PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಅ-೧೪: ಯವಜನ ಸೇವಾ ಹಾಗೂ ಕ್ರಿಡಾ ಇಲಾಖೆ ಮತ್ತು ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಹಾಗೂ ಕಲ್ಯಾಣ ಸಂಸ್ಥೆ ಚಿಕ್ಕಮ್ಯಾಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಯಲಬುರ್ಗಾ ತಾಲೂಕ ಮಟ್ಟದ ಪೈಕಾ/ದಸರಾ/ಮಹಿಳಾ ಪೈಕಾ ಕ್ರಿಡಾಕೂಟವನ್ನು ದಿನಾಂಕ ೧೯/೦೮/೨೦೧೧ ರಂದು ಚಿಕ್ಕಮ್ಯಾಗೇರಿಯ ಶ್ರೀಮತಿ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ಜರುಗಿಸಲಾಗುವದು.
ಪೈಕಾ ಹಾಗೂ ಮಹಿಳಾ ಪೈಕಾ ಕ್ರಿಡಾಕೂಟವನ್ನು ೧೯/೦೮/೨೦೧೧ ರಿಂದ ೨೦/೦೮/೨೦೧೧ ರ ವರೆಗೆ ಹಾಗೂ ದಸರಾ ಕ್ರಿಡಾಕೂಟವನ್ನು ೨೧/೦೮/೨೦೧೧ ರಂದು ನಡೆಸಲಾಗುವದು.
ಪೈಕಾ ಹಾಗೂ ಮಹಿಳಾ ಪೈಕಾ ಕ್ರಿಡಾಕೂಟದಲ್ಲಿ ಭಾಗವಹಿಸುವವರು ತಮ್ಮ ಶಾಲೆಯ ಮುಖ್ಯೋಪಾದ್ಯಾಯರಿಂದ ಜನ್ಮದಿನಾಂಕದ ದೃಢಿಕರಣ ಪ್ರಮಾಣ ಪತ್ರವನ್ನು ಹಾಗೂ ಗ್ರಾಮೀಣ ಪ್ರದೇಶದ ವಾಸಸ್ಥಳ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.ದಿನಾಂಕ ೩೧-೧೨-೨೦೧೧ ಕ್ಕೆ ೧೭ ವರ್ಷ ಮೀರಿರ ಬಾರದು. ೧೭ ವರ್ಷ ಮೆಲ್ಪಟ್ಟ ಕ್ರಿಡಾಪಟುಗಳಿಗೆ ಕ್ರಿಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ.ದಸರಾ ಕ್ರಿಡಾಕೂಟದಲ್ಲಿ ಭಾಗವಹಿಸುವ ಕ್ರಿಡಾಪಟುಗಳಿಗೆ ೧೮ ರಿಂದ ೩೫ ವಯಸ್ಸಿನಮಿತಿ ಇರುತ್ತದೆ. ಹಾಗೂ ಯುವಜನ ಸೇವಾ ಹಾಗೂ ಕ್ರಿಡಾ ಇಲಾಖೆಯ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ.
ಹೆಚ್ಚು ಅಂಕ ಪಡೆದ ಶಾಲೆಗಳಿಗೆ ಸಮಗ್ರ ವೀರಾಗ್ರಾಣಿ ಪ್ರಶಸ್ತಿ ನೀಡಿ ಆಯಾ ಗ್ರಾಮ ಪಂಚಾಯ್ತಿಗೆ ಪ್ರಥಮ ಸ್ಥಾನ ೨೦.೦೦೦, ದ್ವೀತಿಯ ಸ್ಥಾನ ೧೨.೦೦೦ ಹಾಗೂ ತೃತೀಯ ಸ್ಥಾನ ೪೦೦೦/- ರೂ ಗಳನ್ನು ಸಂದಾಯ ಮಾಡಲಾಗುವದು ಹಾಗೂ ಕ್ರಡಾ ಕೂಟದಲ್ಲಿ ಭಾಗವಹಿಸುವ ಕ್ರಿಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುವದು.
ಕ್ರಿಡಾಕೂಟಗಳವಿವರ:
ಬಾಲಕರ ವಿಭಾಗ: ಅಥ್ಲೆಟಿಕ್ಸ್ ೧೦೦ , ೪೦೦, ೮೦೦ ,೧೫೦೦, ೩೦೦೦ ಮೀ ಓಟಗಳು, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (೫ ಕೆಜಿ), ಚಕ್ರ ಎಸೆತ ( ೧.೫ ಕೆಜಿ), ರಿಲೆ ೪ ೧೦೦, ಇಲೆ ೪ ೪೦೦, ವ್ಹಾಲಿಬಾಲ್, ಕಬಡ್ಡಿ, ಖೋ. . . ಖೋ,
ಬಾಲಕಿಯರ ವಿಭಾಗ: ಅಥ್ಲೆಟಿಕ್ಸ್ ೧೦೦ , ೪೦೦, ೮೦೦ ,೧೫೦೦, ೩೦೦೦ ಮೀ ಓಟಗಳು, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ (೪ ಕೆಜಿ), ಚಕ್ರ ಎಸೆತ ( ೧ ಕೆಜಿ), ರಿಲೆ ೪ ೧೦೦, ಇಲೆ ೪ ೪೦೦, ವ್ಹಾಲಿಬಾಲ್, ಕಬಡ್ಡಿ, ಖೋ. . . ಖೋ,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಬಸವರಾಜ ಅಡಿವೆಪ್ಪನವರ ಸಹಾಯಕ ಯುವಜನಾ ಸೇವಾ ಹಾಗೂ ಕ್ರಿಡಾಧಿಕಾರಿಗಳು ಯಲಬುರ್ಗಾ,ಮತ್ತು ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಹಾಗೂ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ.ವೈ.ಸಿಂದೋಗಿ (ದೂರವಾಣಿ:೯೦೦೮೮೩೬೭೫೪/೮೯೭೧೮೫೧೩೧೪/೯೭೪೦೪೧೩೮೭೯) ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

0 comments:

Post a Comment

 
Top