PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಆ. ೧೬ (ಕ.ವಾ): ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕೊಪ್ಪಳ ಭಾಗದ ರೈತರಿಗೆ ಕೃಷಿಗೆ ಸಂಬಂಧಪಟ್ಟ ಸಲಹೆ ಹಾಗೂ ಸಮಸ್ಯೆ ಪರಿಹಾರ ಒದಗಿಸುವ ಉದ್ದೇಶದಿಂದ ಕೃಷಿ ವಿಸ್ತರಣಾ ಶಿಕ್ಷಣ ಘಟಕವನ್ನು ಕೊಪ್ಪಳದಲ್ಲಿ ಆಗಸ್ಟ್ ೧೧ ರಿಂದ ಪ್ರಾರಂಭಿಸಲಾಗಿದೆ.
ರಾಯಚೂರಿನ ಕೃಷಿ ವಿಶ್ವವಿದ್ಯಾಲಯವು ರೈತರ ಏಳಿಗೆಗಾಗಿ ಮತ್ತು ಕೃಷಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇದುವರೆಗೂ ಕೊಪ್ಪಳ ಭಾಗದ ರೈತರು ತಮ್ಮ ಕೃಷಿಗೆ ಸಂಬಂಧಪಟ್ಟ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ದೂರದ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಬೇಕಾದ ಪರಿಸ್ಥಿತಿ ಇತ್ತು. ಈ ದಿಸೆಯಲ್ಲಿ ವಿಶೇಷವಾಗಿ ಕೊಪ್ಪಳ ಭಾಗದ ರೈತರನ್ನು ಗಮನದಲ್ಲಿಟ್ಟುಕೊಂಡು, ಕೃಷಿ ವಿಶ್ವವಿದ್ಯಾಲಯವು ಕೊಪ್ಪಳದಲ್ಲಿ ವಿಸ್ತರಣಾ ಶಿಕ್ಷಣ ಘಟಕವನ್ನು ಸ್ಥಾಪಿಸಿದ್ದು, ಈ ಘಟಕವು ಕೊಪ್ಪಳದ ಪ್ರವಾಸಿ ಮಂದಿರದ ಎದುರು ಇರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆ. ೧೧ ರಿಂದ ಕಾರ್ಯಾರಂಭ ಮಾಡಿದೆ. ಘಟಕದಲ್ಲಿ ಒಬ್ಬರು ವಿಸ್ತರಣಾ ಮುಂದಾಳು ಮತ್ತು ಮೂವರು ವಿಷಯ ತಜ್ಞರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಕೃಷಿ ತಾಂತ್ರಿಕತೆಗಳನ್ನು ಮತ್ತು ಹೊಸ ಆವಿಷ್ಕಾರಗಳನ್ನು ರೈತರ ಹೊಲಗಳಲ್ಲಿ ಪ್ರಾತ್ಯಕ್ಷಿಕೆಗಳ ರೂಪದಲ್ಲಿ ಹಮ್ಮಿಕೊಂಡು, ನಂತರ ಬಂದ ಫಲಿತಾಂಶಗಳ ಮೂಲಕ ತಾಂತ್ರಿಕತೆಗಳ ಪ್ರಯೋಜನವನ್ನು ರೈತರಿಗೆ ಮನದಟ್ಟು ಮಾಡಿಕೊಡುವುದು, ಕೃಷಿ ಸಾಗುವಳಿ ಸಮಸ್ಯೆಗಳಿಗಾಗಿ ರೈತರ ಹೊಲಗಳಿಗೆ ಭೇಟಿ ಕೊಡುವುದು, ಹಾಗೂ ಸೂಕ್ತ ಸಲಹೆ ಸೂಚನೆಗಳನ್ನು ನೀಡುವುದು, ಇದಲ್ಲದೆ ರೈತರು ಘಟಕಕ್ಕೆ ಭೇಟಿ ಕೊಟ್ಟು ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಕೃಷಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿ.ಆರ್. ಜೋಶಿ, ವಿಸ್ತರಣಾ ಮುಂದಾಳು, ಮೊಬೈಲ್-೯೪೮೦೬೯೬೧೯ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top