PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಜು. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಪುಸ್ತಕ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತ ಪುಸ್ತಕ ಪ್ರಕಾಶಕರು ಭಾಗವಹಿಸಬಹುದಾಗಿದೆ.
ಈ ಪುಸ್ತಕ ಮೇಳದಲ್ಲಿ ರಾಜ್ಯದ ಯಾವುದೇ ಪ್ರಕಾಶಕರು ಪುಸ್ತಕ ಮಳಿಗೆ ತೆರೆದು ಪಾಲ್ಗೊಳ್ಳಬಹುದಾಗಿದೆ. ಈಲ್ಲೆಯ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರು ಮೇಳದಲ್ಲಿ ಭಾಗವಹಿಸಲಿದ್ದು, ಪುಸ್ತಕ ಖರೀದಿಗಾಗಿ ಸರ್ವ ಶಿಕ್ಷಣ ಅಭಿಯಾನದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. ೧೦೦೦೦ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರೂ. ೩೦೦೦ ಗಳನ್ನು ಗ್ರಂಥಾಲಯ ಅನುದಾನವಾಗಿ ನೀಡಲಾಗಿದೆ. ಈ ಅನುದಾನದಿಂದ ಶಾಲೆಯವರು ಪುಸ್ತಕ ಮೇಳದಲ್ಲಿ ತಮ್ಮ ಶಾಲೆಗಳಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಖರೀದಿಸುವರು. ಪುಸ್ತಕ ಮೇಳದಲ್ಲಿ ಭಾಗವಹಿಸುವ ಪ್ರಕಾಶಕರು ಹೆಚ್ಚಿನ ವಿವರಗಳನ್ನು ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸರ್ವ ಶಿಕ್ಷಣ ಅಭಿಯಾನ, ಕೊಪ್ಪಳ ಇವರಿಂದ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top