PLEASE LOGIN TO KANNADANET.COM FOR REGULAR NEWS-UPDATES

ಹೊಸದಿಲ್ಲಿ, ಆ.24: ಅಣ್ಣಾ ಹಝಾರೆ ನಡೆಸುತ್ತಿರುವ ನಿರಶನ ಮುಷ್ಕರದ ವಿರುದ್ಧ ದಲಿತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಸರಕಾರವು ಸಂಸದೀಯ ಪ್ರಕ್ರಿಯೆಗೆ ವಿರುದ್ಧವಾದ ಅಣ್ಣಾರ ಬೇಡಿಕೆಯನ್ನು ಅಂಗೀಕರಿಸಬಾರದು. ಅದರಿಂದ ಅಪಾಯಕಾರಿ ಪ್ರವೃತ್ತಿಯೊಂದಕ್ಕೆ ದಾರಿ ಯಾಗಲಿದ್ದು, ಹಿಂದುಳಿದ ವರ್ಗಗಳನ್ನು ದುರ್ಬಲ ಗೊಳಿಸಲಿದೆಯೆಂದು ಅವರು ಆರೋಪಿಸಿದ್ದಾರೆ. ಹಝಾರೆ ಬಳಗ ಹಾಗೂ ಸರಕಾರದ ನಡುವಣ ಹಗ್ಗ ಜಗ್ಗಾಟ ನಿರ್ಣಾಯಕ ಹಂತ ತಲುಪಿರುವಂತೆಯೇ, ಹಝಾರೆ ಉಪವಾಸ ಕೂತಾಗಿನಿಂದ ದಲಿತ ಗುಂಪುಗಳಲ್ಲಿದ್ದ ಕಳವಳ ಇಂದು ಬಹಿರಂಗಕ್ಕೆ ಬಂದಿದೆ.
ಸಾಂವಿಧಾನಿಕ ಪ್ರಕ್ರಿಯೆಯನ್ನು ‘ಬದಿಗಿಡ ಬೇಕೆಂಬ’ ಪ್ರತಿಭಟನಕಾರರ ಬೇಡಿಕೆ ಪ್ರಜಾಸತ್ತೆಗೆ ವಿರುದ್ಧವಾದುದು. ತಾವು ಹೆಚ್ಚು ಜಾತಿವಾರು ಪ್ರಾತಿ ನಿಧ್ಯವಿರುವ ‘ಬಹುಜನ ಲೋಕಪಾಲ ಮಸೂದೆ’ ಯೊಂದನ್ನು ರಚಿಸಿ, ಅದನ್ನು ಸಂಸತ್ತಿನ ಪರಿ ಶೀಲನೆ ಗಾಗಿ ಕಳುಹಿಸುತ್ತೇವೆಂದು ಹಝಾರೆಯವರ ವಿರುದ್ಧ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಲ್ಪಟ್ಟಿರುವ ದಲಿತ ಕಾರ್ಯಕರ್ತ ಉದಿತ್ ರಾಜ್ ತಿಳಿಸಿದರು. ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಸಾಮಾಜಿಕ ವಿಭಜನೆಯ ಹೊರತಾಗಿಯೂ ಹಿಂದುಳಿದ ವರ್ಗ ಗಳ ಸಾಮಾನ್ಯ ಕಳವಳವು ಅವರ ಮಾತುಗಳಲ್ಲಿ ಪ್ರತಿ ಫಲಿತವಾಗಿದೆ. ಸಂವಿಧಾನ ಪ್ರಕ್ರಿಯೆಗೆ ವಿರುದ್ಧವಾಗಿ ಸಾಮೂಹಿಕ ಸಂಚಲನದಿಂದ ಸರಕಾರದ ಮೇಲೆ ‘ಪರಿಹಾರ ಮಾರ್ಗ’ ಹೇರಿಕೆಯ ಸಾಧ್ಯತೆಯು, ಖಚಿತ ಕ್ರಮವು ಇಂತಹ ತಂತ್ರಗಳಿಗೆ ಬಲಿಯಾಗ ಬಹುದೆಂಬ ಭೀತಿ ಉತ್ಪನ್ನವಾಗಿದೆಯೆಂದು ದಲಿತ ಚಿಂತಕರು ಹೇಳುತ್ತಾರೆ.
ಪ್ರಬಲ ಸಾಮಾಜಿಕ ವರ್ಗವು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸುತ್ತಿದೆ. ಆದುದರಿಂದ ಭ್ರಷ್ಟಾಚಾರದ ವಿಷಯದಲ್ಲಿ ಸರಕಾರವು ಬೀದಿಯ ಬಲಕ್ಕೆ ತಲೆ ವಾಗುವುದರಿಂದ ಅವರ ಪರಿಸ್ಥಿತಿ ಅಪಾಯಕಾರಿಯಾಗಬಹುದು. 1990ರಲ್ಲಿ ಮಂಡಲ ಆಯೋಗದಿಂದ ತೊಡಗಿ ಒಬಿಸಿ ಮೀಸಲಾತಿಯ ವಿರುದ್ಧದ ಚಳವಳಿಯಿಂದ ಯುಪಿಎ-ಐ ಸರಕಾರದ ಶಿಕ್ಷಣ ಮೀಸಲಾತಿಯವರೆಗಿನ ನೆನಪುಗಳು ಇನ್ನೂ ಅವರಲ್ಲಿ ಹಸಿಯಾಗಿವೆಯೆಂದು ಕಾರ್ಯಕರ್ತರು ಅಭಿಪ್ರಾಯಿಸುತ್ತಾರೆ. ಗುಂಪುಗಳು ಯಾವುದೇ ಉದ್ದೇಶಕ್ಕೆ ನ್ಯಾಯ ನೀಡಲಾರವು, ಅದೊಂದು ಅಪಾಯಕಾರಿ ವಾದವಾಗಿದೆಯೆಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಮಾಜ ಶಾಸ್ತ್ರಜ್ಞ ವಿವೇಕ ಕುಮಾರ್ ಹೇಳುತ್ತಾರೆ.
ಹಝಾರೆಯವರಿಗೆ ಗಾಂಧಿ ವರ್ಚಸ್ಸಿದೆ. ಆದರೆ, ತಮ್ಮ ಆದರ್ಶವಾಗಿರುವ ಬಿ.ಆರ್. ಅಂಬೇಡ್ಕರ್‌ರಿಂದ ರಚಿತವಾದ ಸಂವಿಧಾನದೊಂದಿಗೆ ದಲಿತರಿಗೆ ನಿಕಟ ಬಾಂಧವ್ಯ ಇರುವುದರಿಂದ ಅವರು ಹಝಾರೆಯವರನ್ನು ವಿರೋಧಿಸಲು ಹಿಂಜರಿಯಲಿಲ್ಲ. ಸಾಂವಿಧಾನಿಕ ರಕ್ಷಣೆಯ ಕಾರಣದಿಂದಾಗಿ ಅದಶಕ ಅಖಿಲ ಭಾರತ -ಸವರ್ಣ- ಆಕ್ರೋಶದ ಹೊರತಾಗಿಯೂ ಖಾಚಿತ್ಯ ಪ್ರಕ್ರಿಯೆಗಳು ಬದುಕುಳಿದಿವೆಯೆಂದು ದಲಿತರು ವಾದಿಸುತ್ತಿದ್ದಾರೆ. ಕಾನೂನಿನ ಮೂಲ ಪ್ರಸ್ತಾಪಗಳನ್ನು ತಿದ್ದ್ದ ಬಹುದೆಂಬ ಯಾವುದೇ ಸೂಚನೆಯು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿಯ ಮರಣ ಗಂಟೆಯಾಗಬಹುದೆಂದು ಅವರು ಪ್ರತಿಪಾದಿಸುತ್ತಿದ್ದಾರೆ. ದಲಿತರು ಏನಾದರೂ ಸಾಧಿಸಿದ್ದರೆ ಹಾಗೂ ಇಂದು ಯಾವುದೇ ವೈವಿಧ್ಯವನ್ನು ಕಾಣಲು ಸಾಧ್ಯವಾಗಿದ್ದರೆ ಅದು ಸಂವಿಧಾನ, ಸಂಪತ್ತು ಹಾಗೂ ಆಡಳಿತ ಶಾಹಿಯ ಕಾರಣದಿಂದಾಗಿದೆ. ಸಂವಿಧಾನವನ್ನು ಉಪೇಕ್ಷಿಸಲಾಗದು ಎಂದು ಕುಮಾರ್ ಸ್ಪಷ್ಟಪಡಿಸುತ್ತಾರೆ.
ಸಾಂವಿಧಾನಿಕ ಪ್ರಕ್ರಿಯೆಯನ್ನು ಪ್ರಶ್ನಿಸುವ ಪ್ರತಿಯೊಬ್ಬನನ್ನು ಎಸ್ಸಿಗಳು ಖಳನಾಯಕನಂತೆ ಕಾಣುತ್ತಾರೆ. ಚುನಾವಣಾ ರಾಜಕೀಯವನ್ನು ಅವರು ಪ್ರಶ್ನಿಸ ತೊಡಗಿದಂದಿನಿಂದ ಈ ಅನುಮಾನ ಆರಂಭವಾಗಿದೆಯೆಂದು ದಲಿತ ಬರಹಗಾರ ಚಂದ್ರಭಾಸ್ ಪ್ರಸಾದ್ ವಿವರಿಸುತ್ತಾರೆ. ಸಮಾನ ಮನಸ್ಕ ದಲಿತ ಚಿಂತಕರ ಗುಂಪೊಂದು ಮಂಗಳವಾರ ಸಭೆ ನಡೆಸಿ, ಭ್ರಷ್ಟಾಚಾರಕ್ಕೆ ಸಾಮಾಜಿಕ ಸ್ತರದಲ್ಲಿ ವಿರೋಧ ಸೂಚಿಸಿದ್ದಾರೆ. ದಲಿತರು ಆಡಳಿತ ಶಾಹಿಯಿಂದ ಭ್ರಷ್ಟಾಚಾರ ಎದುರಿಸುತ್ತಿಲ್ಲ, ಆದರೆ, ಜಾತಿ ವ್ಯವಸ್ಥೆ ಅತಿ ದೊಡ್ಡ ದಮನಕವಾಗಿರುವ ನಾಗರಿಕ ಸಮಾಜದಿಂದ ಎದುರಿಸುತ್ತಿದೆ. ಆದರೆ, ತಮಗೆ ಜಾತಿ ವ್ಯವಸ್ಥೆಯಿಂದ ಬಿಡುಗಡೆ ನೀಡಿರುವ ಸಂವಿಧಾನವನ್ನೇ ಬುಡಮೇಲು ಮಾಡಲು ಈ ನಾಗರಿಕ ಸಮಾಜ ಬಯಸಿದೆ ಎಂದವರು ದೂರಿದ್ದಾರೆ.

Advertisement

0 comments:

Post a Comment

 
Top