ಕೊಪ್ಪಳ ಆ. ೩ (ಕ.ವಾ): ಕೊಪ್ಪಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಮಾಲರಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಲ್ಲಿ ನಿವೇಶನಕ್ಕಾಗಿ ಹೂವಿನಾಳ ಗ್ರಾಮದಲ್ಲಿ ಒಟ್ಟು ೧೮ ಎಕರೆ ೧೦ ಗುಂಟೆ ಜಮೀನನ್ನು ಖರೀದಿಸಲು ೧. ೨೭ ಕೋಟಿ ರೂ.ಗಳನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕೊಪ್ಪಳ ತಹಸಿಲ್ದಾರರಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಹೂವಿನಾಳ ಗ್ರಾಮದಲ್ಲಿ ಲಭ್ಯವಿರುವ ಒಟ್ಟು ೧೮ ಎಕರೆ ೧೦ ಗುಂಟೆ ಜಮೀನನ್ನು ಪ್ರತಿ ಎಕರೆಗೆ ೭ ಲಕ್ಷ ರೂ.ಗಳಂತೆ ಖರೀದಿಸಲು ಒಟ್ಟು ೧,೨೭,೭೫,೦೦೦ ರೂ.ಗಳ ಅನುದಾನವನ್ನು ಕೊಪ್ಪಳ ತಹಸಿಲ್ದಾರರಿಗೆ ಬಿಡುಗಡೆ ಮಾಡಲಾಗಿದ್ದು, ಜಮೀನು ಮಾಲೀಕರುಗಳು ಕೊಪ್ಪಳ ತಹಸಿಲ್ದಾರರ ಕಚೇರಿಯ ಶಿರಸ್ತೆದಾರ ಎಂ.ಡಿ. ಹೂಲಗೇರಿ ಅವರಿಂದ ಚೆಕ್ ಅನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ, ಲಲಿತಮ್ಮ, ಮಂಜುನಾಥ, ಶಬ್ಬೀರಹುಸೇನ, ಆನಂದ ಆಡೂರ, ಹಮಾಲರ ಸಂಘದ ಅಧ್ಯಕ್ಷ ಖಾಜಸಾಬ, ಕಾರ್ಯದರ್ಶಿ ರಾಮಣ್ಣ ಕಲ್ಲನವರ ಉಪಸ್ಥಿತರಿದ್ದರು. ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಇತ್ತೀಚೆಗೆ ಹೂವಿನಾಳ ಗ್ರಾಮದಲ್ಲಿ ವಸತಿ ಸಚಿವರಿಂದ ನಿವೇಶನ ಹಂಚಿಕೆ ಕಾರ್ಯಕ್ಕೆ ಚಾಲನೆ ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

0 comments:
Post a Comment