PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೨೩ (ಕ.ವಾ) : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ತಾಲೂಕಾ ಮಟ್ಟದ ಪೈಕಾ (ಗ್ರಾಮೀಣ) ಕ್ರೀಡಾಕೂಟ ಸೆ. ೨ ಮತ್ತು ೩ ರಂದು ಎರಡು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಮಾತ್ರ ಭಾಗವಹಿಸಲು ಆರ್ಹರಿರುವರು. ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಶಾಲಾ ಮುಖ್ಯೋಪಧ್ಯಾಯರಿಂದ ಜನ್ಮದಿನಾಂಕದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ೩೧-೧೨-೨೦೧೧ಕ್ಕೆ ೧೬ವರ್ಷ ಮೀರಿರಬಾರದು. ೧೬ ವರ್ಷದ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ. ಹಾಗೂ ಕ್ರೀಡಾಪಟುಗಳು ಗ್ರಾಮೀಣ ಪ್ರದೇಶದ ವಾಸಸ್ಥಳ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಹೆಚ್ಚು ಅಂಕ ಪಡೆದ ಶಾಲೆಗಳಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ನೀಡಿ ಆಯಾ ಗ್ರಾಮ ಪಂಚಾಯತಿಗೆ ಪ್ರಥಮ ಸ್ಥಾನ ರೂ.೨೦,೦೦೦, ದ್ವಿತೀಯ ಸ್ಥಾನಕ್ಕೆ ೧೨,೦೦೦ ಹಾಗೂ ತೃತೀಯ ಸ್ಥಾನಕ್ಕೆ ೪,೦೦೦ ರೂ.ಗಳನ್ನು ಸಂದಾಯ ಮಾಡಲಾಗುವುದು. ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಈ ಕ್ರೀಡಾಕೂಟದಲ್ಲಿ ಸಂಘಟಿಸಲಾದ ಕ್ರೀಡಾ ಸ್ಪರ್ಧೆಗಳ ವಿವರ ಈ ಕೆಳಗಿನಂತಿವೆ.
ಬಾಲಕರಿಗೆ: ಅಥ್ಲೆಟಿಕ್ಸ್ (೧೦೦, ಮೀ, ೪೦೦, ೮೦೦, ೧೫೦೦, ೩೦೦೦ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (೫ಕೆಜಿ), ಚಕ್ರ ಎಸೆತ ೧.೫ ಕೆಜಿ, ೪*೧೦೦ ರಿಲೆ, ೪*೪೦೦ ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ
ಬಾಲಕಿಯರಿಗೆ:- ಅಥ್ಲೆಟಿಕ್ಸ್ (೧೦೦, ಮೀ, ೪೦೦, ೮೦೦, ೧೫೦೦, ೩೦೦೦ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (೪ಕೆಜಿ), ಚಕ್ರ ಎಸೆತ ೧ ಕೆಜಿ, ೪*೧೦೦ ರಿಲೆ, ೪*೪೦೦ ರಿಲೇ, ವ್ಹಾಲಿಬಾಲ್, ಕಬ್ಬಡ್ಡಿ, ಖೋಖೋ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಹಾಕಿ, ಪುಟ್ಬಾಲ್ ಹಾಗೂ ಹ್ಯಾಂಡ್‌ಬಾಲ್ ತಂಡಗಳನ್ನು ನೇರವಾಗಿ ಜಿಲ್ಲಾಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎನ್.ಎಸ್.ಪಾಟೀಲ್, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು,ಕೊಪ್ಪಳ ಇವರ ಮೊಬೈಲ್ : ೯೯೮೦೮೫೨೭೩೫ ಅಥವಾ ಸಿ.ಎ.ಪಾಟೀಲ್ ವ್ಹಾಲಿಬಾಲ್ ತರಬೇತುದಾರರು ಸೆಲ್ : ೯೩೪೨೩೮೭೯೩೫ ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Advertisement

0 comments:

Post a Comment

 
Top