ಕೊಪ್ಪಳ ಸೆ. ೨೧ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು ೨೫ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಅಬಕಾರಿಗೆ ಸಂಬಂಧಿಸಿದಂತೆ ೧೭ ಪ್ರಕರಣಗಳಾಗಿದ್ದರೆ, ಇತರೆ ಉಲ್ಲಂಘನೆಯ ೮ ಪ್ರಕರಣಗಳು ದಾಖಲಾಗಿವೆ.
ಉಪಚುನಾವಣೆ ಅಧಿಸೂಚನೆ ಜಾರಿಯಾದಾಗಿನಿಂದ ಈವರೆಗೆ ಅಬಕಾರಿ ನೀತಿ ಉಲ್ಲಂಘನೆ ಕುರಿತು ೨೦ ಕಡೆಗಳಲ್ಲಿ ದಾಳಿ ಕೈಗೊಳ್ಳಲಾಗಿದ್ದು, ೧೭ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸಲಾಗಿದೆ. ಇದುವರೆಗೂ ೧೮ ಜನರನ್ನು ಬಂಧಿಸಲಾಗಿದ್ದು, ೫೦. ೯೦೦ ಲೀ. ಮದ್ಯ ಹಾಗೂ ೧೦. ೫೬೦ ಲೀ. ಬಿಯರ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಅನಧಿಕೃತ ವಾಹನಗಳ ಬಳಕೆ, ಹಣ ವಿತರಣೆ ಹಾಗೂ ಇತರೆ ಬಗೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು ೮ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕೊಪ್ಪಳ ನಗರ ವ್ಯಾಪ್ತಿಯಲ್ಲಿ ೦೫ ಹಾಗೂ ಹಿಟ್ನಾಳ್ ಹೋಬಳಿ ವ್ಯಾಪ್ತಿಯಲ್ಲಿ ೦೩ ಪ್ರಕರಣಗಳು ದಾಖಲಾಗಿವೆ. ದಾಖಲಿತ ಪ್ರಕರಣಗಳ ಪೈಕಿ ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದಂತೆ ೦೩, ಜನತಾದಳ (ಜಾತ್ಯಾತೀತ)- ೦೧, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ ೦೨ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ೦೨ ಪ್ರಕರಣಗಳು ದಾಖಲಾಗಿವೆ ಎಂದು ಚುನಾವಣಾಧಿಕಾರಿ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
0 comments:
Post a Comment