ಬೆಂಗಳೂರು, ಅ.4 : ರಾಜ್ಯದ 21 ಜಿಲ್ಲೆಗಳ 70 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರಕಾರವು ಅಧಿಕೃತವಾಗಿ ಘೋಷಿಸಿದೆ. ಮಂಗಳವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಬರಪೀಡಿತ ಪ್ರದೇಶಗಳ ಘೋಷಣೆ ಮಾಡಿದ್ದು, ಬರ ಪರಿಹಾರಕ್ಕೆ ಸೆಪ್ಟೆಂಬರ್ ತಿಂಗಳಲ್ಲೆ 29 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಕಡಿಮೆ ಮಳೆಯಾಗಿರುವ ಹಾಗೂ ಸತತ 4 ವಾರಗಳ ಕಾಲ ಒಣ ಹವೆ ಮುಂದುವರಿದಿರುವ ಪ್ರದೇಶವನ್ನು ಬರಪೀಡಿತವೆಂದು ಗುರುತಿಸಲಾಗಿದ್ದು, ಅದರಂತೆ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ರಾಜ್ಯದ 70 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಅಗತ್ಯ ಪರಿಹಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಬರಪರಿಹಾರ ಕಾರ್ಯಗಳಿಗಾಗಿ ಕಳೆದ ಎಪ್ರಿಲ್‌ನಿಂದ ಈವರೆಗೆ 40 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಬಳಸಿಕೊಳ್ಳುವಂತೆ ಅನುಕೂಲವಾಗಲು ಅವರ ಖಾತೆಯಲ್ಲಿ ಒಟ್ಟು 126 ಕೋಟಿ ರೂ.ಗಳನ್ನು ಇಡಲಾಗಿದ್ದು, ಬರ ಪರಿಹಾರ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಯು ಅಗತ್ಯಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಸಭೆ ನಡೆಸಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಲಿದೆ. ಅಲ್ಲದೆ, ಕೇಂದ್ರಕ್ಕೆ ನೆರವು ಕೋರಿ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಬರಪೀಡಿತ ತಾಲೂಕುಗಳೂ ಸೇರಿ ರಾಜ್ಯದಲ್ಲಿ ಹಲವೆಡೆ ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದು, ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬರದ ಸಮಸ್ಯೆ ಪರಿಹಾರವಾಗಬಹುದು ಎಂದು ಅಧಿಕಾರಿಗಳು ಸಭೆಯಲ್ಲಿ ಆಶಾಭಾವನೆ ವ್ಯಕ್ತಪಡಿಸಿದರು.
ಬರಪೀಡಿತ ಜಿಲ್ಲೆ ಹಾಗೂ ತಾಲೂಕುಗಳ ವಿವರ
ರಾಮನಗ: ಚನ್ನಪಟ್ಟಣ ಮತ್ತು ಕನಕಪುರ. ಕೋಲಾ: ಬಂಗಾರಪೇಟೆ, ಕೋಲಾರ ಮತ್ತು ಶ್ರೀನಿವಾಸಪುರ. ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು. ತುಮಕೂರು: ಕುಣಿಗಲ್, ಪಾವಗಡ, ಮಧುಗಿರಿ, ಸಿರಾ ಮತ್ತು ತುಮಕೂರು. ಚಿತ್ರದುರ್ಗ: ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ ಮತ್ತು ಮೊಳಕಾಲ್ಮೂರು. ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು. ಮೈಸೂರು: ಕೃಷ್ಣರಾಜನಗರ, ನಂಜನಗೂಡು ಮತ್ತು ತಿ.ನರಸೀಪುರ. ಮಂಡ್ಯ: ಕೃಷ್ಣರಾಜಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ನಾಗಮಂಗಲ. ಬಳ್ಳಾರಿ: ಬಳ್ಳಾರಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಸಂಡೂರು ಮತ್ತು ಶಿರಗುಪ್ಪ. ಕೊಪ್ಪಳ: ಗಂಗಾವತಿ, ಕೊಪ್ಪಳ, ಕುಷ್ಟಗಿ ಮತ್ತು ಯಲಬುರ್ಗ.
ರಾಯಚೂರು: ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯಚೂರು ಮತ್ತು ಸಿಂಧನೂರು. ಗುಲ್ಬರ್ಗ: ಅಫ್ಝಲ್‌ಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಗುಲ್ಬರ್ಗ, ಜೇವರ್ಗಿ ಮತ್ತು ಸೇಡಂ. ಯಾದಗಿರಿ: ಶಹಾಪುರ ಮತ್ತು ಸುರಪುರ
ಬೀದರ್: ಬೀದರ್. ಬಾಗಲಕೋೆ: ಬೀಳಗಿ, ಜಮಖಂಡಿ ಮತ್ತು ಮುಧೋಳ. ಬಿಜಾಪು: ಬಸವನಬಾಗೇವಾಡಿ, ಬಿಜಾಪುರ, ಇಂಡಿ ಮತ್ತು ಸಿಂಧಗಿ. ಗದಗ: ಗದಗ ಮತ್ತು ಮುಂಡರಗಿ. ಹಾಸನ: ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ ಮತ್ತು ಹೊಳೆನರಸೀಪುರ. ಚಿಕ್ಕಮಗಳೂರು: ಕಡೂರು. ಧಾರವಾಡ: ನವಲಗುಂದ. ಬೆಳಗಾವಿ: ಅಥಣಿ
0 comments:
Post a Comment