
ಕೊಪ್ಪಳ ಆ. : ತುಂಗಭದ್ರಾ ಜಲಾಶಯದ ಮಟ್ಟ ೧೬೩೨. ೫೦ ಅಡಿ ತಲುಪಿದ್ದು, ಜಲಾಧಯದ ಪೂರ್ಣ ಮಟ್ಟ ೧೬೩೩ ಅಡಿ ತಲುಪಲು ಕೇವಲ ಅರ್ಧ ಅಡಿ ಮಾತ್ರ ಬಾಕಿ ಇದೆ. ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ನದಿಗೆ ನೀರು ಬಿಡುವ ಸಂಭವವಿದೆ. ತುಂಗಭದ್ರಾ ನದಿ ಪಾತ್ರದ ಜನರು ಅಗತ್ಯ ಮುಂಜಾಗ್ರತೆ ಕೈಗೊಳ್ಳುವಂತೆ ತುಂಗಭದ್ರಾ ಜಲಾಶಯ ನೀರಾವರಿ ಕೇಂದ್ರ ವಲಯದ ಕಚೇರಿ ಪ್ರಕಟಣೆ ಎಚ್ಚರಿಕೆ ನೀಡಿದೆ.
ತುಂಗಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ೨೦೦೦೦ ಕ್ಯೂಸೆಕ್ಸ್ ನಷ್ಟಿದ್ದು, ಜಲಾಶಯದ ಕ್ರಸ್ಟ್ ಗೇಟ್‌ಗಳ ಮೂಲಕ ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಬಿಡಲಾಗುವುದು. ನದಿ ಪಾತ್ರದಲ್ಲಿ ವಾಸಿಸುವವರು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತುಂಗಭದ್ರಾ ಜಲಾಶಯ ನೀರಾವರಿ ಕೇಂದ್ರ ವಲಯ ಕಚೇರಿ ಪ್ರಕಟಣೆ ಎಚ್ಚರಿಕೆ ನೀಡಿದೆ.
0 comments:
Post a Comment
Click to see the code!
To insert emoticon you must added at least one space before the code.