PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ :  ೩೭೧ ಕಲಂ ಅನ್ನು ಹೈದರಾಬಾದ ಕರ್ನಾಟಕ ಭಾಗಕ್ಕೆ ಜಾರಿಮಾಡಲು ಸರಕಾರದ ಮಲತಾಯಿಧೊರಣೆ ನಮ್ಮ ಭಾಗದ ಜನ ಪ್ರತಿನಿಧಿಗಳ ನಿರ್ಲಕ್ಷಕ್ಕೆ ಕಾರಣವಾಗಿದೆ. ಆದ್ದರಿಂದ ಸಂವಿಧಾನದ ೩೭೧ ನೇ ಅನುಚ್ಛೇದ ತಿದ್ದುಪಡಿ ಹೋರಾಟ ಸಮಿತಿಯು ನಿರಂತರ ಹೋರಾಟವನ್ನು ಕಲಂ ತಿದ್ದುಪಡಿಯಾಗುವವರೆಗೂ ನಿಲ್ಲಿಸವುದಿಲ್ಲ ಎಂದು ನಗರದ ಬಿ.ಎನ್,ಆರ್.ಕೆ ಡಿ.ಎಡ್. ಕಾಲೇಜಿನಲ್ಲಿ ನಡೆದ ಹೈದರಾಬಾದ ಕರ್ನಾಟಕ ಸ್ವಾತಂತ್ರ ದಿನಾಚರಣೆ ಮತ್ತು ಭಾಷಣ ಸ್ಪರ್ಧೇ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಶಿವಕುಮಾರ ಕುಕನೂರ ಹೇಳಿದರು.
ಈ ಹೋರಾಟ ಯಶಸ್ವಿಯಾಗಬೇಕಾದರೆ ಕೇವಲ ಜನಪ್ರತಿನಿಧಿಗಳ ಮಾತ್ರ ಜವಾಬ್ದಾರಿಯಲ್ಲ. ಶಿಕ್ಷಕರು, ವಿದ್ಯಾರ್ಥಿಗಳು, ಕಾರ್ಮಿಕರ ಸಂಘಗಳು, ಮಹಿಳಾ ಸಂಘಗಳು, ಹೀಗೆ ಎಲ್ಲರೂ ಒಟ್ಟಾರೆಯಾಗಿ ದೊಡ್ಡಮಟ್ಟದ ಜನಾಂದೋಲನವಾಗಿ ರೂಪಗೊಂಡಾಗ ಇದು ಸಾದ್ಯ. ಆ ಕಾರಣಕ್ಕಾಗಿ ಸಮಿತಿಯಿಂದ ಸತತವಾದ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಸಮಿತಿಯ ಇನ್ನೊರ್ವ ಜಿಲ್ಲಾಸಂಚಾಲಕ ಸಂತೋಷ ದೇಶಪಾಂಡೆ ಮಾತನಾಡಿ ಪೂಜ್ಯ ಗವಿಮಠ ಶ್ರೀಗಳ ನೇತೃತ್ವದಲ್ಲಿ ಶಿಕ್ಷಕರಿಗೆ ಮತ್ತು ಉಪನ್ಯಾಷಕರಿಗೆ ೩೭೧ ನೇ ಕಲಂ ಲಾಬಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಮುಂದಿನ ದಿನಮಾನಗಳಲ್ಲಿ ಹಮ್ಮಿಕೊಳ್ಳಲಾಗುವುದು.. ಹೋರಾಟಕ್ಕೆ ವಿವಿಧ ವಿಭಾಗಗಳನ್ನು ಸಿದ್ದಗೊಳಿಸುವ ಯೋಜನೆ ಇದು ಕಾಲೇಜಿಗೆ ಒಂದೊಂದು ಸಮಿತಿ ಮಾಡಲಾಗುವದೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಎನ್.ಆರ್.ಕೆ ಪಿ.ಯು ಪ್ರಾಚಾರ್ಯ ಅನಿಲ ಅಂಗಡಿಕಿಯವರು ಮಾತನಾಡಿ ಹಿಂದುಳಿದ ಹೈದರಾಬಾದ ಕರ್ನಾಟಕ ಭಾಗಕ್ಕೆ ಕೇಂದ್ರ ಸರಕಾರದಿಂದ & ರಾಜ್ಯ ಸರಕಾರ ಎರಡರಿಂದಲೂ ಅನ್ಯಾಯವಾಗಿದೆ ಎಂದು ಹೇಳಿದರು. ಕುಮಾರಿ ಸುಮಿತ್ರಾ ಮಜ್ಜಗಿ ನಿರೂಪಿಸಿದರೆ, ನಿರ್ಮಲ ಪ್ರಾರ್ಥನೆ ಗೈದರು. ಕುತಿಜಾ ಸ್ವಾಗತಿಸಿದರು, ಕುಮಾರಿ ವಿದ್ಯಾ ವಂದನಾರ್ಪಣೆ ಮಾಡಿದರು, ದೇವೆಂದ್ರಪ್ಪ ಪುಷ್ಪಾರ್ಪಣೆ ನಡೆಸಿಕೊಟ್ಟರು. ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪತ್ರ ಪದಕಗಳನ್ನು ವಿತರಿಸಲಾಯಿತು.

Advertisement

0 comments:

Post a Comment

 
Top