ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಹಾಗೂ ಬಾಲಕಿಯರಸರಕಾರಿ ಪದವಿ ಪೂರ್ವ ಕಾಲೇಜು-ಕೊಪ್ಪಳ ಇವರ ಸಂಯುಕ್ತಆಶ್ರಯದಲ್ಲಿಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನ ಬೆಂಗಳೂರು ಇದರ ಸುವರ್ಣ
ಮಹೋತ್ಸವ ವರ್ಷಾಚರಣೆ ಅಂಗವಾಗಿ ೨೭ನೇ ವಿಶೇಷ ಉಪನ್ಯಾಸ ಕಾರ್ಯಕ್ರಮ ಬಾಲಕೀಯರ ಸ.ಪ.ಪೂ.ಕಾಲೇಜು ಕೊಪ್ಪಳದಲ್ಲಿ ಜರುಗಿತು. ಯುವಜನಾಂಗಕ್ಕೆ ಗಾಂಧೀಜಿ ಸಂದೇಶ ಎಂಬ ವಿಷಯ ಕುರಿತು ಕರ್ನಾಟಕ
ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಗಾಂಧಿವಾದಿ ಡಾ.ಜೆ.ಎಎಸ್.ಪಾಟೀಲ ರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಗಾಂಧೀಜಿಯವರ ಜೀವನ ಮತ್ತು ಮೌಲ್ಯ ಹಾಗು ಹೋರಾಟ ಮತ್ತು ಸ್ವಾತಂತ್ರ್ಯ
ಹೋರಾಟಗಾರರ ತ್ಯಾಗ ಸಾತ್ವಿಕ ಬದುಕಿನ ಮಹತ್ವ ಕುರಿತು ಮನಮುಟ್ಟುವಂತೆಮಾತನಾಡಿದರು.ಅಧ್ಯಕ್ಷಿಯ ಭಾಷಣದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ವಿ.ಬಿ.ರಡ್ಡೇರ ಅವರು ಮಾತನಾಡಿ
ಗಾಂಧೀಜಿಯ ವಿಚಾರಗಳು-ಮೌಲ್ಯಗಳುನಿರಂತರ. ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಜಗತ್ತಿಗೆ ಇಂದು ಎಂದಿಗಿಂತ ಗಾಂಧೀಜಿ ತತ್ವದ ಅಗತ್ಯವಿದೆ ಎಂದು ತಿಳಿಸಿದರು. ಸದಾಶಿವ ಪಾಟೀಲ ನಾಡಗೀತೆ ಹಾಗೂ
ರಘುಪತಿ ರಾಘವ ಗೀತ ಸಂಗೀತ ನಡೆಸಿಕೊಟ್ಟರು. ಅತಿಥಿಗಳಾಗಿ ಹೆಚ್.ಎಸ್.ಪಾಟೀಲ, ಕೆ.ಬಿ.ಬ್ಯಾಳಿ ಮಾತನಾಡಿದರು.ಮಹಾಂತೇಶ ಮಲ್ಲನಗೌಡರ, ಉಪಪ್ರಾಚಾರ್ಯರರು ಅಶೋಕ ಭದ್ರಶೆಟ್ಟಿ, ಡಾ.ಆರ್.ಎಂ. ಪಾಟೀಲ, ಶಕೀಲ ಅಹ್ಮದ ಉಪಸ್ಥಿತರಿದ್ದರು.
ಗಾಂಧಿ ಭವನದ ಸಂಚಾಲಕ ಉಮೇಶ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಡಿದರು.ರಾಜಶೇಖರ ಪಾಟೀಲ ಉಪನ್ಯಾಸಕರು ಸ್ವಾಗತಿಸಿದರು. ಎಸ್.ವಿ.ಮೇಳಿಉಪನ್ಯಾಸಕರು ವಂದಿಸಿದರು.ಶ್ರೀಮತಿ ಲಲಿತಾಅಂಗಡಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment