--ಕೃತಿ ಕರುಗಲ್
ಗದಗ : ಕೊಪ್ಪಳ ವಿಧಾನಸಭೆಯಲ್ಲಿ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದ ವಿವಿಧ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರತೊಡಗಿವೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಎದುರಿಸುತ್ತಿರುವ ಮೊದಲ ಅಗ್ನಿಪರೀಕ್ಷೆಗೆ ಬಿಜೆಪಿಯಲ್ಲಿನ ಶಾಸಕರೇ ಅಡ್ಡಗಾಲು ಹಾಕುವ ಲಕ್ಷಣಗಳು ಗೋಚರಿಸುತ್ತಿವೆ. ಮಾಜಿಸಚಿವ ಬಿ.ಶ್ರೀರಾಮುಲು ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಬೆಂಬಲಿಗರ ಮಾತಿಗೆ ಕಟ್ಟು ಬಿದ್ದಿರುವ ಅವರು ಹೊಸ ಪಕ್ಷ ಕಟ್ಟುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವದಂತಿ ಕೊಪ್ಪಳ ವಿಧಾನಸಭಾ ಉಪಚುನಾವಣೆಯ ಮೇಲೆ ನೇರ ಪರಿಣಾಮ ಬೀರಲಿದೆ.
ಕೊಪ್ಪಳ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಪಕ್ಷ ಕರಡಿ ಸಂಗಣ್ಣ ಅವರನ್ನು ಅಭ್ಯರ್ಥಿ, ಕಾಂಗ್ರೆಸ್ ಪಕ್ಷವೂ ಕೂಡಾ ಕೊಪ್ಪಳದ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಅವರ ಹೆಸರನ್ನು ಅಂತಿಮಗೊಳಿಸಿದೆ. ಜೆಡಿಎಸ್‌ನಿಂದ ಸ್ಪಽಸಲು ಮೊದಲು ಸೈಯದ್ ಹೆಸರು ಕೇಳಿಬಂದಿತ್ತು. ನಂತರ ಪ್ರದೀಪಗೌಡ ಎಂದು ಸುದ್ದಿಯಲ್ಲಿ ಗಾಳಿಯಲ್ಲಿ ಹರಡಿತ್ತು. ಬಳಿಕ ಸೂರ್ಯನಾರಾಯಣ ರೆಡ್ಡಿ ಜೆಡಿಎಸ್‌ನಿಂದ ಕೊಪ್ಪಳ ಉಪಚುನಾವಣೆಯ ಅಖಾಡಕ್ಕೆ ಧುಮುಕಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈಗ ಜೆಡಿಎಸ್ ಅಭ್ಯರ್ಥಿ ಘೋಷಣೆ ಬಗ್ಗೆ ಇನ್ನೂ ಮೌನವಾಗಿದೆ.
ಪಕ್ಷದ ವರಿಷ್ಠರನ್ನು ಮಣಿಸಲು ಸಿಕ್ಕ ಅವಕಾಶ :
ಬಳ್ಳಾರಿಯ ರೆಡ್ಡಿ ಸಹೋದರರು ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಚಿವ ಸಂಪುಟದಲ್ಲಿ ಈ ದಿನದವರೆಗೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಗಡ್ಕರಿ ಅವರಿಗೆ ನೀಡಿದ ಖಡ್ಗ ಇನ್ನೂ ಕೆಲಸ ಪ್ರಾರಂಭಿಸಿಲ್ಲ. ಹಾಗಾಗಿ ಬಿಜೆಪಿ ತಮ್ಮನ್ನು ಕಡೆಗಣಿಸಿದೆ ಎಂಬ ಲೆಕ್ಕಾಚಾರ ಹಾಕಿಕೊಂಡಿರುವ ರೆಡ್ಡಿ ಸಹೋದರರು ರಾಮುಲು ಅವರನ್ನು ಮುಂದಿಟ್ಟುಕೊಂಡು ಹೊಸ ಆಟ ಶುರು ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಬಿಜೆಪಿಯ ಮಾಜಿ ಸಚಿವರು ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಸುದ್ದಿಯನ್ನು ಹರಿಬಿಟ್ಟು ಬಿಜೆಪಿ ಹೈಕಮಾಂಡ್‌ನ್ನು ಎಚ್ಚರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.
ಕೊಪ್ಪಳ ವಿಧಾನಸಭಾ ಕ್ಷೇತ್ರ ಬಳ್ಳಾರಿಯ ಪಕ್ಕದಲ್ಲೇ ಇರುವುದರಿಂದ ಗಣಿಧಣಿಗಳು ತಮ್ಮ ಪ್ರಭಾವ ಬೀರಲು ಹೊಸ ತಂತ್ರ ರೂಪಿಸಿದ್ದಾರೆ. ಏಕೆಂದರೆ ಕೊಪ್ಪಳ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ. ಒಂದು ವೇಳೆ ಗೆದ್ದರೆ ಅದೂ ಹೊಸ ಇತಿಹಾಸವೇ. ಇದೇ ಅವಕಾಶವನ್ನು ಬಳಸಿಕೊಳ್ಳಲು ಗಣಿಧಣಿಗಳು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹೊಸಪೇಟೆಯ ಶಾಸಕ ಆನಂದಸಿಂಗ್ `ಎಸ್‌ವಿಕೆ' ಬಸ್‌ಗಳ ಮೂಲಕ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ತಮ್ಮನ್ನು ಪರೋಕ್ಷವಾಗಿ ಪರಿಚಯಿಸಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸಕರು ಕೊಪ್ಪಳಕ್ಕೆ ಕಾಲಿಟ್ಟರೆ ಗೆಲುವು ಖಚಿತ ಎಂಬ ವಿಶ್ವಾಸ ಅವರಲ್ಲಿದೆ.
ಬಿಜೆಪಿಯ ಹೈಕಮಾಂಡ್‌ಗೂ ಕೂಡಾ ಇದು ಗೊತ್ತಿರದ ಸಂಗತಿಯೇನಲ್ಲ. ಆದರೂ ಅವರನ್ನು ಮಂತ್ರಿಮಂಡಲದ ಸ್ಥಾನ-ಮಾನದಿಂದ ದೂರವಿಟ್ಟಿರುವ ಬಿಜೆಪಿ ವರಿಷ್ಠರಿಗೆ ಕೊಪ್ಪಳ ವಿಧಾನಸಭೆಯ ಉಪಚುನಾವಣೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜೊತೆಗೆ ಸಿಎಂ ಸದಾನಂದಗೌಡ ಅವರಿಗೂ ಮೊದಲ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಈ ಎಲ್ಲ ರಾಜಕೀಯ ಲೆಕ್ಕಾಚಾರ ಹಾಕಿದ ಬಳ್ಳಾರಿ ಸಚಿವರು ಈ ಅವಕಾಶವನ್ನು ಸಚಿವ ಸಂಪುಟದಲ್ಲಿ ತಮ್ಮ ಸ್ಥಾನ-ಮಾನಕ್ಕಾಗಿ ಗಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅದಕ್ಕಾಗಿ ಬಳ್ಳಾರಿಯ ಶಾಸಕರೂ ರಾಮುಲು ಅವರನ್ನು ಮುಂದಿಟ್ಟುಕೊಂಡು ಹೊಸ ಪಕ್ಷದ ಹಾಗೂ ಬಿಜೆಪಿ ಬಿಡುವ ಗುಂಗಿಹುಳವನ್ನು ಹಾರಿಬಿಟ್ಟಿದ್ದಾರೆ. ರಾಮುಲು ಕೂಡಾ ಎಲ್ಲಿಯೂ ತಾವು ಬಿಜೆಪಿ ಬಿಡುವುದಾಗಿ ಹೇಳಿಕೊಂಡಿಲ್ಲ. ಎಲ್ಲ ಊಹಾಪೋಹಗಳಿಗೆ ಶೀಘ್ರದಲ್ಲಿಯೇ ತೆರೆ ಬೀಳುತ್ತೆ ಕಾದು ನೋಡಿ ಎಂದು ಹೇಳುವ ಮೂಲಕ ಬಳ್ಳಾರಿ ಜಿಲ್ಲೆಯ ಗಣಿಧಣಿಗಳ ನಡೆ ಕುರಿತು ಕುತೂಹಲ ಸೃಷ್ಟಿಸಿದ್ದಾರೆ.
ಆತಂಕದಲ್ಲಿರುವ ಕರಡಿ :
ಇದುವರೆಗೂ ಇದ್ದಂಥ ಬಿಜೆಪಿ ವಾತಾವರಣ ದಿನಗಳೆದಂತೆ ಬದಲಾಗುತ್ತಿದೆ. ಈ ಹಿಂದೆ ಕರಡಿ ಸಂಗಣ್ಣ ಬಿಜೆಪಿಯಿಂದಲೇ ಸ್ಪಽಸಿ ಸೋಲುಂಡಿದ್ದಾರೆ. ಈ ಸಲ ಮತ್ತೇ ಬಿಜೆಪಿಯಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಹಾಗೂ ಬಳ್ಳಾರಿಯ ಮಾಜಿ ಸಚಿವರ ನಡೆ ಕರಡಿ ಸಂಗಣ್ಣ ಆತಂಕಕ್ಕೀಡು ಮಾಡಿದೆ.
೧೯೯೪ರಲ್ಲಿ ಕೆಪಿಸಿ ಬಂಡಾಯ ಅಭ್ಯರ್ಥಿಯಾಗಿ ಛತ್ರಿ ಗುರುತಿನಿಂದ ಪಕ್ಷೇತರರಾಗಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಕರಡಿ ಸಂಗಣ್ಣ ವಿರೋಧ ಪಕ್ಷದ ಶಾಸಕನ ಸ್ಥಾನದಲ್ಲಿದ್ದರು. ಆಗ ಜನತಾ ದಳ ಸರಕಾರ ರಚಯಾಗಿದ್ದರಿಂದ ಇವರು ಜನತಾ ದಳದ ಸಹ ಸದಸ್ಯರಾಗಿದ್ದರು. ೧೯೯೯ ರಲ್ಲಿ ಸಂಯುಕ್ತ ಜನತಾ ದಳದಿಂದ (ಬಾಣದ ಗುರುತು) ಗೆದ್ದರು. ಆಗ ಕಾಂಗ್ರೆಸ್ ಸರಕಾರ ಅಽಕಾರಕ್ಕೆ ಬಂದಿದ್ದರಿಂದ ಸಂಗಣ್ಣ ಮತ್ತೇ ವಿರೋಧ ಪಕ್ಷದ ಶಾಸಕರಾಗಿ ಕಾರ್ಯ ನಿರ್ವಹಿಸಬೇಕಾಯಿತು. ಆ ದಿನಗಳಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೇ ಕಾಂಗ್ರೆಸ್ ಸೇರುವಂತೆ ಒತ್ತಾಯಿಸಿದರೂ ಒಪ್ಪದ ಕರಡಿ ಸಂಗಣ್ಣ ಬಿಜೆಪಿ ಬಳಗ ಸೇರಿಕೊಂಡರು. ೨೦೦೪ ರಲ್ಲಿ ಬಿಜೆಪಿಯಿಂದ ಸ್ಪಽಸಿ ಸೋಲುಂಡರು. ಈ ಸೋಲಿನ ಹತಾಶೆಯಿಂದ ಹೊರಬರಲು ಸೇರಿದಷ್ಟೇ ವೇಗವಾಗಿ ಬಿಜೆಪಿ ಬಿಟ್ಟು ಜಾತ್ಯತೀತ ಜನತಾ ದಳ ಸೇರಿದರು. ೨೦೦೮ ರ ಚುನಾವಣೆಯಲ್ಲಿ ಜೆಡಿಎಸ್ ಅವರನ್ನು ಮತ್ತೇ ಗೆಲುವಿನ ದಡಕ್ಕೆ ತಂದಿತ್ತು. ವಿಪರ್ಯಾಸವೆಂದರೆ ಆಗಲೂ ಅವರು ವಿರೋಧ ಪಕ್ಷದ ಶಾಸಕನ ಸ್ಥಾನದಲ್ಲಿ ಕೆಲಸ ಮಾಡಬೇಕಾಯಿತು.
ಆಡಳಿತಾರೂಢ ಸರ್ಕಾರದ ಶಾಸಕನಾಗಿ ಕೆಲಸ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂಬ ಕನಸಿನೊಂದಿಗೆ ಇತ್ತಿಚೆಗೆ ಜೆಡಿಎಸ್‌ಗೆ ಕೈ ಕೊಟ್ಟು ಮತ್ತೇ ಬಿಜೆಪಿ ಸೇರಿದ್ದಾರೆ. ಇದರ ಬೆನ್ನಲ್ಲೇ ರಾಮುಲು ಅವರ ಬಗೆಗಿನ ಬೆಳವಣಿಗೆಗಳು ಕರಡಿ ಸಂಗಣ್ಣ ಅವರನ್ನು ನಿದ್ದೆಗೆಡಿಸಿವೆ.
ಕೊಪ್ಪಳದ ಕಡೆಗೆ ಕಾಂಗ್ರೆಸ್ ನಡಿಗೆ :
ಈಗಾಗಲೇ ರಾಜ್ಯದಲ್ಲಿ ಜನರ ಬಳಿಗೆ ಕಾಂಗ್ರೆಸ್ ನಡಿಗೆ ಮಾಡಿ ಹೊಸ ಹುಮ್ಮಸ್ಸಿಲ್ಲಿರುವ ಕಾಂಗ್ರೆಸ್ ಪಕ್ಷದ ಮುಖಂಡರ ನಡಿಗೆ ಕೊಪ್ಪಳದ ಕಡೆಗಿದೆ. ಶತಾಯಗತಾಯ ಗೆಲ್ಲಲೇಬೇಕು ಎಂಬ ರಣತಂತ್ರದೊಂದಿಗೆ ಕಾಂಗ್ರೆಸ್ ಪಾಳಯ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬೀಡು ಬಿಡುವ ಸಿದ್ಧತೆಗಳು ಬಲು ಜೋರಾಗಿ ನಡೆದಿವೆ ಎಂದು ಮೂಲಗಳು ತಿಳಿಸಿವೆ.
0 comments:
Post a Comment