ಕೊಪ್ಪಳ : ಸೆ: ೨೦ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ್ದು ಮುಖ್ಯ ಮಂತ್ರಿ ಕಚೇರಿಯಿಂದ ಡಾ|| ಅಂಬೇಡ್ಕರವರ ಭಾವಚಿತ್ರ ಪೋಟೋ ತೆಗೆಸಿದ್ದು ಇವರು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ದಲಿತರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಸವಣೂರಿನಲ್ಲಿ ಸವರ್ಣಿಯರ ಇನ್ನೂ ಮಲ ಹೊರುವ ಪದ್ದತಿ ಜೀವಂತ ಇದೇ ಎನ್ನುವದಕ್ಕೆ ಅಲ್ಲಿ ಕೆಲಸ ಮಾಡುತ್ತಿದ್ದ ದಲಿತರು ಮೈಮೆಲೆ ಮಲ ಸುರಿದು ಕೊಂಡು ಪ್ರತಿಭಟಿಸಿದ್ದು ಅವರು ವಾಸಿಸುತ್ತಿದ್ದ ಗುಡಿಸಲನ್ನು ತೆರವು ಗೊಳಿಸಲು ಮುಂದಾಗಿದ್ದ ಈ ಸರಕಾರ ದಲಿತರ ವಿರೋಧಿ ಎನ್ನುವದನ್ನು ಸಾಬೀತು ಗೊಳಿಸಿದೆ. ರಾಜ್ಯದ ಯಾವದೇ ಸರಕಾರಿ ಕಚೇರಿಗಳಲ್ಲಿ ಪೋಲಿಸ ಇಲಾಖೆಗಳಲ್ಲಿ ಮುಖ್ಯ ಹುದ್ದೆಗಳನ್ನು ಸವರ್ಣಿಯರಿಗೆ ದಯಪಾಲಿಸಿದ್ದು. ದಲಿತರನ್ನು ಕಡೆಗಣಿಸಿದ್ದು ಈ ಸರಕಾರ ದಲೀತ ವಿರೋಧಿ ಎಂದು ಈಗಾಗಲೇ ಸಾಬೀತಾಗಿದ್ದು ಇಂತಹ ದಲಿತ ವಿರೋಧಿ ಸರಕಾರವನ್ನು ರಾಜ್ಯದಿಂದಲೇ ಕಿತ್ತೊಗೆಯ ಬೇಕಾಗಿದೆ ಎಂದು ಕೊಪ್ಪಳ ವಿಧಾನ ಸಭೆಗೆ ನಡೆದ ಉಪಚುನಾವಣೆಯಲ್ಲಿಯ ಪ್ರಚಾರ ಸಂದರ್ಭದಲ್ಲಿಯ ದಲಿತರನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿರವರು ಮಾತನಾಡುತ್ತಾ ಹೇಳಿದರು. ಮನುವಾದಿಗಳ ಈ ಸರಕಾರ ರಾಜ್ಯದಲ್ಲಿ ಇದ್ದಷ್ಟು ದಿನ ದಲಿತರಿಗೆ ಅಪಾಯಕಾರಿ ಎಂದು ಮದ್ಯಾಹ್ನ ೧೨ ಗಂಟೆಗೆ ನಡೆದ ಸಭೆಯಲ್ಲಿ ಕಾಂಗ್ರೆಸ ಅಬ್ಯರ್ಥಿ ಕೆ. ಬಸವರಾಜ ಹಿಟ್ನಾಳರ ಪ್ರಚಾರ ಸಭೆಯಲ್ಲಿ ದಲಿತ ಕರೆಯ ಬಂದುಗಳನ್ನು ಉದ್ದೇಶಿಸಿ ಮಾತನಾಡಿದರು. ನಂತರ ದಲಿತ ಕೆರೆಯಲ್ಲಿ ಪಾದಯಾತ್ರೆಯ ಮೂಲಕ ಮತದಾರ ಬಾಂದವರಲ್ಲಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯದಶಿ ರಾಜಶೇಖರ ಮೆಣಸಿನಕಾಯಿ ಕಾಂಗ್ರೆಸ ಮುಖಂಡರಾದ ಬಾಬಾಜಾನ ಮುಧೂಳ, ಮೊಹನ ಹಿರೇಮನಿ, ಕವಲೂರು ಗ್ರಾಮದ ಹಿರಿಯರಾದ ಹೊಣಕೇರೆಪ್ಪ ಮುಕ್ಕಿನ್ನವರ, ಶರಣಪ್ಪ ಸಿದ್ನೇಕೊಪ್ಪ, ವೆಂಕಪ್ಪ ಹಳ್ಳಿ, ರಾಮಣ್ಣ ಗುಡಿ, ಶಿವಪ್ಪ ಸಿದ್ನೇಕೊಪ್ಪ, ಶ್ರೀದರ ಗೌಡ್ರ, ಅಜಿಮಸಾಬ ಹಳ್ಳ್ಳಿಕೇರಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
0 comments:
Post a Comment