PLEASE LOGIN TO KANNADANET.COM FOR REGULAR NEWS-UPDATES


ನವದೆಹಲಿ:ನೂತನ ಮುಖ್ಯಮಂತ್ರಿ ಸದಾನಂದ ಗೌಡರ ಸಂಪುಟ ಸಂಕಟ ದೆಹಲಿಯಲ್ಲೂ ನಿವಾರಣೆ ಆಗಿಲ್ಲ.ಸಂಕಟ ನಿವಾರಣೆ ಆಗಿ ಗುರುವಾರ ಸಂಪುಟ ವಿಸ್ತರಣೆ ಮಾಡುವ ಲೆಕ್ಕ ಹಾಕಿದ್ದ ಸದಾನಂದ ಗೌಡರಿಗೆ ಸದ್ಯಕ್ಕೆ ವರಿಷ್ಠರು ತಡೆ ಹಾಕಿದ್ದಾರೆ.

ಹೀಗಾಗಿ ಗುರುವಾರ ಉದ್ದೇಶಿತ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ.ಯಾವಾಗ ನಡೆಯಲಿದೆ ಅಂತ ಸದ್ಯಕ್ಕೆ ಸದಾನಂದಗೌಡರಿಗೂ ಗೊತ್ತಿಲ್ಲ.

ಸೋಮಣ್ಣರನ್ನು ಕೈಬಿಡಿ:ಸದಾನಂದ ಗೌಡರು ಅದನ್ನೇನೂ ನೇರವಾಗಿ ಹೇಳಿಲ್ಲ.ಎರಡನೇ ಹಂತದ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ್ದೇನೆ.ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದಷ್ಟೇ ಹೇಳಿದ್ದಾರೆ.

ಗುರುವಾರ ವಿಸ್ತರಣೆ ಆಗದೇ ಇರುವುದಕ್ಕೆ ಮುಖ್ಯ ಕಾರಣ-ಜನಾರ್ದನ ರೆಡ್ಡಿ ಪಕ್ಷದ ವರಿಷ್ಠರಿಗೆ ದೂರು ನೀಡಿರುವುದು.ಲೋಕಾಯುಕ್ತ ತನಿಖಾ ವರದಿಯಲ್ಲಿ ಹೆಸರಿಸಲ್ಪಟ್ಟಿರುವ ವಿ.ಸೋಮಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.ನಮ್ಮನ್ನು (ರೆಡ್ಡಿ ಸಹೋದರರನ್ನು) ಕೈಬಿಡಲಾಗಿದೆ.ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು.ಇಲ್ಲ,ವಿ.ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬುದು ಜನಾರ್ದನ ರೆಡ್ಡಿ ಅವರ ಬೇಡಿಕೆ.

ಸ್ಪಷ್ಟ ಸೂಚನೆ ನೀಡದ ವರಿಷ್ಠರು:ಗುರುವಾರ ಸಂಪುಟ ವಿಸ್ತರಣೆ ಬೇಡ ಎಂದು ಸೂಚಿಸಿ ರುವ ವರಿಷ್ಠರು ರೆಡ್ಡಿ ಸಹೋದರರನ್ನು ಸೇರ್ಪಡೆ ಮಾಡಬೇಕೋ ಅಥವಾ ಸೋಮಣ್ಣ ಅವರನ್ನು ಕೈಬಿಡಬೇಕೋ ಎಂಬುದನ್ನು ಇನ್ನೂ ಸೂಚಿಸಿಲ್ಲ.

ಆದರೆ,ಈ ಹಂತದಲ್ಲಿ ಒಂದು ರೆಡ್ಡಿ ಸಹೋದರರು ಅಥವಾ ಅವರಲ್ಲಿ ಯಾರಾದರೊಬ್ಬರು ಸಂಪುಟ ಸೇರಬೇಕು,ಇಲ್ಲವೇ ಸೋಮಣ್ಣ ಅವರನ್ನು ಸಂಪುಟದಿಂದ ಕೈಬಿಡಬೇಕು.ಈ ಎರಡರ ಲ್ಲೊಂದನ್ನು ಸದಾನಂದಗೌಡರು ಮಾಡುವುದು ಅನಿವಾರ್ಯ.

ಸೋಮಣ್ಣರನ್ನು ಸಮರ್ಥಿಸಿಕೊಂಡ ಡೀವಿ:ಆದರೆ ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಸದಾನಂದಗೌಡರು ಸಮರ್ಥಿಸಿಕೊಂಡರು. ಲೋಕಾಯುಕ್ತ ವರದಿಯಲ್ಲಿ ಸೋಮಣ್ಣ ವಿರುದ್ಧ ಯಾವುದೇ ದೋಷಾರೋಪ ಇಲ್ಲ.ಅವರ ಮಕ್ಕಳನ್ನು ಹೆಸರಿಸಲಾಗಿದೆ.ಅವರನ್ನು ಸೇರ್ಪಡೆ ಮಾಡುವ ಮುಂಚೆ ವರಿಷ್ಠರೊಂದಿಗೆ ಸಮಾ ಲೋಚಿಸಲಾಗಿದೆ ಎಂದು ಹೇಳಿದ್ದಾರೆ.

ಗುರುವಾರ ಸಂಪುಟ ವಿಸ್ತರಣೆ ಮಾಡಲು ಯೋಜಿಸಿದ್ದ ಸದಾನಂದ ಗೌಡರು ಲೋಕಾಯುಕ್ತರ ತನಿಖಾ ವರದಿಯಲ್ಲಿ ಹೆಸರಿಸಲ್ಪಟ್ಟಿದ್ದರಿಂದ ರೆಡ್ಡಿ ಸಹೋದರರನ್ನು ಕೈ ಬಿಡಲು ಮುಂದಾಗಿದ್ದರು. ಆದರೆ,ಜನಾರ್ದನ ರೆಡ್ಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದೂಡುವಂತೆ ಸೂಚಿಸಿದ್ದಾರೆ.

ಮಂಗಳವಾರ ರಾತ್ರಿ ಸದಾನಂದಗೌಡರ ಸಮ್ಮುಖದಲ್ಲೇ ಜನಾರ್ದನ ರೆಡ್ಡಿ ಅವರು ಗಡ್ಕರಿ ಅವರಿಗೆ ದೂರು ನೀಡಿದ್ದರು.ಅಲ್ಲದೇ ಬುಧವಾರ ಸಂಘಪರಿವಾರದ ನಾಯಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೂ ತಕ್ಷಣಕ್ಕೆ ಸಂಪುಟ ವಿಸ್ತರಣೆ ವಿವಾದಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಬೇಡವೆಂಬ ಸೂಚನೆ ಸದಾನಂದಗೌಡರಿಗೆ ಸಿಕ್ಕಿದೆ ಎನ್ನಲಾಗಿದೆ.

ಎಲ್ಲರೂ ನಂಬರ್ ಟೂ...:ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದಿಲ್ಲ.ಆ ಸಂಪ್ರದಾಯ ಬಿಜೆಪಿಯಲ್ಲಿ ಇಲ್ಲ.ಅದನ್ನು ಈಗಾಗಲೇ ವರಿಷ್ಠರು ಸ್ಪಷ್ಟ ಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸದಾನಂದಗೌಡರು,ಅಷ್ಟರ ಮಟ್ಟಿಗೆ ನೆಮ್ಮದಿಯ ನಗೆ ಚೆಲ್ಲಿದ್ದಾರೆ.

ನಿಮ್ಮ ನಂತರ ಯಾರು ಸಂಪುಟದಲ್ಲಿ ನಂಬರ್ ಟೂ ಎಂದು ಎಲ್ಲರೂ ಪ್ರಶ್ನಿಸುತ್ತಾರೆ.ನಾನು ಅದಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ,ಹೇಳುತ್ತೇನೆ,ನನ್ನ ಸಂಪುಟದಲ್ಲಿ ಯಾರೂ ನಂಬರ್ ಟೂ ಇಲ್ಲ. ಆದರೆ,ಎಲ್ಲಾ ಸಚಿವರೂ ನಂಬರ್ ಟೂ ಸ್ಥಾನದಲ್ಲೇ ಇರುತ್ತಾರೆ ಎಂದರು.ಆಗ ಯಡಿಯೂರಪ್ಪ ಸಂಪುಟದಲ್ಲಿ ನಂಬರ್ ಟೂ ಆಗಿದ್ದ ಡಾ.ವಿ.ಎಸ್.ಆಚಾರ್ಯ ಅವರು ನಿರ್ಭಾವುಕರಾಗಿ ಪಕ್ಕದಲ್ಲೇ ಕುಳಿತಿದ್ದರು.

ಕಾನೂನಿಗೆ ತಲೆಬಾಗುತ್ತೇನೆ:ಎರಡು ನಿವೇಶನಗಳನ್ನು ಒಗ್ಗೂಡಿಸಿ ಬಿಡಿ‌ಎ ನಿಯಮ ಉಲ್ಲಂಘಿಸಿ ಬಹುಮಹಡಿ ಕಟ್ಟಡ ಕಟ್ಟುತ್ತಿರುವ ಬಗ್ಗೆ ಪ್ರಶ್ನಿಸಿದಾಗ ನೂತನ ಮುಖ್ಯಮಂತ್ರಿಗಳು ಹೇಳಿದ್ದು,‘ಈ ಸದಾನಂದಗೌಡ ಕಾನೂನಿಗಿಂತ ದೊಡ್ಡವನಲ್ಲ,ಕಾನೂನು ತನ್ನ ಕ್ರಮ ಕೈಗೊಳ್ಳು ತ್ತದೆ. ನಾನು ಕಾನೂನಿಗೆ ತಲೆ ಬಾಗುತ್ತೇನೆ’.

ಭ್ರಷ್ಚಾಚಾರ ತಡೆಗೆ ಫರ್ಮಾನು:ಭ್ರಷ್ಟಾಚಾರ ರಹಿತ ಆಡಳಿತ ನಡೆಸುವಂತೆ ವರಿಷ್ಠರು ಸೂಚಿಸಿದ್ದಾರೆ.ಭ್ರಷ್ಚಾಚಾರದ ಕಳಂಕ ನಿವಾರಿಸಿಕೊಂಡು ಆಡಳಿತ ನಡೆಸುವುದು ನನ್ನ ಆದ್ಯತೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂಬ ಹುಚ್ಚುತನ ನನಗೆ ಇಲ್ಲ.ಆದರೆ,ನನ್ನ ಅವಧಿ ಯಲ್ಲಿ ಭ್ರಷ್ಚಚಾರ ಕಳಂಕ ಇಲ್ಲದೆ ಆಡಳಿತ ನಡೆಸುವ ಸಂಕಲ್ಪ ಮಾಡಿದ್ದೇನೆ.ಭ್ರಷ್ಟಾಚಾರ ಆರೋಪ ಹೊತ್ತವರ್ಯಾರನ್ನೂ ನನ್ನ ಸರ್ಕಾರ ರಕ್ಷಿಸುವುದಿಲ್ಲ ಎಂದು ಹೇಳಿದರು.

ಭರತನೂ ಅಲ್ಲ...:ನಾನು ಭರತನೂ ಅಲ್ಲ,ಔರಂಗಜೇಬನೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಭರತ ಪಾದುಕೆಗಳನ್ನಿಟ್ಟು ಅಧಿಕಾರ ನಡೆಸಿದ,ಔರಂಗಜೇಬ ತಂದೆಯನ್ನೇ ಅಧಿಕಾರದಿಂದ ಇಳಿಸಿ ಅಧಿಕಾರ ನಡೆಸಿದ ಮಾದರಿ ನಿಮ್ಮ ಮುಂದಿವೆ.ನೀವು ಹೇಗೆ ನಡೆಸು ತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡರು,ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಅಧಿಕಾರ ನಡೆಸುತ್ತೇನೆ ಎಂದರು

Advertisement

0 comments:

Post a Comment

 
Top