ಕೊಪ್ಪಳ ಸೆ. ೧೨ : ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅಂತಿಮ ದಿನವಾಗಿದ್ದ ಸೆ. ೧೨ ರಂದು ಐವರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ, ಅಂತಿಮವಾಗಿ ಕಣದಲ್ಲಿ ೧೪ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
ಉಪಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ೧೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು, ಈ ಪೈಕಿ ಜಮೀರುದ್ದೀನ್ ಮೌಲ್ವಿ (ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿ), ಚಕ್ರವರ್ತಿ ನಾಯಕ್ (ರಾಷ್ಟ್ರೀಯ ಕ್ರಾಂತಿಕಾರಿ ಸಮಾಜವಾದಿ ಪಾರ್ಟಿ), ರಾಜಶೇಖರ ಎಸ್ ಪುರಾಣಿಕ ಮಠ (ಪಕ್ಷೇತರ), ಶಂಕರನಾಯಕ್ ಮುಂಗಲಿ (ಪಕ್ಷೇತರ) ಹಾಗೂ ಶಂಭುಲಿಂಗೇಗೌಡ (ಪಕ್ಷೇತರ) ಸೇರಿದಂತೆ ಒಟ್ಟು ೦೫ ಅಭ್ಯರ್ಥಿಗಳು ಸೆ. ೧೨ ರಂದು ಸೋಮವಾರ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿರುವ ೧೪ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ.
ಕ್ರ.ಸಂ. ಅಭ್ಯರ್ಥಿಯ ಹೆಸರು ಪಕ್ಷ
೦೧ ಕೆ. ಬಸವರಾಜ ಹಿಟ್ನಾಳ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್)
೦೨ ನಿರ್ಮಲ ಮಲ್ಲಿಕಾರ್ಜುನ ಹಡಪದ ಪಕ್ಷೇತರ
೦೩ ಸಣ್ಣ ಮೌಲಾಸಾಬ್ ಪಕ್ಷೇತರ
೦೪ ಸಂಗಣ್ಣ ಕರಡಿ ಭಾರತೀಯ ಜನತಾ ಪಕ್ಷ (ಬಿಜೆಪಿ)
೦೫ ಬಸಪ್ಪ ಶಂಕರಪ್ಪ ಪಕ್ಷೇತರ
೦೬ ವಿಠ್ಠಪ್ಪ ಗೋರಂಟ್ಲಿ ಪಕ್ಷೇತರ
೦೭ ಹೆಚ್.ಎಮ್. ಎಹೆಸಾನುಲ್ಲ ಪಟೇಲ್ ಪಕ್ಷೇತರ
೦೮ ಯಮನೂರಪ್ಪ ಮರಿಯಪ್ಪ ಪಕ್ಷೇತರ
೦೯ ಸಂಗಮೇಶ್ ಹಿರೇಮಠ ಪಕ್ಷೇತರ
೧೦ ಮನ್ಸೂರ್ ಬಾಷಾ ಪಕ್ಷೇತರ
೧೧ ಮೌನೇಶ್ ಶಂಕರಪ್ಪ ಪಕ್ಷೇತರ
೧೨ ಶರಣಗೌಡ ನೀಲನಗೌಡ ಆರ್.ಪಿ.ಐ. (ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ)
೧೩ ಪ್ರದೀಪ್ ವಿರೂಪಾಕ್ಷಗೌಡ ಜನತಾದಳ (ಜಾತ್ಯಾತೀತ) (ಜೆ.ಡಿ.ಎಸ್)
೧೪ ರಾಮುಲು ತಂದೆ ವಾಸುದೇವ್ ಪಕ್ಷೇತರ
0 comments:
Post a Comment