PLEASE LOGIN TO KANNADANET.COM FOR REGULAR NEWS-UPDATES


ಪ್ರಜಾಪ್ರಭುತ್ವ ವ್ಯವಸ್ಥೆ ಎಂದಾಕ್ಷಣ ನಮಗೆ ನೆನಪಾಗುವುದು ಪುರಾತನ ಗ್ರೀಕರು.ಪ್ರಪಂಚಕ್ಕೆ ಪ್ರಜಾಪ್ರಭುತ್ವ ವೈವಸ್ಥೆಯ ಪರಿಕಲ್ಪನೆ ನೀಡಿದ್ದು ಗ್ರೀಕರು.ಬುದ್ಧಿಮತ್ತೆಯಲ್ಲಿ ಇಂದಿನ ವೈಜ್ಞಾನಿಕ ಜಗತ್ತನ್ನು ಹಿಂದಿಡುವಷ್ಟು ಬುದ್ಧಿಶಾಲಿಗಳಾದವರು ಪುರಾತನ ಗ್ರೀಕರು.ಗ್ರೀಕರು ವಿಜ್ಞಾನ,ತಂತ್ರಜ್ಞಾನ,ಗಣಿತಶಾಸ್ತ್ರ,ಅರ್ಥಶಾಸ್ತ್ರ,ಇತಿಹಾಸ,ರಾಜ್ಯಶಾಸ್ತ್ರ,ಕಾನೂನಶಾಸ್ತ್ರ ಹೀಗೆ ಎಲ್ಲ ಶಾಸ್ತ್ರಗಳಲ್ಲಿಉ ಅಪಾರವಾದಂತಹ ಜ್ಞಾನ ಸಂಪಾದಿಸಿದ್ದರು.ಇಂದಿಗೂ ಕೂಡ ಗ್ರೀಕರ ಮಹಾಚೇತನಗಳಾದ ಸಾಕ್ರಟೀಸ್,ಪ್ಲೇಟೋ,ಅರಿಸ್ಟಾಟಲ್,ಯೂಕ್ಲಿಡ್,ಆರ್ಕಿಮಿಡಿಸ್ ಮುಂತಾದವರು ಇತಿಹಾಸ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಗ್ರೀಕರ ಅಂದಿನ ರಾಜ್ಯಧಾನಿ ನಗರ ರಾಜ್ಯ”(CITY STATES) ದ ಪರಿಕಲ್ಪನೆಯೇ ಇಂದಿನ ರಾಜ್ಯ,ರಾಷ್ಟ್ರಗಳ ವ್ಯವಸ್ಥೆಗೆ ಕಾರಣವಾಯಿತು .ಈ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯ ಅನೂಕೂಲಕ್ಕಾಗಿ ರಾಷ್ಟ್ರವನ್ನು ರಾಜ್ಯ,ಜಿಲ್ಲೆ,ತಾಲ್ಲೂಕಾ,ಹೋಬಳಿ,ಪಂಚಾಯ್ತಿ ಹೀಗೆ ಹಲವು ಸ್ತರಗಳ ಘಟಕಗಳನ್ನಾಗಿ ವಿಂಗಡಿಸಲಾಯಿತು.
ಸರ್ಕಾರವೆಂಬ ಆಡಳಿತ ಚುಕ್ಕಾಣಿಯ ಮುಖ್ಯವಾಯಿನಿಯು ಚಿಕ್ಕಗ್ರಾಮಗಳಿಗೂ ತಲುಪುವ ಮಹತ್ವದ ಉದ್ದೇಶದಿಂದ ಅಧಿಕಾರ ವಿಕೇಂದ್ರಿಕರಣ ಮಾಡಲಾಯಿತು.ಪ್ರತಿ ಗ್ರಾಮದ ಕುಡಿಯುವ ನೀರು,ಒಳಚರಂಡಿ,ರಸ್ತೆ,ಕಸ ವಿಲೆವಾರಿ ಮುಂತಾದ ಕಾರ್ಯಗಳನ್ನು ಗ್ರಾಮ ಮಟ್ಟದಲ್ಲೇ ಕೈಗೊಳ್ಳಲು ಸ್ಥಳೀಯ ಅಧಿಕಾರ ವರ್ಗ, ಸ್ಥಳೀಯ ರಾಜಕೀಯ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲಾಯಿತು.ಆದರೆ ಪ್ರಸಕ್ತವಾಗಿ ಅಧಿಕಾರ ವಿಕೇಂದ್ರಿಕರಣ ದಿಂದ ನಿರೀಕ್ಷೀತ ಅಭಿವೃದ್ಧಿಯನ್ನು ಸಾಧಸಲಾಗುತ್ತಿದೆಯೇ...!!!
ಉನ್ನತ ರಾಜಕೀಯ ವ್ಯವಸ್ತೆ,ಅಧಿಕಾರ ವರ್ಗವೂ ಭ್ರಷ್ಟಾಚಾರದಲ್ಲಿ ಮುಳುಗಿ ಈಜಾಡುತ್ತಿರುವಾಗ ಇನ್ನೂ ಕೆಳಹಂತದ ತಾಲೂಕು,ಹೋಬಳಿ,ಗ್ರಾಮ ಪಂಚಾಯತಿ ಮಟ್ಟದಲ್ಲಿ ಉತ್ತಮ ಆಡಳಿತವನ್ನು ನಿರೀಕ್ಷೀಸಲಾಗುತ್ತಿದೆಯೇ. . .!!!
ಭಾರತ ದೇಶದ ಮಟ್ಟಿಗೆ ಹೇಳುವುದಾದರೆ ಭ್ರಷ್ಟಾಚಾರವೆಂಬುದು ಹೆಮ್ಮರವಾಗಿ ಬೆಳೆದು ನಿಂತಿದೆ.ಇಲ್ಲಿ ಜವಾನನಿಂದ ಹಿಡಿದು ದಿವಾನನವರೆಗೆ ಎಲ್ಲರು ತಿಂದುಂಡು ತೇಗಿದವರೇ.ಭ್ರಷ್ಟಾಚಾರದಲ್ಲಿ ತಾರತಮ್ಯವಿಲ್ಲದ ಸ್ಪರ್ಧೆ.ಇತ್ತೀಚಿನ


ದಿನಗಳಲ್ಲಂತೂ ಅಧಿಕಾರ ವ್ಯವಸ್ಥೆಯಲ್ಲಿ ಉನ್ನತ ದರ್ಜೆಯಲ್ಲಿರುವರು ಕೆಳಹಂತದ ಅಧಿಕಾರಿಗಳ ಮೇಲೆ ತಿಂಗಳಿಗೆ ಇಂತಿಷ್ಟು ವಂತಿಕೆ ಸಲ್ಲಿಸಬೇಕೆಂಬ ಅನಧಿಕೃತ ವಿದಿಯನ್ನು ಹೇರಿದ್ದಾರೆ.ಇದರಿಂದಾಗಿ ಕೆಳಹಂತದ ಅಧಿಕಾರಿಗಳಿಗೆ ಲಂಚ,ಭ್ರಷ್ಟಾಚಾರ ಹೆಸಗಲೇಬೆಕಾದನಿವಾರ್ಯತೆ ಇದೆ.ಇಲ್ಲದಿದ್ದರೆ ಮೇಲಾಧಿಕಾರಿಗಳ ಶಾಪಕ್ಕೆ ಗುರಿಯಾಗಿ ನೀರು ನೆರಳಿಲ್ಲದ ಕಡೆಗೆ ವಗಾವಣೆ ಪಡೆಯಬೇಕಾಗುತ್ತದೆ.ಇನ್ನೂ ಅದಿಕಾರಿಗಳನ್ನು ನಿಯಂತ್ರಿಸುವ ರಾಜಕೀಯ ಆಡಳಿತ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಶಾಸಕನಿಂದ ಹಿಡಿದು ಮಂತ್ರಿಯವರೆಗೆ ಎಲ್ಲರಿಗೂ ಅಧಿಕಾರಿಗಳ ತಿಂಗಳ ವಂತಿಕೆ ಸಲ್ಲಿಸಬೇಕು ಹೀಗೆ ಉನ್ನತ ಆಡಳಿತ ವ್ಯವಸ್ಥೆಯೇ ಗಬ್ಬೆದ್ದು ನಾರುತ್ತಿರುವಾಗ ಗ್ರಾಮ ಪಂಚಾಯತಿಯಂತಹ ಚಿಕ್ಕ ಘಟಕದಿಂದ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಿರೀಕ್ಷೀಸಲಾದಿತೇ. . .!!!
ಭ್ರಷ್ಟಚಾರವೆಂಬುದು ಬೇರಿನಿಂದ ಎಲೆಯವರೆಗೆ ಹಬ್ಬಿರುವಾಗ ಇನ್ನೂ ಅಧಿಕಾರಿಗಳ ವಿಕೇಂದ್ರಿಕರಣದ ಅತೀ ಚಿಕ್ಕ ಘಟಕವಾದ ಗ್ರಾಮ ಪಂಚಾಯತಿಯಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆಯೇ. . .!!!
ಇಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಸ್ಪರ್ಧೆಗೂ ಕೂಡಾ ಅತ್ಯಂತ ಬೇಡಿಕೆ ಬಂದಿದೆ.ಗ್ರಾಮ ಮಟ್ಟದ ಈ ರಾಜಕಾರಣದಲ್ಲಿಯೂ ಕೂಡಾ ಹಣ.ಹೆಂಡದ ಹೊಳೆ ಬೃಹತ್ತಾಗಿಯೇ ಹರಿಯುತ್ತಿದೆ.ಇದಕ್ಕೆ ಸಾಕ್ಷಿಯಾಗಿ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲೂಕಿನ ಚಿಕ್ಕದಿಬ್ಬೂರ ಹಳ್ಳಿಯಲ್ಲಿ ರಸಾಯನಿಕಯುಕ್ತ ಮದ್ಯವನ್ನು ಕುಡಿದು ಹತ್ತಾರು ಸತ್ತರು ನೂರಾರು ಮಂದಿ ಆಸ್ಪತ್ರೆ ಸೇರಿದರು.ಗ್ರಾಮ ಪಂಚಾಯತಿ ಚುನಾವಣೆಯಲ್ಲಿಯೇ ಈ ಪರಿಯ ಹೆಂಡದ ಹೊಳೆ ಹರಿದಾಡುವಾಗ ಇನ್ನು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಇನ್ನೆಂತಹ ಹೆಂಡ ಹಣದ ಹೊಳೆ ಹರಿಯಬಹುದು ಎಂಬುದನ್ನು ಊಹಿಸಿಕೊಳ್ಳಬಹುದು.ಒಟ್ಟಿನಲ್ಲಿ ಪ್ರಸಕ್ತವಾಗಿ ಪ್ರಜಾಪ್ರಭುತ್ವದ ಮೂಲಬೇರಾಗಿರುವ ಅಧಿಕಾರ ವಿಕೇಂದ್ರಿಕರಣ ತನ್ನ ಅರ್ಥವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ.ಅಧಿಕಾರದ ವಿಕೇಂದ್ರಿಕರಣ ಒಂದು ರೀತಿಯಲ್ಲಿ ಭ್ರಷ್ಟಾಚಾರದ ವಿಕೇಂದ್ರಿಕರಣವಾಗಿ ಮಾರ್ಪಟ್ಟಿದೆ.ಪ್ರಜಾಪ್ರತಿನಿಧಿಗಳಾದವರು ಇದನ್ನು ಅರಿಯಬೇಕಿದೆ.ಜನರಿಗೆ ದೇಶದ ಬಗ್ಗೆ ಪುಂಕಾನುಪುಂಕವಾಗಿ ಮಾರ್ಗದರ್ಶನ ಮಾಡುವ ರಾಜಕಾರಣಿಗಳು ಆತ್ಮವಿಮರ್ಶೆ ಮಾಡಿಕೊಳ್ಲಬೇಕಿದೆ.ಮೊದಲು ತಾನು ಶುದ್ಧ ಹಸ್ತನಾಗಿ ಅನ್ಯರಿಗೆ ಮಾರ್ಗದರ್ಶನ ಮಾಡುವಂತಾಗಲಿ..
-- ಭೀಮಪ್ಪ ಕೆ.ನಾಯ್ಕರ್, ಡಾ,ಜಿ.ಎಸ್.ಎಮ್.ಆರ್ ಪಾಲಿಟೆಕ್ನಿಕ್,ಕುಕನೂರ
ಮೋಬೈಲ್:-೯೬೧೧೬೬೦೬೪೩

Advertisement

0 comments:

Post a Comment

 
Top