ಕೊಪ್ಪಳ ; ಹಣಕಾಗಿ ತಮ್ಮನ್ನು ಮಾರಿಕೊಂಡಿರುವ ಮಾಜಿ ಶಾಸಕ ಸಂಗಣ್ಣ ಕರಡಿ ಅನವಶ್ಯಕವಾಗಿ ಉಪಚುನಾವಣೆ ಹೇರಿರುವ ಸಂಗಣ್ಣ ಕರಡಿಯನ್ನು ಸೋಲಿಸಿ ಮನೆಗೆ ಕಳುಹಿಸಿ ಎಂದು ಮಾಜಿ ಸಚಿವ, ಕಾಂಗ್ರೇಸ್ ಮುಖಂಡ ಇಕ್ಬಾಲ ಅನ್ಸಾರಿ ಹೇಳಿದರು.ಅವರು ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪಚುನಾವಣಾ ನಿಮಿತ್ಯ ಬಸಾಪೂರ ಗ್ರಾಮದಲ್ಲಿ ಸೇರಿದ್ದ ಅಪಾರ ಜನಸ್ತೊಮ ಉದ್ದೇಶಿಸಿ ಮಾತನಾಡುತ್ತಿದ್ದರು
ಸಂಗಣ್ಣ ಕರಡಿ ವಯಕ್ತಿಕ ಲಾಭಕ್ಕಾಗಿ ಬಿ.ಜೆ.ಪಿ. ಸೇರಿದ್ದು ಕ್ಷೇತ್ರದ ಜನರನ್ನು ವಂಚಿಸಿದ್ದಾರೆ ಹಣಕ್ಕಾಗಿ ಬಿ.ಜೆ.ಪಿ ಸೇರಿರುವ ಸಂಗಣ್ಣ ಕರಡಿಯಂತವರು ಗೆಲ್ಲಬಾರದು ಈ ಉಪಚುನಾವಣೆ ಕರಡಿಯ ಪಾಪದ ಕೂಸು ಆಕ್ರೋಶ ವ್ಯಕ್ತಪಡಿಸಿದರು
ಸಂಗಣ್ಣ ಕರಡಿ ಸೇರುವ ಪಕ್ಷ ಹಾಳಾಗುತ್ತದೆ ಅದಕ್ಕೆ ಹಿಂದಿನ ಇತಿಹಾಸ ಸಾಕ್ಷಿ ಕರಡಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಯಡಿಯೊರಪ್ಪ ಕುರ್ಚಿ ಕಳೆದುಕೊಂಡು ಮನೆಗೆ ಹೊದರು ಮುಂದೆ ಬಿ.ಜೆ.ಪಿ ಕೂಡ ಹಾಳಾಗಲಿದೆ ಎಮದು ಅನ್ಸಾರಿ ಲೇವಡಿ ಮಾಡಿದರು
ರಾಜ್ಯದಲ್ಲಿ ಬಿ.ಜೆ.ಪಿ ಸರಕಾವು ೩ ವರ್ಷದಿಂದ ವಿಧಾನಸೌದವನ್ನು ಭಷ್ಠಾಚಾರದ ಕೇಂದ್ರವಾಗಿ ಪರಿವರ್ತಿಸಿದೆ ವಿಧಾನಸೌಧ ಸಾರ್ವಜನಿಕರ ಆಸ್ತಿ ಅದು ಬಿಜೆಪಿ ಅಥವಾ ಯಡಿಯೊರಪ್ಪ ಸದಾನಂದಗೌಡರ ಪಿತ್ರಾರ್ಜಿತ ಆಸ್ತಿಯಲ್ಲ ಎಂದರು
ಬಿ.ಜೆ.ಪಿ ಸರಕಾರ ಬಡವರಿಗೆ ನೀಡುತ್ತಿದ್ದ ಅಕ್ಕಿಯನ್ನು ೫ ಕೆ.ಜಿಗೆ ಸಿಮೇಎಣ್ಣೆ ೨ಲೀಟರ್‌ಗೆ ಇಳಿಸಿದೆ ಅದನ್ನೂ ಕಾಳಸಂತೆಯಲ್ಲಿ ಮಾರಿ ಬಡವರ ಹೊಟ್ಟೆಯ ಮೇಲೆ ರಾಜ್ಯದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಇಲ್ಲದೆ ಗ್ರಾಮೀಣ ರೈತರ ಬದುಕು ದುಸ್ಥರವಾಗಿದೆ ದುರಾಡಳಿತ ಬಿಜೆಪಿ ವಿರುದ್ದ ಕಾಂಗ್ರೇಸ್ ಗೆ ಮತಚಲಾಯಿಸಿ ಎಂದು ಕರೆನಿಡಿದರು ಪ್ರಚಾರ ಸಭೆಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಜಿ.ಎ.ಬಾವಾ, ಮಾಜಿ ಶಾಸಕರಾದ ಹಸನ್ ಸಾಬ್ ದೊಟಿಹಾಳ,ಎಂ.ಶಂಕರ ರಡ್ಡಿ, ಜಿ.ಪಂ ಸದಸ್ಯರಾದ ವಿಜಯಲಕ್ಷ್ಮಿ ರಾಮಕೃಷ್ಣ, ಟಿ.ಜನಾರ್ಧನ, ಗಂಗಾವತಿ ನಗರಸಭೆ ಅಧ್ಯಕ್ಷ ಬಸಪ್ಪ ನಾಯಕ, ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ್, ತಾಪಂ ಸದಸ್ಯರಾದ ದೇವಪ್ಪ, ಹುಲಿಗಿಯ ಪ್ರಭುಗೌಡ ಪಾಟೀಲ, ಇನ್ನು ಪಕ್ಷದ ಅನೇಕ ಅಬಿಮಾನಿಗಳು ಉಪಸ್ಥಿತರಿದ್ದರು ನಂತರ ಅನ್ಸಾರಿ ಹಾಗೂ ತಂಡ ರಾಜಾರಾಮ್ ಪೇಟೆ, ನಾರಾಯಣ ಪೇಟೆ, ಮಹಮ್ಮದ ನಗರ ಕವಳಿ, ಬಂಡಿಹರ್ಲಾಪೂರ,ಹಳೆ ಶಿವಪೂರ,ಹೊಸ ಶಿವಪೂರ ಗ್ರಾಮಗಳಲ್ಲಿ ಪ್ರಚಾರ ನೆಡೆಸಿದರು
0 comments:
Post a Comment