ಹೊಸದಿಲ್ಲಿ, ಆ.28: ಜನಲೋಕಪಾಲ ಮಸೂದೆಯ ಪ್ರಮುಖ ಅಂಶಗಳಿಗೆ ಸಂಸತ್ತಿನ ಅಂಗೀಕಾರವನ್ನು ‘ಜನತೆಯ ವಿಜಯ’ ಎಂದು ಬಣ್ಣಿಸಿರುವ ಗಾಂಧಿವಾದಿ ಅಣ್ಣಾ ಹಝಾರೆ ಇಂದು ತನ್ನ 12 ದಿನಗಳ ನಿರಶನವನ್ನು ಕೊನೆಗೊಳಿಸಿದ್ದಾರೆ. ಭ್ರಷ್ಟಾಚಾರ ಕಡಿಮೆಯಾಗುವಂತೆ ಚುನಾ ವಣಾ ಸುಧಾರಣೆ ತನ್ನ ಮುಂದಿನ ಹೋರಾ ಟದ ಕಾರ್ಯಸೂಚಿಯ ಅಗ್ರ ವಿಷಯ
ನಾನು ಉಪವಾಸವನ್ನು ಕೇವಲ ಮುಂದೂಡಿದ್ದೇನೆಯೇ ಹೊರತು ತ್ಯಜಿಸಿಲ್ಲ. ಈ ಸುಧಾರಣೆಗಳು ಕೊನೆಗೊಂಡ ಬಳಿಕವೇ ನಾನು ನಿರಶನ ಅಂತ್ಯಗೊಳಿಸಲಿದ್ದೇನೆ. ನಾನು ಎದುರು ನೋಡುತ್ತಿರುವ ಬದಲಾವಣೆಗಳಾಗದೆ ವಿರಮಿಸುವುದಿಲ್ಲ.
ವಾಗಲಿದೆಯೆಂದು ಅವರು ಘೋಷಿಸಿದ್ದಾರೆ. ರಾಮ್‌ಲೀಲಾ ಮೈದಾನದ ವೇದಿಕೆಯಲ್ಲಿ ಪೂರ್ವಾಹ್ಣ ಸಿಮ್ರಾನ್ ಹಾಗೂ ಇಕ್ರಾಹ್ ಎಂಬ ದಲಿತ ಹಾಗೂ ಮುಸ್ಲಿಂ ಬಾಲಕಿಯರು ನೀಡಿದ ಜೇನು ಮಿಶ್ರಿತ ಎಳನೀರನ್ನು ಸ್ವೀಕರಿಸುವ ಮೂಲಕ ಅಣ್ಣಾ ಆ. 16ರಂದು ಆರಂಭಿಸಿದ್ದ ತನ್ನ 288 ತಾಸುಗಳ ಉಪವಾಸಕ್ಕೆ ಮುಕ್ತಾಯ ಹಾಡಿದರು. ಕಿರು ಭಾಷಣವೊಂದರ ಬಳಿಕ ಹಝಾರೆಯವರನ್ನು ನೆರೆಯ ಗುರ್ಗಾಂವ್‌ನ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಝಾರೆಯವರ ವೈದ್ಯಕೀಯ ತಂಡದ ಮುಖ್ಯಸ್ಥರಾಗಿದ್ದ ಖ್ಯಾತ ಹೃದ್ರೋಗ ತಜ್ಞ ಡಾ.ನರೇಶ್ ಟ್ರೆಹಾನ್ ಈ ಆಸ್ಪತ್ರೆಯ ಸಂಚಾಲಕರಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಅಣ್ಣಾಗೆ ವೈದ್ಯರ ತಂಡದ ನಿಕಟ ಪರಿವೀಕ್ಷಣೆಯಲ್ಲಿ ದ್ರವ ಪಥ್ಯಾಹಾರ ನೀಡಲು ಆರಂಭಿಸಲಾಗಿದೆ. ಅವರಲ್ಲಿ ಒಂದೆರಡು ದಿನ ಇರಲಿದ್ದಾರೆ. ‘‘ನಾನು ಉಪವಾಸವನ್ನು ಕೇವಲ ಮುಂದೂಡಿದ್ದೇನೆಯೇ ಹೊರತು ತ್ಯಜಿಸಿಲ್ಲ. ಈ ಸುಧಾರಣೆಗಳು ಕೊನೆಗೊಂಡ ಬಳಿಕವೇ ನಾನು ನಿರಶನ ಅಂತ್ಯಗೊಳಿಸಲಿದ್ದೇನೆ. ನಾನು ಎದುರು ನೋಡುತ್ತಿರುವ ಬದಲಾವಣೆ ಗಳಾಗದೆ ವಿರಮಿಸುವುದಿಲ್ಲ’’ ಎಂದು ಅಣ್ಣಾ, ತ್ರಿವರ್ಣ ಧ್ವಜವನ್ನು ಬೀಸುತ್ತ, ‘ಅಣ್ಣಾ ಹಝಾರೆ ಜಿಂದಾಬಾದ್’ ಎಂಬ ಘೋಷಣೆ ಕೂಗುತ್ತಿದ್ದ ಸಾವಿರಾರು ಬೆಂಬಲಿಗರ ಹರ್ಷೋದ್ಗಾರದ ಮಧ್ಯೆ ಘೋಷಿಸಿದರು. ತನ್ನ ಹೋರಾಟವು ಸಂಸತ್ತಿನ ಹಾಗೂ ಸಂವಿಧಾನದ ವಿರುದ್ಧವೆಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಬದಲಾವಣೆಯು ಸಾಂವಿ ಧಾನಿಕ ಮಾರ್ಗದಲ್ಲಿ ನಡೆಯಬೇಕು ಎಂದರು. ನಿನ್ನೆ ಸಂಸತ್ತಿನಲ್ಲಿ ಏನು ಸಾಧಿಸಲಾಯಿತೋ ಅದು ಈ ದೇಶದ ಜನತೆಯ, ಪ್ರಜಾಸತ್ತೆಯ ಹಾಗೂ ರಾಮ್‌ಲೀಲಾ ಮೈದಾನದಲ್ಲಿ ಸೇರಿರುವ ಜನರ ವಿಜಯವಾಗಿದೆ ಎಂದು ತನ್ನ ತಂಡದ ಸದಸ್ಯರಾದ ಶಾಂತಿಭೂಷಣ್, ಪ್ರಶಾಂತ ಭೂಷನ್, ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ಮನೀಶ್ ಸಿಸೋಡಿಯಾ ಮುಂತಾದವರೊಡನಿದ್ದ ಹಝಾರೆ ಹೇಳಿದರು.
ಲೋಕಪಾಲ ಮಸೂದೆಯ ಮಂಜೂರಾತಿಗಾಗಿ ಸರಕಾರವು ಒಂದು ತಿಂಗಳೊಳಗಾಗಿ ವಿಶೇಷ ಸಂಸದಧಿವೇಶನ ನಡೆಸುವುದೆಂಬ ವಿಶ್ವಾಸವನ್ನು ಅಣ್ಣಾ ಬಳಗ ವ್ಯಕ್ತಪಡಿಸಿದೆ. ಭ್ರಷ್ಟಚಾರ ನಿರ್ಮೂಲನೆಯ ಅಂಗವಾಗಿ ಚುನಾವಣಾ ಸುಧಾರಣೆಯ ಭಾಗವಾಗಿ ‘ಮರಳಿ ಕರೆಸುವ ಹಕ್ಕು ಹಾಗೂ ನಿರಾಕರಿಸುವ ಹಕ್ಕು’ಗಳಿಗಾಗಿ ಮುಂದಿನ ಹೋರಾಟ ನಡೆಸಲು ಹಝಾರೆ ನಿರ್ಧರಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳನ್ನು ಹಿಂದೆ ಕರೆಸುವುದು ‘ಹಿಂದೆ ಕರೆಸುವ’ ಹಕ್ಕಾಗಿದ್ದರೆ, ಮತ ಪತ್ರದಲ್ಲಿರುವ ಯಾವನೇ ಅಭ್ಯರ್ಥಿ ತನಗೆ ಸಮ್ಮತವಲ್ಲ ಎನ್ನುವ ಹಕ್ಕನ್ನು ಮತದಾರನಿಗೆ ಖಚಿತಪಡಿಸಲು ಮತ ಪತ್ರದಲ್ಲೇ ಅಂಕಣವೊಂದನ್ನು ಕಲ್ಪಿಸುವುದು ‘ನಿರಾಕರಿಸುವ’ ಹಕ್ಕಾಗಿದೆ. ‘‘ನಾವು ಚುನಾವಣಾ ಪದ್ಧತಿಯನ್ನು ಸುಧಾರಿಸ ಬೇಕಾಗಿದೆ. ಮತ ಪತ್ರದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಮತದಾರರಿಗಿರಬೇಕು. ನಾವದನ್ನು ಮಾಡಬೇಕು’
0 comments:
Post a Comment