸ್ಥೆ, ದೇವರಾಜ ಅರಸು ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಡಾ. ಭೀಮರಾವ್ ಸಮಗ್ರ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೇಗಳು ಜಂಟಿಯಾಗಿ ಆಯೊಜಿಸಿದ್ದ ಅಂತರ್ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಉದ್ಗಾಟಿಸಿ ಮಾತನಾಡುತ್ತಿದ್ದರು.
ಸರಕಾರದ ಸೌಲಭ್ಯಗಳ ಉಪಯೋಗ ಪಡೆಯುವಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣ ಹಿಂದುಳಿದಿದೆ. ಸರ್ಕಾರದ ಸೌಲಭ್ಯಗಳ ಉಪಯೋಗ ಪಡೆಯಲು ಶಿಕ್ಷಣದ ಅನಿವಾರ್ಯತೆಯಿದೆ. ಎಲ್ಲರೂ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದು ಕರೆನೀಡಿದರು.
ಮುಖ್ಯಅತಿಥಿ ಖಲೀಲ್ ಎಪಿಎಮಸಿ ಮಾತನಾಡಿ ಶೀಮಂತರ ಕುಟುಂಬದಲ್ಲಿ ಹಿರಿಯ ನಾಗರಿಕರಿಗೆ ಗೌರವಯುತ ಸ್ಥಾನವಿದೆ. ಬಡತನ ಕುಟುಂಬಗಳಲ್ಲಿ ಬಡತನದ ಕಾರಣಕ್ಕೆ ಹಿರಿಯ ನಾಗರಿಕರ ಸ್ಥಿತಿ ಅಷ್ಟೊಂದು ಸರಿ ಇಲ್ಲ. ಮುಪ್ಪಿನ ಕಾಲದಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಹೇಳಿದರು.
ಮುಖ್ಯಅತಿಥಿ ಡಾ. ಭೀಮರಾವ್ ಸಮಗ್ರ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷರು ರಾಜಶೇಖರ ಮುಳಗುಂದ ಹಿರಿಯ ನಾಗರಿಕರ ಗುರುತಿನ ಪತ್ರದ ಉಪಯೋಗ ಕುರಿತು ಸವಿಸ್ಥಾರವಾಗಿ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯ ಕಾಟನ್ ಪಾಷಾ ನಗರಸಭೆಯ ಸೌಲಭ್ಯಗಳ ಬಗ್ಗೆ ತಿಳಿಸುತ್ತ ಸ್ವಯಂ ಸೇವಾ ಸಮಸ್ಥೆಗಳು ಮಾಹಿತಿ ಒದಗಿಸುವ ಕಾರ್ಯಕ್ಕೆ ಸದಾ ನಮ್ಮ ಸಹಕಾರವಿದೆ ಎಂದರು. ವೇದಿಕೆ ಮೇಲೆ ಯುವ ಮುಖಂಡ ರಫೀಮುದ್ದಿನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ೯೩ ಹಿರಿಯ ನಾಗರಿಕರಿಗೆ ಗುರುತಿನ ಪತ್ರ ವಿತರಿಸಲಾಯಿತು. ಸೇವಾ ಸಂಸ್ಥೆಯ ಹೆಚ್. ವ್ಹಿ ರಾಜಾಬಕ್ಷಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸ್ವಾಗತ ಅಕ್ಬರ ಖಾದ್ರಿ. ನಿರೂಪಣೆ ಹಸನ್ ವಂಟಿ, ವಂದನಾರ್ಪಣೆ ಜಾವೀದ್ ಮನಿಯಾರ ನೆರವೇರಿಸಿದರು,
0 comments:
Post a Comment